ರಾಷ್ಟ್ರೀಯ

ಪಂಜಾಬಿ ಯೋಧರನ್ನು ಕೆಣಕಿ ಟ್ವೀಟ್ ಮಾಡಿದ್ದ ಪಾಕ್ ಸಚಿವನಿಗೆ ಪಂಜಾಬ್ ಮುಖ್ಯಮಂತ್ರಿ ಖಡಕ್ ಎಚ್ಚರಿಕೆ!

Pinterest LinkedIn Tumblr


ನವದೆಹಲಿ: ಭಾರತೀಯ ಸೇನೆಯಲ್ಲಿರುವ ಪಂಜಾಬಿ ಯೋಧರು ಕಾಶ್ಮಿರದಲ್ಲಿ ಕಾರ್ಯನಿರ್ವಹಿಸಲು ನಿರಾಕರಿಸಬೇಕು ಎಂದು ಪಾಕಿಸ್ತಾನ ಸಚಿವ ಫವಾದ್ ಚೌಧರಿ ಹೇಳಿಕೆ ಇದೀಗ ತೀವ್ರ ಆಕ್ರೋಶಕ್ಕೆ ಎಡೆಮಾಡಿಕೊಟ್ಟಿದೆ. ಪಾಕ್ ಸಚಿವರ ಹೇಳಿಕೆಗೆ ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ಕೂಡಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.

“ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಎಲ್ಲಾ ಪಂಜಾಬಿ ಯೋಧರಲ್ಲಿ ನಾನು ಮನವಿ ಮಾಡಿಕೊಳ್ಳುವುದು ಏನೆಂದರೆ ಜಮ್ಮು-ಕಾಶ್ಮೀರದಲ್ಲಿ ಸೇವೆ ಸಲ್ಲಿಸಲು ನಿರಾಕರಿಸಬೇಕು ಎಂದು” ಫವಾದ್ ಟ್ವೀಟರ್ ನಲ್ಲಿ ಹೇಳಿದ್ದರು.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸೇನೆಯಲ್ಲಿ ಸೇವೆ ಸಲ್ಲಿಸಿರುವ, ಪಂಜಾಬ್ ನ ಮುಖ್ಯಮಂತ್ರಿಯೂ ಆಗಿರುವ ಕ್ಯಾಪ್ಟನ್ ಅಮರೀಂದರ್ ಸಿಂಗ್, ಭಾರತದ ಆಂತರಿಕ ವಿಚಾರದಲ್ಲಿ ಮೂಗು ತೂರಿಸಿದರೆ ಜಾಗ್ರತೆ ಎಂದು ಎಚ್ಚರಿಕೆಯ ಸಂದೇಶವನ್ನು ರವಾನಿಸಿದ್ದಾರೆ.

ಫವಾದ್ ಮನವಿ ಭಾರತೀಯ ಸೇನೆಯ ಯಾವುದೇ ಯೋಧರ ಮೇಲೆ ಪರಿಣಾಮ ಬೀರುವುದಿಲ್ಲ. ನಮ್ಮ ಸೇನೆ ಶಿಸ್ತಿಗೆ ಮತ್ತು ದೇಶಪ್ರೇಮಕ್ಕೆ ಬದ್ಧವಾಗಿದೆ ಎಂದು ಪಾಕ್ ಸಚಿವನಿಗೆ ಕ್ಯಾಪ್ಟನ್ ತಿರುಗೇಟು ನೀಡಿದ್ದಾರೆ.

Comments are closed.