ರಾಷ್ಟ್ರೀಯ

ಜೈಲಿನಲ್ಲಿ ತರಕಾರಿ ಬೆಳೆಯುವ ಮೂಲಕ 18 ಸಾವಿರ ರೂ. ಗಳಿಸಿದ ಅತ್ಯಾಚಾರಿ ರಾಮ್ ರಹೀಂ ಸಿಂಗ್

Pinterest LinkedIn Tumblr

ರೋಹ್ಟಕ್: ಅತ್ಯಾಚಾರ ಪ್ರಕರಣದಲ್ಲಿ ಬರೋಬ್ಬರಿ 20 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿರುವ ಡೇರಾ ಸಚ್ಚಾ ಸೌಧದ ಮುಖ್ಯಸ್ಥ ಗುರ್ಮಿತ್ ರಾಮ್ ರಹೀಂ ಸಿಂಗ್, ಸುನಾರಿಯ ಜೈಲು ಆವರಣದಲ್ಲಿ ತರಕಾರಿ ಬೆಳೆಸುವ ಮೂಲಕ 18 ಸಾವಿರ ರೂಪಾಯಿ ಸಂಪಾದಿಸಿದ್ದಾರೆ. ಅದಾಗ್ಯೂ ಇದನ್ನು ಸಂಪಾದಿಸಲು ಆರೋಪಿ ರಾಮ್ ರಹೀಂ ಸಿಂಗ್, 15 ಕೆಜೆ ತೂಕ ಕಳೆದುಕೊಂಡಿದ್ದಾರೆ.

ಕಳೆದ ಎರಡು ವರ್ಷಗಳ ಹಿಂದೆ ಅತ್ಯಾಚಾರ ಪ್ರಕರಣದಲ್ಲಿ ದೋಷಿ ಎಂದು ಘೋಷಿತನಾಗಿರುವ ಸ್ವಘೋಷಿತ ದೇವಮಾನವ ರಾಮ್ ರಹೀಂ ಸಿಂಗ್‌ಗೆ ವಿಶೇಷ ನ್ಯಾಯಾಲಯದ ನ್ಯಾಯಾಧೀಶರು ರೋಹ್ಟಕ್ ಜೈಲಿನಲ್ಲಿಯೇ 20 ವರ್ಷ ಜೈಲು ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿದ್ದರು. ಆತನ ಮೇಲೆ ಕಣ್ಗಾವಲಿಡಲು ಜೈಲಿನಲ್ಲಿ ಪ್ಯಾರಾ ಮಿಲಿಟರಿ ಭದ್ರತೆ ನಿಯೋಜಿಸಲಾಗಿದೆ.

ಜೈಲು ಆವರಣದಲ್ಲಿ ತರಕಾರಿ ಬೆಳೆದ

ಅತ್ಯಾಚಾರ ಆರೋಪ ಸಾಬೀತಾಗಿ ಜೈಲು ಪಾಲಾಗಿದ್ದ ಆರಂಭದಲ್ಲಿ ಗುರುಮೀತ್ ರಾಮ್ ರಹೀಂ ಸಿಂಗ್ ಆಘಾತಕ್ಕೊಳಗಾಗಿದ್ದು, ಒಂಟಿತನ ಆತನನ್ನು ಕಾಡುತ್ತಿತ್ತು. ಕ್ರಮೇಣ ಸುಧಾರಿಸಿಕೊಂಡ ಆತ, ತರಕಾರಿ ಬೆಳೆಯುವಲ್ಲಿ ನಿರತನಾಗಿದ್ದಾನೆ. ಸದ್ಯ ಇದರಿಂದ 18 ಸಾವಿರ ರೂಪಾಯಿ ಹಣ ಸಂಪಾದಿಸಿದ್ದಾನೆ. ಇದಕ್ಕಾಗಿ ಆತ 15 ಕೆಜಿಯಷ್ಟು ತೂಕ ಕಳೆದುಕೊಂಡಿದ್ದಾನೆಂದು ಜೈಲಿನ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಅತ್ಯಾಚಾರ ಅಪರಾಧಿ ಸ್ವಘೋಷಿತ ದೇವಮಾನವನನ್ನು ಸಾಮಾನ್ಯ ಕೈದಿಗಳಿಂದ ದೂರದಲ್ಲಿರುವ ಪ್ರತ್ಯೇಕ ಜೈಲಿನಲ್ಲಿ ಇರಿಸಲಾಗಿದ್ದು, ಇಲ್ಲಿ 24 ಗಂಟೆಗಳ ಕಾಲ ಮೇಲ್ವಿಚಾರಣೆ ಮಾಡಲಾಗುತ್ತದೆ.

Comments are closed.