
ಮಿರ್ಜಾಪುರ್(ಜುಲೈ.19):ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾರ ಬಂಧನ ವಿರೋಧಿಸಿ ಇಂದು(ಶುಕ್ರವಾರ) ದೇಶಾದ್ಯಂತ ಪ್ರತಿಭಟನೆ ನಡೆಸಲಾಗಿದೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್ ನೀಡಿದ ಕರೆ ಮೇರೆಗೆ ಪಕ್ಷದ ಕಾರ್ಯಕರ್ತರು, ಬೀದಿಗಿಳಿದು ಪ್ರತಿಭಟಿಸಿದ್ಧಾರೆ. ಪ್ರತಿಭಟನೆ ಮೂಲಕ ಬಿಜೆಪಿ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿದ್ದಾರೆ.
ಉತ್ತರ ಪ್ರದೇಶದ ಸೋನಭದ್ರಾದ ಆದಿವಾಸಿ ಕುಟುಂಬಗಳನ್ನು ಭೇಟಿ ಮಾಡಲು ಮುಂದಾಗಿದ್ದ ಪ್ರಿಯಾಂಕ ಗಾಂಧಿ ವಾದ್ರಾರನ್ನು ನಾರಯಣಪುರ ಪೊಲೀಸರು ವಶಕ್ಕೆ ಪಡೆದಿದ್ದರು. ಇಲ್ಲಿನ ಆದಿವಾಸಿಗಳ ಮೇಲಿನ ಗುಂಡಿನ ದಾಳಿ ಖಂಡಿಸಿ ಶಾಂತಿಯುತ ಪ್ರತಿಭಟನೆಗೆ ಮುಂದಾದಾಗ, ಪ್ರಿಯಾಂಕರನ್ನು ವಶಕ್ಕೆ ಪಡೆಯಲಾಗಿತ್ತು.
ಇತ್ತೀಚೆಗೆ ಮಿರ್ಜಾಪುರ ಬಳಿಯ ಸೊನಭದ್ರಾದದಲ್ಲಿ ಭೂವಿವಾದ ಹಿನ್ನಲೆಯಲ್ಲಿ ಆದಿವಾಸಿ ಕುಟುಂಬದವರ ಮೇಲೆ ಗುಂಡು ಹಾರಿಸಿ ಹತ್ಯೆಗೈಯ್ಯಲಾಗಿತ್ತು. ಈ ಗುಂಡಿನ ದಾಳಿಯಲ್ಲಿ 10 ಮಂದಿ ಸಾವನ್ನಪ್ಪಿದಲ್ಲದೇ, 19 ಜನ ತೀವ್ರ ಗಾಯಗೊಂಡಿದ್ದರು. ಈ ಘಟನೆ ಬಳಿಕ ಪೊಲೀಸರು ಈ ಪ್ರದೇಶದ ವ್ಯಾಪ್ತಿಯಲ್ಲಿ ಸೆಕ್ಷನ್ 144 ಜಾರಿ ಮಾಡಿದ್ದರು. ಇದೀಗ ಸಂತ್ರಸ್ತರನ್ನು ಭೇಟಿ ಮಾಡಲು ಪ್ರಿಯಾಂಕ ಗಾಂಧಿ ತೆರಳಿದ್ದು, ಪೊಲೀಸರು ತಡೆಯೋಡ್ಡಿದ್ದಾರೆ.
ಪ್ರಿಯಾಂಕಾ ಗಾಂಧಿ ಅವರನ್ನು ನಾರಾಯಣಪುರ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಘಟನೆಯನ್ನು ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿಯವರು ಖಂಡಿಸಿದ್ಧಾರೆ. ಅಲ್ಲದೇ ಸಹೋದರಿ ಪ್ರಿಯಾಂಕಾ ಜೊತೆಗೆ ನಿಲ್ಲುವುದಾಗಿ ಟ್ವೀಟ್ ಮಾಡಿದ್ಧಾರೆ.
ಈ ಸಂಬಂಧ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಿಯಾಂಕ, “ಸೋನಾಭದ್ರಾದ ಆದಿವಾಸಿ ಸಂತ್ರಸ್ತರ ಭೇಟಿ ಮಾಡಬೇಕಿತ್ತು. ಹಾಗಾಗಿ ನಾಲ್ಕು ಜನರ ತಂಡ ಇಲ್ಲಿಗೆ ಬಂದಿದ್ದೆವು. ಆದರೆ, ಪೊಲೀಸರು ಅಲ್ಲಿಗೆ ಹೋಗಲು ಅವಕಾಶ ನೀಡದೆ, ನಮ್ಮನ್ನು ವಶಕ್ಕೆ ಪಡೆದಿದ್ದಾರೆ ಎಂದು ಹೇಳಿದ್ಧಾರೆ.
ಇನ್ನು ನಮ್ಮನ್ನು ಎಲ್ಲಿಗೆ ಕರೆದೊಯ್ಯುತ್ತಿದ್ಧಾರೆ ಎಂದು ಗೊತ್ತಿಲ್ಲ. ಎಲ್ಲಿಗೆ ಕರೆದುಕೊಂಡು ಹೋದರು ನಾವು ಹೆದರುವುದಿಲ್ಲ. ಇಲ್ಲಿಯೇ ಶಾಂತಯುತವಾಗಿ ಪ್ರತಿಭಟನೆ ಮಾಡಲು ನಿರ್ಧರಿಸಿದ್ದೇವೆ. ಶಾಂತಿಯು ಪ್ರತಿಭಟನೆಗೂ ಪೊಲೀಸರು ಅವಕಾಶ ನೀಡಲಿಲ್ಲ” ಎಂದು ಆರೋಪಿಸಿದರು.
ಈಗಾಗಲೇ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ‘ಇದುವರೆಗೆ 29 ಅಪರಾಧಿಗಳನ್ನು ಬಂಧಿಸಿರುವುದಾಗಿ ಹೇಳಿದ್ಧಾರೆ. ಅಲ್ಲದೇ ಇಲ್ಲಿ ಆರೋಪಿಗಳು ಯಾರೇ ಆಗಲಿ ಬಂಧಿಸಿ ಎಂದು ಸ್ಥಳೀಯ ಡಿಜಿಪಿಗೆ ಸೂಚನೆ ನೀಡಿದ್ಧಾರೆ.
Comments are closed.