ರಾಷ್ಟ್ರೀಯ

ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್’ಗೆ ಆರ್ಥಿಕತೆ ಬಗ್ಗೆ ಎಳ್ಳಷ್ಚೂ ಜ್ಞಾನವಿಲ್ಲ: ಆನಂದ್ ಶರ್ಮಾ

Pinterest LinkedIn Tumblr

ನವದೆಹಲಿ: ಆರ್ಥಿಕ ಸುಧಾರಣೆಗೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಘೋಷಣೆ ಮಾಡಿರುವ ಕ್ರಮಗಳು ಕೇವಲ ಅದನ್ನು ‘ಕಾಸ್ಮೆಟಿಕ್’ (ಅಂದಗೊಳಿಸುವ) ಪ್ರಯತ್ನವಷ್ಚೇ ಎಂದು ಕಾಂಗ್ರೆಸ್ ಟೀಕೆ ಮಾಡಿದೆ.

ಈ ಕುರಿತಂತೆ ಮಾತನಾಡಿರುವ ಕಾಂಗ್ರೆಸ್ ಮುಖಂಡ ಆನಂದ್ ಶರ್ಮಾ, ನಿರ್ಮಲಾ ಸೀತಾರಾಮನ್ ಗೆ ಆರ್ಥಿಕತೆ ಬಗ್ಗೆ ಎಳ್ಳಷ್ಚೂ ಜ್ಞಾನವಿಲ್ಲ ಎಂದೆನಿಸುತ್ತದೆ. ನಿರ್ಮಲಾಗೆ ಆರ್ಥಿಕ ಸಂಕಷ್ಟವನ್ನು ಹೇಗೆ ನಿಭಾಯಿಸಬೇಕು ಎಂಬುದು ತಿಳಿದಂತಿಲ್ಲ ಎಂದು ಟೀಕಿಸಿದ್ದಾರೆ. ನಿರ್ಮಲಾ ಕೈಗೊಂಡಿರುವ ಆರ್ಥಿಕ ಉತ್ತೇಜನ ಕ್ರಮಗಳು ನೈಜ ಸಮಸ್ಯೆಗಳಿಗೆ ಯಾವುದ ರೀತಿಯ ಲಾಭವಾಗುವುದಿಲ್ಲ. ಇನ್ನೂ ಸಮಸ್ಯೆ ಉಲ್ಬಣವಾಗಲಿದೆ ಎಂದು ಹೇಳಿದ್ದಾರೆ.

ಆರ್ಥಿಕ ಸಂಕಷ್ಟದ ಈ ಪರಿಸ್ಥಿತಿಯಲ್ಲಿ ನಾವು ಕೇಂದ್ರ ಸರ್ಕಾರದಿಂದ ಸಾಕಷ್ಚು ನಿರೀಕ್ಷಿಸಿದ್ದೆವು. ಆದರೆ ಅದು ಸುಳ್ಳಾಗಿದೆ. ನಿರ್ಮಲಾ ಕೈಗೊಂಡಿರುವ ಕ್ರಮಗಳು ಕೇವಲ ಕಾಸ್ಮೆಟಿಕ್ (ಅಂದಗೊಳಿಸುವ ಪ್ರಯತ್ನ)ವಾಗಿದ್ದು, ಇದು ಸರ್ಕಾರದ ದುರಹಂಕಾರದ ಪರಮಾವಧಿ ಎಂದು ಅನಂದ್ ಶರ್ಮಾ ಟೀಕಿಸಿದ್ದಾರೆ.

ಇನ್ನು ಆರ್ಥಿಕ ಹಿನ್ನಡೆಯನ್ನು ಪರೋಕ್ಷವಾಗಿ ಒಪ್ಪಿಕೊಂಡಿದ್ದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಇದಕ್ಕಾಗಿ ಸುಮಾರು 70 ಸಾವಿರ ಆರ್ಥಿಕ ಪ್ಯಾಕೇಜ್ ಘೋಷಣೆ ಮಾಡಿದ್ದರು.

Comments are closed.