ರಾಷ್ಟ್ರೀಯ

ಕಾಶ್ಮೀರದಲ್ಲಿ ಈಗ ಒಂದೇ ಒಂದು ಗುಂಡಿನ ಶಬ್ಧ ಕೇಳದೇ ಶಾಂತವಾಗಿದೆ

Pinterest LinkedIn Tumblr


ಶ್ರೀನಗರ: ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದತಿ ನಂತರ ಕಣಿವೆ ಉದ್ರಿಕ್ತ ಸ್ಥಿತಿಯಲ್ಲಿದೆ ಎಂಬ ಮಾಧ್ಯಮ ವರದಿಯನ್ನು ಪೊಲೀಸ್ ಮೂಲಗಳು ತಳ್ಳಿಹಾಕಿದ್ದು, ಕಳೆದೊಂದು ವಾರದಿಂದ ಜಮ್ಮು –ಕಾಶ್ಮೀರದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ನಡೆದಿಲ್ಲ ಎಂದು ಸ್ಪಷ್ಟಪಡಿಸಿವೆ.

ಕಾಶ್ಮೀರ ಕಣಿವೆಯಲ್ಲಿ ಗುಂಡಿನ ಚಕಮಕಿ ನಡೆದಿದೆ ಎಂಬ ವರದಿಗಳು ಕೆಲವು ಮಾಧ್ಯಮಗಳಲ್ಲಿ ಕಾಣಿಸಿಕೊಂಡ ಹಿನ್ನಲೆಯಲ್ಲಿ ಪೊಲೀಸ್‌ ಮೂಲಗಳು ಈ ಸ್ಪಷ್ಟನೆ ನೀಡಿದೆ.

“ಕಾಶ್ಮೀರ ಕಣಿವೆ ಶಾಂತವಾಗಿದೆ , ಜನರು ಸೇನೆಯೊಂದಿಗೆ ಸಹಕಾರ ನೀಡುತ್ತಿದ್ದಾರೆ. ಯಾವುದೇ ಅಹಿತಕರ ಘಟನೆಗಳು ನಡೆದಿಲ್ಲ. ಕೆಲವು ನಿರ್ಭಂಧಗಳನ್ನು ನಿಧಾನವಾಗಿ ಸಡಿಲಿಸಲಾಗುತ್ತಿದೆ. ಒಂದು ವಾರದಿಂದ ಒಂದು ಬಾರಿ ಕೂಡಾ ಗುಂಡಿನ ಸದ್ದು ಕೇಳಿಸಿಲ್ಲ ಎಂದು ಪೋಲಿಸ್ ಮೂಲಗಳ ಖಚಿತಪಡಿಸಿವೆ.

Comments are closed.