ರಾಷ್ಟ್ರೀಯ

ಸಂಬಂಧಿಕನ ಪತ್ನಿ ಜತೆ ಅನೈತಿಕ ಸಂಬಂಧ; ಏಟು ತಿಂದು ಮೃತಪಟ್ಟ ಕಾಮುಕ!

Pinterest LinkedIn Tumblr


ನವದೆಹಲಿ (ಆ.9): ದೆಹಲಿಯಲ್ಲಿ ಇತ್ತೀಚೆಗೆ ವ್ಯಕ್ತಿಯೋರ್ವ ವಿದ್ಯುತ್​ ಆಘಾತದಿಂದ ಮೃತಪಟ್ಟಿದ್ದ. ಇದು ಆಕಸ್ಮಿಕ ಸಾವು ಎಂದು ಘೋಷಣೆ ಮಾಡಲಾಗಿತ್ತು. ಆದರೆ, ಮರಣೋತ್ತರ ಪರೀಕ್ಷೆಯ ವರದಿ ಬಂದಾಗ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿತ್ತು. ಇದು ಆಕಸ್ಮಿಕ ಸಾವಲ್ಲ ಕೊಲೆ ಎಂದು ಪೊಲೀಸರಿಗೆ ಗೊತ್ತಾಗಿತ್ತು.

ಪಶ್ಚಿಮ ದೆಹಲಿಯ ಪಂಜಾಬ್​ ಭಾಗ್​ ನಿವಾಸಿ ಶಕೀಲ್​ ಅಹ್ಮದ್​ ಮೃತ ವ್ಯಕ್ತಿ. ಸಂಸ್ಥೆಯೊಂದರಲ್ಲಿ ಈತ ಮೆಕ್ಯಾನಿಕ್​ ಆಗಿ ಕೆಲಸ ಮಾಡುತ್ತಿದ್ದ. ಈತನ ಸಂಬಂಧಿ ನೌಶದ್​​ ಆಲಮ್​ ಕೂಡ ಅಲ್ಲಿಯೇ ಕಾರ್ಯ ನಿರ್ವಹಿಸುತ್ತಿದ್ದ. ಇತ್ತೀಚೆಗೆ ಶಕೀಲ್ ಮೃತಪಟ್ಟಿದ್ದ. ಇಸ್ತ್ರಿ ಪೆಟ್ಟಿಗೆ ವೈಯರ್​ ತಗುಲಿ ಆತ ಮೃತಪಟ್ಟಿದ್ದ ಎಂದು ನೌಶದ್​ ಪೊಲೀಸರಿಗೆ ಹೇಳಿದ್ದ.

ಆದರೆ, ಮರಣೋತ್ತರ ಪರೀಕ್ಷೆಯಲ್ಲಿ ತಲೆಗೆ ಏಟು ಬಿದ್ದಿರುವುದರಿಂದ ಶಕೀಲ್​ ಮೃತಪಟ್ಟಿದ್ದ ಎಂದು ವರದಿ ಬಂದಿತ್ತು. ಈ ಬಗ್ಗೆ ಪೊಲೀಸರಿಗೆ ಅನುಮಾನ ಕಾಡಿತ್ತು. ಹಾಗಾಗಿ ನೌಶದ್​​ನನ್ನು ಪೊಲೀಸರು ವಿಚಾರಣೆ ನಡೆಸಿದ್ದರು. ಈ ವೇಳೆ ನಿಜಾಂಶ ಬೆಳಕಿಗೆ ಬಂದಿದೆ.

ಹೆಂಡತಿ ಜೊತೆ ಶಕೀಲ್​ ಸಂಬಂಧ ಹೊಂದಿರುವ ವಿಚಾರ ನೌಶದ್​ಗೆ ಗೊತ್ತಾಗಿತ್ತು. ಈ ಬಗ್ಗೆ ಶಕೀಲ್​ನಲ್ಲಿ ಕೇಳಿದ್ದರೆ ಆತ ಇದು ಸುಳ್ಳು ಎಂದು ವಾದಿಸಿದ್ದ. ಇದರಿಂದ ಕುಪಿತಗೊಂಡ ನೌಶದ್​ ಸುತ್ತಿಗೆಯಿಂದ ಶಕೀಲ್​ನನ್ನು ಹೊಡೆದು ಸಾಯಿಸಿದ್ದ. ನಂತರ ಸುಳ್ಳು ಕಥೆ ಕಟ್ಟಿದ್ದ.

Comments are closed.