ರಾಷ್ಟ್ರೀಯ

ಗಣಿತದ ಈ ಸರಳ ಪ್ರಶ್ನೆಗೆ ಉತ್ತರ ಗೊತ್ತೇ…? ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್​ ಆಗುತ್ತಿರುವ ಈ ಪ್ರಶ್ನೆ ಬಗ್ಗೆ ನಡೆಯುತ್ತಿದೆ ಚರ್ಚೆ

Pinterest LinkedIn Tumblr

ನವದೆಹಲಿ: ಸಾಮಾಜಿಕ ಜಾಲತಾಣಗಳಲ್ಲಿ ಹಲವು ಫೋಟೋಗಳು ಮತ್ತು ವಿಡಿಯೋಗಳು ಆಗಾಗ್ಗೆ ವೈರಲ್​ ಆಗುತ್ತಿರುತ್ತವೆ. ನೆಟ್ಟಿಗರು ತಮ್ಮ ಶಕ್ತ್ಯಾನುಸಾರ ಅವುಗಳನ್ನು ಬೇರೆಯವರಿಗೆ ಕಳುಹಿಸಿ ಅವು ಹೆಚ್ಚು ಜನರಿಗೆ ತಲುಪುವಂತೆ ನೋಡಿಕೊಳ್ಳುತ್ತಾರೆ. ಈಗ ಕೆಲವು ದಿನಗಳಿಂದ ಗಣಿತದ ಸರಳ ಪ್ರಶ್ನೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ಅದರ ನಿಖರವಾದ ಉತ್ತರ ಏನು ಎಂಬುದರ ಕುರಿತು ನೆಟ್ಟಿಗರಿಂದ ನಡುವೆ ಚರ್ಚೆ ಹುಟ್ಟುಹಾಕಿದೆ.

8÷2(2+2) ಇದು ನೋಡಲು ಸರಳವಾದ ಪ್ರಶ್ನೆಯಂತೆ ಕಾಣುತ್ತಿದೆ. ಈ ಪ್ರಶ್ನೆಯನ್ನು ನಾವು ಬಗೆಹರಿಸುವ ವಿಧಾನದ ಮೇಲೆ ಇದರ ಉತ್ತರ 16 ಮತ್ತು 1 ಎಂದು ಬರುತ್ತಿದೆ. ಈ ಎರಡು ಉತ್ತರಗಳ ಕುರಿತೇ ಈಗ ನೆಟ್ಟಿಗರಿಂದ ಬಿಸಿ ಬಿಸಿ ಚರ್ಚೆ ನಡೆಯುತ್ತಿದೆ.

BODMAS ಪದ್ಧತಿಯ ಪ್ರಕಾರ ಪ್ರಶ್ನೆಯನ್ನು ಬಗೆಹರಿಸಿದಾಗ ಉತ್ತರ 16 ಎಂದು ಬರುತ್ತಿದೆ. PEMDAS ವಿಧಾನದಲ್ಲಿ ಪ್ರಶ್ನೆಯನ್ನು ಬಗೆಹರಿಸಿದಾಗ ಉತ್ತರ 1 ಎಂದು ಬರುತ್ತಿದೆ. ಈ ಎರಡೂ ಪದ್ಧತಿಗಳ ಪರ ಇರುವವರು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ವಾದ ಮಂಡಿಸುತ್ತಿದ್ದಾರೆ. ಇನ್ನು ಕೆಲವರು ತಾಂತ್ರಿಕವಾಗಿ ಈ ಎರಡೂ ಪದ್ಧತಿಗಳಿಂದ ದೊರೆತ ಉತ್ತರ ಸರಿ ಇದೆ ಎಂದು ತಮ್ಮದೇ ವಾದ ಮಂಡಿಸುತ್ತಿದ್ದಾರೆ.

 

 

Comments are closed.