ಅಂತರಾಷ್ಟ್ರೀಯ

ಲಡಾಖ್ ಕೇಂದ್ರಾಡಳಿತ ಪ್ರದೇಶ ವಿರೋಧಿಸಿದ ಚೀನಾಗೆ ಇಂಡಿಯಾ ತಿರುಗೇಟು

Pinterest LinkedIn Tumblr


ನವದೆಹಲಿ: ಇದು ನಮ್ಮ ಆಂತರಿಕ ವಿಷಯ ಎಂದು ಲಡಾಖ್​ ಅನ್ನು ಕೇಂದ್ರಾಡಳಿತ ಪ್ರದೇಶ ಮಾಡಿದ ಕೇಂದ್ರ ಸರ್ಕಾರದ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿದ ಚೀನಾಗೆ ಮಂಗಳವಾರ ಭಾರತ ತಿರುಗೇಟು ನೀಡಿದೆ.

ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರವೀಶ್​ ಕುಮಾರ್,​ ‘ಭಾರತ ಬೇರೆ ಯಾವುದೇ ರಾಷ್ಟ್ರಗಳ ಆಂತರಿಕ ವಿಷಯದ ಕುರಿತು ಮಾತನಾಡುವುದಿಲ್ಲ, ಇದೇ ವಿಧದಲ್ಲಿ ಇತರ ರಾಷ್ಟ್ರಗಳೂ ಭಾರತದ ಆಂತರಿಕ ವಿಷಯದ ಕುರಿತು ಮಾತನಾಡಬಾರದು ಎಂದು ಬಯಸುತ್ತದೆ ಎಂದು ಖಡಕ್​ ಪ್ರತಿಕ್ರಿಯೆ ನೀಡಿದ್ದಾರೆ.

ಕೇಂದ್ರ ಸರ್ಕಾರ ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನ ಹಿಂಪಡೆದು ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್​ ಅನ್ನು ಕೇಂದ್ರಾಡಳಿತ ಪ್ರದೇಶಗಳಾಗಿ ಘೋಷಿಸಿದೆ.

ಭಾರತವು ಲಡಾಖ್ ಅನ್ನು ಕೇಂದ್ರಾಡಳಿತ ಪ್ರದೇಶವೆಂದು ಘೋಷಿಸುವುದನ್ನು ಚೀನಾ ಆಕ್ಷೇಪಿಸಿದ್ದು ಈ ಕ್ರಮವು ತನ್ನ “ಪ್ರಾದೇಶಿಕ ಸಾರ್ವಭೌಮತ್ವ” ಕ್ಕೆ ವಿರುದ್ಧವಾಗಿದೆ ಮತ್ತು ಭಾರತವು “ಎಚ್ಚರಿಕೆ ವಹಿಸುವಂತೆ” ಕೇಳಿದೆ. ಅಲ್ಲದೆ ಭಾರತವು ಪ್ರಸ್ತುತ ಗಡಿ ಸಮಸ್ಯೆಯನ್ನು ಇನ್ನಷ್ಟು “ಸಂಕೀರ್ಣಗೊಳಿಸಬಾರದು” ಎಂದು ಹೇಳಿದೆ.

Comments are closed.