ರಾಷ್ಟ್ರೀಯ

ತ್ರಿವಳಿ ತಲಾಖ್ ಮಸೂದೆಗೆ ರಾಷ್ಟ್ರಪತಿ ರಾಮನಾಥ ಕೋವಿಂದ್ ಅಂಕಿತ; ಸದ್ಯದಲ್ಲಿಯೇ ಕಾನೂನು ಆಗಿ ಜಾರಿ

Pinterest LinkedIn Tumblr

ನವದೆಹಲಿ: ಸಂಸತ್ತಿನ ಉಭಯ ಸದನಗಳಲ್ಲಿ ಅನುಮೋದನೆಯಾದ ತ್ರಿವಳಿ ತಲಾಖ್ ಮಸೂದೆಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅಂಕಿತ ಹಾಕಿದ್ದಾರೆ. ಸದ್ಯದಲ್ಲಿಯೇ ಅದು ಕಾನೂನು ಆಗಿ ಜಾರಿಗೆ ಬರಲಿದೆ ಎಂದು ಸರ್ಕಾರದ ಅಧಿಸೂಚನೆ ತಿಳಿಸಿದೆ.

ಬುಧವಾರ ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಗೆಜೆಟ್​ ನೋಟಿಫಿಕೇಷನ್​ನಲ್ಲಿ ಮಸೂದೆಗೆ ರಾಷ್ಟ್ರಪತಿ ಅಂಕಿತ ಹಾಕಿರುವ ಸುದ್ದಿಯನ್ನು ಪ್ರಕಟಿಸಲಾಗಿದೆ. ಕೇಂದ್ರದ ಅಧಿಸೂಚನೆಯಾದ ತಕ್ಷಣದಿಂದ ಇದು ಕಾನೂನಾಗಿ ಬದಲಾವಣೆಯಾಗಲಿದೆ.

ಮುಸ್ಲಿಂ ಮಹಿಳೆ(ವೈವಾಹಿಕ ಹಕ್ಕುಗಳ ರಕ್ಷಣೆ) ಕಾಯ್ದೆ 2019 ಯು ದಿಢೀರ್ ತ್ರಿವಳಿ ತಲಾಕ್ ಅಥವಾ ತಲಾಕ್-ಎ-ಬಿದ್ದತ್ ಕಾನೂನು ಬಾಹಿರ ಎಂದು ಪರಿಗಣಿಸಲಾಗುತ್ತದೆ.

ಮಂಗಳವಾರ ಪ್ರತಿಪಕ್ಷಗಳ ಕೆಲ ಸದಸ್ಯರ ಕಲಾಪ ಬಹಿಷ್ಕಾರ ಹಾಗೂ ಗೈರಿನ ಲಾಭ ಪಡೆದ ಬಿಜೆಪಿ 99:84 ಮತದಲ್ಲಿ ಮುಸ್ಲಿಂ ಮಹಿಳಾ ಹಕ್ಕುಗಳ ಸುರಕ್ಷತೆ ವಿಧೇಯಕಕ್ಕೆ (ದಿಢೀರ್ ತ್ರಿವಳಿ ತಲಾಕ್ ನಿಷೇಧ) ಒಪ್ಪಿಗೆ ಪಡೆಯುವಲ್ಲಿ ಯಶಸ್ವಿಯಾಯಿತು. ಇದರಿಂದಾಗಿ ಮುಸ್ಲಿಂ ಮಹಿಳೆಯರ ನಾಲ್ಕೂವರೆ ದಶಕಗಳ ಹೋರಾಟ ಹಾಗೂ ಬಿಜೆಪಿ ಸರ್ಕಾರದ 3 ವರ್ಷಗಳ ನಿರಂತರ ಪ್ರಯತ್ನಕ್ಕೆ ಗೆಲುವು ದೊರೆಯಿತು.

ಈ ಮೂಲಕ ಸಾಮಾಜಿಕ ಅಸಮಾನತೆ, ದೌರ್ಜನ್ಯ ವಿರುದ್ಧ ಮಹಿಳೆಯರು ಧ್ವನಿ ಎತ್ತುವುದು ಅಸಾಧ್ಯ ಎಂಬಂತಿದ್ದ 1970ರ ದಶಕದಲ್ಲಿ ತ್ರಿವಳಿ ತಲಾಕ್ ವಿರುದ್ಧ ಹಾಗೂ ಜೀವನಾಂಶಕ್ಕಾಗಿ ಶಾಹ ಬಾನೊ ನಡೆಸಿದ್ದ ಹೋರಾಟಕ್ಕೆ ಕೊನೆಗೂ ನ್ಯಾಯ ಸಿಕ್ಕಿದೆ.

Comments are closed.