ರಾಷ್ಟ್ರೀಯ

ಸುಪ್ರೀಂನಿಂದ ಅನರ್ಹ ಶಾಸಕರ ಅರ್ಜಿ ವಿಚಾರಣೆಗೆ ದಿನಾಂಕ ನಿಗದಿ

Pinterest LinkedIn Tumblr


ನವದೆಹಲಿ: ಶಾಸಕ ಸ್ಥಾನದಿಂದ ಅನರ್ಹಗೊಳಿಸಿದ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಆದೇಶ ಪ್ರಶ್ನಿಸಿ 17 ಅನರ್ಹ ಶಾಸಕರು ಸಲ್ಲಿಸಿರುವ ಅರ್ಜಿಯ ವಿಚಾರಣೆಗೆ ಸುಪ್ರೀಂ ಕೋರ್ಟ್​ ದಿನಾಂಕ ನಿಗದಿ ಮಾಡಿದೆ. ನಾಲ್ಕು ಬಾರಿ ತುರ್ತು ವಿಚಾರಣೆ ನಡೆಸಲು ನಿರಾಕರಿಸಿದ್ದ ಕೋರ್ಟ್​ ಕೊನೆಗೂ ದಿನಾಂಕ ನಿಗದಿ ಮಾಡಿದೆ.

ರಮೇಶ್​ ಕುಮಾರ್​ ಅವರು ಆದೇಶ ಹೊರಡಿಸಿದ ತಕ್ಷಣ ಅನರ್ಹ ಶಾಸಕರು ಸುಪ್ರೀಂ ಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ತುರ್ತು ವಿಚಾರಣೆಗೆ ಕೋರ್ಟ್​ ನಿರಾಕರಿಸಿತ್ತು. ಆ ನಂತರ ಸೆ.11ಕ್ಕೆ ಶಾಸಕರ ಅರ್ಜಿ ವಿಚಾರಣೆಗೆ ಪಟ್ಟಿ ನಿಗದಿಯಾಗಿತ್ತು. ಆದರೆ ಅನಿವಾರ್ಯ ಕಾರಣಗಳಿಂದಾಗಿ ವಿಚಾರಣೆಯನ್ನು ಪಟ್ಟಿಯಿಂದ ಅಳಿಸಲಾಗಿತ್ತು. ಸೆ.16ಕ್ಕೆ ನಿಗದಿಯಾಗಿದ್ದ ವಿಚಾರಣೆಯೂ ಅಳಿಸಿಹೋಗಿತ್ತು. ಅರ್ಜಿಯನ್ನು ತುರ್ತು ವಿಚಾರಣೆಗೆ ಪರಿಗಣಿಸಬೇಕು ಎಂದು ವಕೀಲರು ಮೌಖಿಕವಾಗಿ ಕೇಳಿಕೊಂಡರು. ಆದರೆ ನ್ಯಾಯಪೀಠ ಮಾತ್ರ ಈ ಬೇಡಿಕೆಗೆ ಮಹತ್ವ ನೀಡಿರಲಿಲ್ಲ.

ಈಗ ಕೊನೆಗೂ ಸುಪ್ರೀಂಕೋರ್ಟ್​ ಅರ್ಜಿ ವಿಚಾರಣೆಗೆ ದಿನಾಂಕ ನಿಗದಿ ಮಾಡಿದ್ದು, ಮಂಗಳವಾರ ಬೆಳಗ್ಗೆ 10.30 ಕ್ಕೆ ನ್ಯಾ ಎನ್. ವಿ. ರಮಣ ನೇತೃತ್ವದ ತ್ರಿಸದಸ್ಯ ನ್ಯಾಯಪೀಠ ವಿಚಾರಣೆ ನಡೆಸಲಿದೆ. ಈ ಮೂಲಕ ಅರ್ಜಿ ಸಲ್ಲಿಸಿ 45 ದಿನಗಳ ಬಳಿಕ ಅನರ್ಹ ಶಾಸಕರ ಅರ್ಜಿ ವಿಚಾರಣೆ ನಡೆಯುತ್ತಿದೆ. ಸುಪ್ರೀಂ ಕೋರ್ಟ್​ ಶೀಘ್ರ ತೀರ್ಪು ಪ್ರಕಟಿಸುವ ವಿಶ್ವಾಸದಲ್ಲಿ ಅನರ್ಹ ಶಾಸಕರಿದ್ದಾರೆ.

Comments are closed.