ರಾಷ್ಟ್ರೀಯ

ಸುಷ್ಮಾ ಸ್ವರಾಜ್ ನಿಧನಕ್ಕೆ ಬಾಲಿವುಡ್​ ಸ್ಟಾರ್​ಗಳ ಕಂಬನಿ

Pinterest LinkedIn Tumblr


ನವದೆಹಲಿ: ಮಾಜಿ ಕೇಂದ್ರ ಸಚಿವೆ, ಬಿಜೆಪಿಯ ಮಹಿಳಾ ಹಿರಿಯ ನಾಯಕಿ ಸುಷ್ಮಾ ಸ್ವರಾಜ್ ಅವರು ಮಂಗಳವಾರ ತಡರಾತ್ರಿ ನವದೆಹಲಿಯ ಎಐಐಎಂಎಸ್(ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಅಫ್ ಮೆಡಿಕಲ್ ಸೈನ್ಸಸ್) ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ಅವರು ನಿಧನವಾದರು.

ಸುಷ್ಮಾ ಸ್ವರಾಜ್ ಅವರ ಸಾವಿನ ಸುದ್ದಿ ಕೇಳುತ್ತಿದ್ದಂತೆ ಹಲವು ರಾಜಕೀಯ ಗಣ್ಯರು ಸೇರಿದಂತೆ ಬಾಲಿವುಡ್​ ಸ್ಟಾರ್​ ನಟ-ನಟಿಯರು ಕೂಡ ಅವರಿಗೆ ಸಂತಾಪ ಸೂಚಿಸಿದ್ದಾರೆ.

ಇದು ಅರಗಿಸಿಕೊಳ್ಳಲಾಗದ ಸುದ್ದಿಯಾಗಿದೆ. ಪ್ರೇರಣೆಭರಿತ ರಾಜಕಾರಣಿ, ಸ್ನೇಹದ ವ್ಯಕ್ತಿತ್ವವುಳ್ಳವರು ಅದ್ಭುತ ನಾಯಕಿ- ಅಮಿತ್​ ಬಚ್ಚನ್​

ಅವರ ಸಾವಿನ ಸುದ್ದಿ ಕೇಳಿ ಬಹಳ ದುಃಖವಾಗುತ್ತಿದೆ. ಅವರೊಬ್ಬ ಡೈನಾಮಿಕ ನಾಯಕಿಯಾದ್ದರು. ಅವರ ಅಗಲಿಕೆಯನ್ನು ನಾವು ಖಂಡಿತವಾಗಿ ಸಹಿಸಲಾಗದು ಅದು ನಮ್ಮೆಲ್ಲರಿಗಾದ ನಷ್ಟವಾಗಿದೆ. ಅವರ ಕುಟುಂಬಕದವರಿಗೆ ದುಃಖಭರಿಸುವ ಶಕ್ತಿ ಆ ದೇವರು ನೀಡಲಿ ಎಂದು ಪ್ರಾರ್ಥನೆ ಮಾಡುತ್ತೇನೆ.

ಭರವಾದ ಹೃದಯದಿಂದ ನಾವು ಕೆಚ್ಚೆದೆಯ ನಾಯಕಿ ಮತ್ತು ಅಸಾಧಾರಣ ಮಹಿಳೆಗೆ ವಿದಾಯ ಹೇಳಲು ಬಯಸುತ್ತೇವೆ. ಆಕೆಯ ನಾಯಕತ್ವ ಮತ್ತು ಬುದ್ಧಿವಂತಿಕೆಯನ್ನು ಮರೆಯಲಾಗದು ಅವರ ಗುಣವನ್ನು ನಾವು ನಮ್ಮ ಹೃದಯದಲ್ಲಿ ಜೀವಂತವಾಗಿರಿಸಿಕೊಳ್ಳುವುದರಿಂದ ಆಕೆಯ ನಷ್ಟವನ್ನು ಇಡೀ ದೇಶವು ಆಳವಾಗಿ ಅನುಭವಿಸುತ್ತದೆ.

Comments are closed.