ರಾಷ್ಟ್ರೀಯ

ಬಿಜೆಪಿ ಪಾಲಿಗೆ ಮುಸ್ಲಿಮರು ಪ್ರತ್ಯೇಕತಾವಾದಿಗಳು; ಫಾರೂಕ್ ಅಬ್ದುಲ್ಲಾ

Pinterest LinkedIn Tumblr


ನವದೆಹಲಿ(ಆಗಸ್ಟ್​​​.06): ಬಿಜೆಪಿ ಪಾಲಿಗೆ ಮುಸ್ಲಿಮರು ಪ್ರತ್ಯೇಕತಾವಾದಿಗಳು ಎಂದು ಮಾಜಿ ಸಿಎಂ ಫಾರೂಕ್ ಅಬ್ದುಲ್ಲಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ. “ನನಗೆ ರಕ್ತದೊತ್ತಡದ ಸಮಸ್ಯೆಯಿದೆ. ನಾನು ಎರಡು ದಿನಿಂದ ಗೃಹಬಂಧನದಲ್ಲಿ ಇದ್ದೇನೆ. ಯಾರು ನನ್ನ ಮನೆಯತ್ತ ಬರಲು ಪೊಲೀಸರು ಬಿಡುತ್ತಿಲ್ಲ. ಇಲ್ಲೇನೂ ನಡೆಯುತ್ತಿದೆ ಎಂಬದು ಗೊತ್ತಾಗುತ್ತಿಲ್ಲ. ಸದ್ಯವೀಗ ನಾವೇನು ಮಾತಾಡಿದರು ಹುರುಳಿಲ್ಲದ ಆರೋಪ ಎಂದಾಗುತ್ತದೆ” ಎಂದು ತಮ್ಮ ಅಳಲು ತೋಡಿಕೊಂಡಿದ್ದಾರೆ.

ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿದ್ದೇನೆ. ಕಾಶ್ಮೀರದಲ್ಲಿ ಎಲ್ಲವೂ ಸರಿಯಾಗಿ ನಡೆಯುತ್ತಿದೆ ಎಂದು ಚರ್ಚಿಸಿದ್ದೇವೆ. ಸಾವಿರಾರು ಅಮರನಾಥ ಯಾತ್ರಾರ್ಥಿಗಳು ಹಾಗೂ ಪ್ರವಾಸಿಗರು ಕಾಶ್ಮೀರಕ್ಕೆ ಬಂದೋಗುತ್ತಿದ್ದಾರೆ. ಇಲ್ಲಿ ಯಾವುದೇ ಸಮಸ್ಯೆಯಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿಯವರ ಗಮನಕ್ಕೆ ತಂದಿದ್ದೇನೆ. ಆದರೂ, ಕಾಶ್ಮೀರದ ವಿಶೇಷ ಸ್ಥಾನಮಾನ ನೀಡುತ್ತಿದ್ದ 370ನೇ ವಿಧಿಯನ್ನು ರದ್ದುಗೊಳಿಸಿ. ದಿಢೀರ್​​​ ರಾತ್ರೋರಾತ್ರಿ ಹೆಚ್ಚುವರಿ ಭದ್ರತೆ ನಿಯೋಜನೆ ಮಾಡಿ, ನಮ್ಮನ್ನು ಗೃಹಬಂಧನದಲ್ಲಿ ಇಡಲಾಗಿದೆ. ಹೀಗ್ಯಾಕೇ ಕೇಂದ್ರ ಸರ್ಕಾರ ಮಾಡುತ್ತಿದೆ ಎಂದು ಗೊತ್ತಾಗುತ್ತಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ವಿರುದ್ಧ ಮಾಜಿ ಸಿಎಂ ಫಾರೂಕ್​​ ಅಬ್ದುಲ್ಲಾ ಕಿಡಿಕಾರಿದ್ದಾರೆ.

ನನ್ನನ್ನು ಸಂಪೂರ್ಣ ಬಂಧನಕ್ಕೀಡು ಮಾಡಲಾಗಿದೆ. ನಾವು ಮುಸ್ಲಿಮರು ಬಿಜೆಪಿಯವರಿಗೆ ಪ್ರತೇಕವಾದಿಗಳಾಗಿ ಕಾಣುತ್ತೇವೆ. ಇವರು ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಕೇಂದ್ರದ ಸರ್ಕಾರದ ನಡೆಯನ್ನು ಖಂಡಿಸಿದ್ದಾರೆ ಫಾರೂಕ್​​ ಅಬ್ದುಲ್ಲಾ.

ಜಮ್ಮು-ಕಾಶ್ಮೀರದಲ್ಲಿ ಗಂಟೆಗೊಂದು ಮಹತ್ವದ ಬೆಳವಣಿಗೆಗಳು ನಡೆಯುತ್ತಿವೆ. ಕಣಿವೆ ರಾಜ್ಯಕ್ಕೆ ಈಗಾಗಲೇ ಬಿಗಿ ಭದ್ರತೆ ಒದಗಿಸಲಾಗಿದೆ. ಈ ಮಧ್ಯೆ ಫಾರೂಕ್​​ ಅಬ್ದುಲ್ಲಾ, ಒಮರ್​ ಅಬ್ದುಲ್ಲಾ ಹಾಗೂ ಮೆಹಬೂಬಾ ಮುಫ್ತಿಯನ್ನು ವಶಕ್ಕೆ ಪಡೆದು ಗೃಹ ಬಂಧನದಲ್ಲಿ ಇಡಲಾಗಿದೆ. ಜಮ್ಮು-ಕಾಶ್ಮೀರಕ್ಕೆ ತೆರಳಿದ್ದ ಪ್ರವಾಸಿಗರನ್ನು ಹಿಂಪಡೆಯಲಾಗಿದೆ.

ಇನ್ನು ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಆಗಸ್ಟ್​ 15ರವರೆಗೆ ಇಂಟರ್​​ನೆಟ್​ ಸೇವೆಯನ್ನು ಸಂಪೂರ್ಣವಾಗಿ ರದ್ದು ಮಾಡಲಾಗಿದೆ. ಈಗಾಗಲೇ ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವ ಆರ್ಟಿಕಲ್ 370 ಮತ್ತು 35ಎ ಅನ್ನು ರದ್ದುಗೊಳಿಸಿ ಕೇಂದ್ರ ಸರ್ಕಾ ಆದೇಶ ಹೊರಡಿಸಿದೆ.

Comments are closed.