ರಾಷ್ಟ್ರೀಯ

ಸುಷ್ಮಾ ಸ್ವರಾಜ್ ಅವರ ಎಂಟು ದಾಖಲೆಗಳ ಕಿರು ಪರಿಚಯ!

Pinterest LinkedIn Tumblr


ನವದೆಹಲಿ: ಹಿರಿಯ ರಾಜಕಾರಣಿ ಸುಷ್ಮಾ ಸ್ವರಾಜ್ ಅವರ ಅಕಾಲಿಕ ಮರಣದಿಂದ ಆಘಾತ ಉಂಟಾಗಿದೆ. ವಿದೇಶಾಂಗ ಸಚಿವರಾಗಿ ಅತ್ಯುತ್ತಮ ಸೇವೆ ಸಲ್ಲಿಸಿದ ಪ್ರೀತಿಯ ನಾಯಕಿ ಮಂಗಳವಾರ ರಾತ್ರಿ ಹೃದಯಾಘಾತದಿಂದ ಇಹಲೋಕ ತ್ಯಜಿಸಿದ್ದಾರೆ.

“ಭಾರತೀಯ ರಾಜಕೀಯದಲ್ಲಿ ಒಂದು ಅದ್ಭುತ ಅಧ್ಯಾಯವು ಕೊನೆಗೊಂಡಿದೆ” ಎಂದು ಪ್ರಧಾನಿ ನರೇಂದ್ರ ಮೋದಿ ಸುಷ್ಮಾ ಸ್ವರಾಜ್ ಅವರ ನಿಧನದ ಹಿನ್ನೆಲೆಯಲ್ಲಿ ಟ್ವೀಟ್ ಮಾಡಿದ್ದಾರೆ.

ನಾಲ್ಕು ದಶಕಗಳವರೆಗಿನ ಅವರ ರಾಜಕೀಯ ಜೀವನದಲ್ಲಿ ಬಿಜೆಪಿ ಹಿರಿಯ ನಾಯ್ಕ ಹಲವಾರು ವಿಶಿಷ್ಟ ದಾಖಲೆಗಳನ್ನು ನಿರ್ಮಿಸಿದ್ದಾರೆ. ಆ ದಾಖಲೆಗಳ ಒಂದು ಕಿರು ಪರಿಚಯ ನೋಡೋಣ:

1. ಕಿರಿಯ ಕ್ಯಾಬಿನೆಟ್ ಮಂತ್ರಿ:
ಸುಷ್ಮಾ ಸ್ವರಾಜ್ 1977 ರಲ್ಲಿ 25 ನೇ ವಯಸ್ಸಿನಲ್ಲಿ, ಕಿರಿಯ ಕ್ಯಾಬಿನೆಟ್ ಮಂತ್ರಿಯಾದರು. ಅವರು ಹರಿಯಾಣ ಕ್ಯಾಬಿನೆಟ್ನಲ್ಲಿ ಶಿಕ್ಷಣದ ಖಾತೆಯ ಸಚಿವರಾಗಿದ್ದರು.

2. ದೆಹಲಿಯ ಮೊದಲ ಮಹಿಳಾ ಮುಖ್ಯಮಂತ್ರಿ:
ಸುಷ್ಮಾ ಸ್ವರಾಜ್ ದೆಹಲಿಯ ಮೊದಲ ಮಹಿಳಾ ಮುಖ್ಯಮಂತ್ರಿ ಎಂಬ ಖ್ಯಾತಿಗೆ ಪಾತ್ರರಾದವರು. ಅವರ ಸಂಕ್ಷಿಪ್ತ ಅಧಿಕಾರಾವಧಿಯು ಅಕ್ಟೋಬರ್ 13, 1998 ರಿಂದ ಡಿಸೆಂಬರ್ 3, 1998 ರವರೆಗೆ ಇತ್ತು.

3. ಸಂಸತ್ತಿನಲ್ಲಿ ಮೊದಲ ಮಹಿಳಾ ವಿರೋಧ ಪಕ್ಷದ ನಾಯಕಿ:
ಎಲ್ಲಾ ಅಡೆತಡೆಗಳನ್ನು ಮುರಿದ ಅವರು, 2009 ರಲ್ಲಿ ಸಂಸತ್ತಿನಲ್ಲಿ ಮೊದಲ ಮಹಿಳಾ ವಿರೋಧ ಪಕ್ಷದ ನಾಯಕಿ ಆಗಿ ಆಯ್ಕೆಯಾದರು.

4. ರಾಜಕೀಯ ಪಕ್ಷದ ಮೊದಲ ಮಹಿಳಾ ವಕ್ತಾರೆ:
ಭಾರತೀಯ ಜನತಾ ಪಕ್ಷ ಅವರನ್ನು ರಾಷ್ಟ್ರೀಯ ವಕ್ತಾರರನ್ನಾಗಿ ನೇಮಿಸಿದ ನಂತರ ಅವರು ರಾಜಕೀಯ ಪಕ್ಷದ ಮೊದಲ ಮಹಿಳಾ ವಕ್ತಾರರಾದರು.

5. ಅತ್ಯುತ್ತಮ ಸಂಸದೀಯ ಪಟು ಪ್ರಶಸ್ತಿ ಸ್ವೀಕರಿಸಿದ ಮೊದಲ ಮಹಿಳೆ:
2004 ರಲ್ಲಿ, ಸ್ವರಾಜ್ ಅವರ ಒಟ್ಟಾರೆ ಕೊಡುಗೆಗಾಗಿ ಅತ್ಯುತ್ತಮ ಸಂಸದೀಯ ಪಟು ಪ್ರಶಸ್ತಿಯನ್ನು ಪಡೆದರು. ಈ ಮೂಲಕ ಅತ್ಯುತ್ತಮ ಸಂಸದೀಯ ಪಟು ಪ್ರಶಸ್ತಿ ಸ್ವೀಕರಿಸಿದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಭಾಜಿನರಾದರು.

6. ಮೊದಲ ಪೂರ್ಣಾವಧಿಯ ಮಹಿಳಾ ವಿದೇಶಾಂಗ ಸಚಿವೆ:
ಮೋದಿ ಸರ್ಕಾರದ ಮೊದಲ ಅಧಿಕಾರಾವಧಿಯಲ್ಲಿ, ಸುಷ್ಮಾ ಸ್ವರಾಜ್ ಅವರು 2014 ರ ಮೇ ನಿಂದ 2019 ಮೇ ವರೆಗೆ ಮೊದಲ ಪೂರ್ಣ ಸಮಯದ ವಿದೇಶಾಂಗ ಸಚಿವರಾಗಿ ಸೇವೆ ಸಲ್ಲಿಸಿದರು.

7. ಟ್ವಿಟ್ಟರ್ನಲ್ಲಿ ಹೆಚ್ಚಿನ ಫಾಲ್ಲೋವರ್ಸ್ ಹೊಂದಿರುವ ಮಹಿಳಾ ರಾಜಕಾರಣಿ:
2018 ರಲ್ಲಿ, ಸ್ವರಾಜ್ ಟ್ವಿಟ್ಟರ್ನಲ್ಲಿ 11 ಮಿಲಿಯನ್ ಫಾಲೋವರ್ಸ್ ಹೊಂದಿರುವ ಮಹಿಳಾ ನಾಯಕರಾಗಿದ್ದಾರೆ. ಮಂಗಳವಾರ ರಾತ್ರಿ ಸುಷ್ಮಾ ಸಾವಿಗೂ ಮೊದಲು, ಅವರು ಟ್ವಿಟ್ಟರ್ನಲ್ಲಿ 12 ಮಿಲಿಯನ್ ಅನುಯಾಯಿಗಳನ್ನು ಹೊಂದಿದ್ದರು.

8. ಇಸ್ಲಾಮಿಕ್ ಸಹಕಾರ ಸಂಘಟನೆಯನ್ನು (ಒಐಸಿ) ಉದ್ದೇಶಿಸಿ ಭಾಷಣ ಮಾಡಿದ ಮೊದಲ ಭಾರತೀಯ ವ್ಯಕ್ತಿ:
ಮಾರ್ಚ್ 2019 ರಲ್ಲಿ ಗೌರವಾನ್ವಿತ ಅತಿಥಿಯಾಗಿ ಇಸ್ಲಾಮಿಕ್ ಸಹಕಾರ ಸಂಘಟನೆಯ (ಒಐಸಿ) ಸಭೆಯ 46 ನೇ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದ ಮೊದಲ ಭಾರತೀಯರು ಸುಷ್ಮಾ ಸ್ವರಾಜ್. ಇದನ್ನು ಭಾರತಕ್ಕೆ ದೊಡ್ಡ ರಾಜತಾಂತ್ರಿಕ ಗೆಲುವು ಎಂದು ಪರಿಗಣಿಸಲಾಯಿತು.

Comments are closed.