ರಾಷ್ಟ್ರೀಯ

ಬೈಕ್ ಸವಾರನ ಮಾಸ್ಟರ್ ಪ್ಲಾನ್, ವಿಡಿಯೋ ವೈರಲ್!

Pinterest LinkedIn Tumblr


ವಡೋದರ: ಸಂಚಾರಿ ಪೊಲೀಸರ ಕಿರಿಕಿರಿಯಿಂದ ತಪ್ಪಿಸಿಕೊಳ್ಳುವ ಸಲುವಾಗಿ ಬೈಕ್ ಸವಾರನೊಬ್ಬ ಮಾಸ್ಟರ್ ಪ್ಲಾನ್ ಮಾಡಿದ್ದಾನೆ. ಈ ವಿಡಿಯೋ ಇದೀಗ ವೈರಲ್ ಆಗಿದ್ದು ಬೈಕ್ ಸವಾರ ರಾತ್ರೋರಾತ್ರಿ ಸ್ಟಾರ್ ಆಗಿದ್ದಾನೆ.

50 ವರ್ಷದ ಬೈಕ್ ಸವಾರ ರಾಂಪಾಲ್ ಶಾ ಎಂಬುವರು ಸಂಚಾರಿ ಪೊಲೀಸರು ತಮ್ಮನ್ನು ತಡೆಯದಂತೆ ಮಾಡಲು ಒಂದು ಉಪಾಯ ಮಾಡಿದ್ದಾರೆ. ಅದು ಏನೆಂದರೆ ತಮ್ಮ ಬೈಕ್ ಗೆ ಸಂಬಂಧಪಟ್ಟ ಎಲ್ಲಾ ದಾಖಲೆಗಳನ್ನು ಹೆಲ್ಮೆಟ್ ಗೆ ಅಂಟಿಸಿಕೊಂಡಿದ್ದಾರೆ.

ಇದರಿಂದ ಪೊಲೀಸರು ಪದೇ ಪದೇ ನಿಲ್ಲಿಸುವುದರಿಂದ ತಪ್ಪಿಸಿಕೊಳ್ಳಲು ಈ ಉಪಾಯ ಮಾಡಿದ್ದಾರೆ. ವಿಮೆ ಏಜೆಂಟ್ ಆಗಿರುವ ರಾಂಪಾಲ್ ರಾಯಲ್ ಎನ್ ಫೀಲ್ಡ್ ಬುಲೆಟ್ ಅನ್ನು ಓಡಿಸುತ್ತಾರೆ. ಏಜೆಂಟ್ ಆಗಿರುವುದರಿಂದ ಎಲ್ಲಾ ಕಡೆ ಓಡಾಡುತ್ತಿರಬೇಕಾಗುತ್ತದೆ. ಅದಕ್ಕೆ ಈ ಉಪಾಯ ಮಾಡಿದೆ ಅಂತ ರಾಂಪಾಲ್ ಹೇಳಿದ್ದಾರೆ.

Comments are closed.