ರಾಷ್ಟ್ರೀಯ

ಪುತ್ರ-ಸೊಸೆ ಮೇಲಿನ ಕೋಪಕ್ಕೆ ಸಮಸ್ತ ಆಸ್ತಿಯನ್ನು ಸರ್ಕಾರಕ್ಕೆ ಬರೆದ!!

Pinterest LinkedIn Tumblr


ವೃದ್ಧಾಪ್ಯದಲ್ಲಿ ತಂದೆ-ತಾಯಿಯನ್ನು ಮಕ್ಕಳು ಸರಿಯಾಗಿ ನೋಡಿಕೊಳ್ಳದೇ ಇರೋ ಪ್ರಕರಣಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿದೆ. ಹೀಗೆ ತನ್ನನ್ನು ಕಡೆಗಣಿಸಿದ ಮಗ ಹಾಗೂ ಸೊಸೆಗೆ ಪಾಠ ಕಲಿಸಲು ವೃದ್ಧ ತಂದೆಯೊಬ್ಬ ತನ್ನ ಸಮಸ್ತ ಆಸ್ತಿಯನ್ನು ಸರ್ಕಾರಕ್ಕೆ ಬರೆದು ವೃದ್ಧಾಶ್ರಮ ನಿರ್ಮಿಸುವಂತೆ ಕೋರಿದ ವಿಚಿತ್ರ ಪ್ರಕರಣ ವರದಿಯಾಗಿದೆ.

ಒಡಿಶಾದ ಜಲ್ಪುರ ಜಿಲ್ಲೆಯಲ್ಲಿರುವ 75 ವರ್ಷದ ಮಾಜಿ ಪತ್ರಕರ್ತ ಖೇತ್ರಮೋಹನ್ ಮಿಶ್ರಾ ಇಂತಹದೊಂದು ಕೆಲಸದ ಮೂಲಕ ಅಚ್ಚರಿ ಮೂಡಿಸಿದ್ದು, ಇಡೀ ಆಸ್ತಿಯನ್ನು ರಾಜ್ಯ ಸರ್ಕಾರಕ್ಕೆ ಬರೆದು, ವೃದ್ಧಾಶ್ರಮ ನಿರ್ಮಿಸಲು ತಿಳಿಸಿದ್ದಾರೆ.

ಹೌದು ತಮ್ಮ ಮಗ ಮತ್ತು ಸೊಸೆ ಸರಿಯಾಗಿ ನೋಡಿಕೊಳ್ಳದ ಕಾರಣಕ್ಕೆ ಈ ನಿರ್ಧಾರ ಮಾಡಿರುವುದಾಗಿ ಖೇತ್ರಮೋಹನ್ ಮಿಶ್ರಾ ತಿಳಿಸಿದ್ದು .ತಮ್ಮನ್ನು ಕೊಲೆ ಮಾಡಲೂ ಇಬ್ಬರು ಸಾಕಷ್ಟು ಬಾರಿ ಪ್ರಯತ್ನಿಸಿದ್ದರು ಎಂದು ಆರೋಪಿಸಿದ್ದಾರೆ. ಮತ್ತು ನನ್ನ ಉಯಿಲಿಗೆ ಸಹಿ ಮಾಡಿದ್ದೇನೆ. ವೃದ್ಧಾಶ್ರಮದಲ್ಲಿ ನನ್ನ ಜೀವನ ಕಳೆಯುತ್ತೇನೆ. ನನ್ನ ಜಮೀನಿನಲ್ಲಿ‌ ವೃದ್ಧಾಶ್ರಮ ನಿರ್ಮಿಸಿ‌ ನನ್ನಂತಹ ಹಿರಿಯ ನಾಗರಿಕರಿಗೆ ಸರ್ಕಾರ ಸೂರು ನೀಡಲಿ ಎಂದು ಕೇಳಿದ್ದಾರೆ.

ಇನ್ನು ಮಿಶ್ರಾ ಅವರ ಪತ್ರವನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾಡಳಿತ ಮಿಶ್ರಾ ಅವರನ್ನು ವೃದ್ಧಾಶ್ರಮಕ್ಕೆ ಸ್ಥಳಾಂತರಿಸಲು ವ್ಯವಸ್ಥೆ ಮಾಡಿದೆ ಎಂದು ಜಜ್ಪುರ ಜಿಲ್ಲಾಧಿಕಾರಿ ರಂಜನ್ ಕೆ. ದಾಸ್ ತಿಳಿಸಿದ್ದಾರೆ.ಇನ್ನು ಮಿಶ್ರಾ ಅವರನ್ನು ಚಂಡಿಖೋಲೆ ಬಳಿಯ ವೃದ್ಧಾಶ್ರಮವೊಂದರಲ್ಲಿ ಇರಿಸಲು ವ್ಯವಸ್ಥೆ ಮಾಡಿದ್ದೇವೆ. ಅವರ ಮರಣದ ನಂತರವೂ ಕುಟುಂಬದವರು ಅವರ ಅಂತ್ಯಕ್ರಿಯೆಗೆ ಬರುವುದಕ್ಕೆ ಅನುಮತಿ ನೀಡಬಾರದೆಂದು ನಮ್ಮ ಬಳಿ ಮನವಿ ಮಾಡಿಕೊಂಡಿದ್ದಾರೆ. ಮಿಶ್ರಾ ಅವರು ತಮ್ಮ ಭೂಮಿಯನ್ನು ಸರ್ಕಾರಕ್ಕೆ ದಾನ ಮಾಡಿದ್ದಾರೆ. ಜೊತೆಗೆ ಅಲ್ಲಿ ವೃದ್ಧಾಶ್ರಮ ಕಟ್ಟಬೇಕೆಂದು ಬಯಸಿದ್ದಾರೆ ಎಂದು ಅವರು ವಿವರಣೆ ನೀಡಿದ್ದಾರೆ.

Comments are closed.