ಹೊಸದೆಹಲಿ: ಹೆಲ್ಮೆಟ್ ಬಳಸದೆ ದ್ವಿಚಕ್ರ ವಾಹನ ಚಾಲನೆ ಮಾಡಿದ್ದನ್ನು ಪ್ರಶ್ನೆ ಮಾಡಿದ್ದಕ್ಕೆ ಬೈಕ್ ಸವಾರನೊಬ್ಬ ಟ್ರಾಫಿಕ್ ಪೊಲೀಸ್ ಅಧಿಕಾರಿಗಳ ಮೇಲೆ ಹಲ್ಲೆ ಮಾಡಿದ ಘಟನೆಯೊಂದು ದೇಶದ ರಾಜಧಾನಿಯಲ್ಲಿ ನಡೆದಿದೆ.
ನವದೆಹಲಿ, ಮಾಯಾಪುರಿಯಲ್ಲಿ ಜುಲೈ 16, ಮಂಗಳವಾರ ಸಂಜೆ ಈ ಘಟನೆ ಸಂಭವಿಸಿದ್ದು. ಹಲ್ಲೆ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.
ಮೊಬೈಲ್ ದೃಶ್ಯದಲ್ಲಿ ಓರ್ವ ಮಹಿಳೆ ಮತ್ತು ಪುರುಷರೊಬ್ಬರು ಟ್ರಾಫಿಕ್ ಪೊಲೀಸರ ಮೇಲೆ ಹಲ್ಲೆ ನಡೆಸಿದ್ದು, ಆ ವ್ಯಕ್ತಿಗಳಿಬ್ಬರು ಮದ್ಯ ಸೇವಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯ ಹಲ್ಲೆ ಮಾಡಿದ ವ್ಯಕ್ತಿಗಳಿಬ್ಬರ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ.
ಹೆಲ್ಮೆಟ್ ಧರಿಸದೆ ವಾಹನ ಚಲಾಯಿಸುತ್ತಿರುವುದನ್ನು ಕಂಡು ಟ್ರಾಫಿಕ್ ಪೊಲೀಸರು ತಡೆದು ನಿಲ್ಲಿಸಿದಾಗ ಹಿಂಬದಿ ಸವಾರ ಮಹಿಳೆ ವಾಹನದಿಂದ ಕೆಳಗೆ ಇಳಿದು ಪೊಲೀಸರೊಂದಿಗೆ ವಾಗ್ವಾದ ಶುರು ಮಾಡಿದ್ದಾರೆ. ಪೊಲೀಸರು ವಾಹನದ ಕೀ ತೆಗೆದುಕೊಂಡಾಗ ಆ ವೇಳೆ ಪೊಲೀಸರಿಗೆ ಮೊಬೈಲ್‌ನಿಂದ ಹೊಡೆದು ಆ ಮಹಿಳೆ ವಾಹನದ ಕೀ ವಾಪಸ್ ಪಡೆದಿಕೊಂಡಿರೋ ದೃಶ್ಯ ಚಿತ್ರೀಕರಣವಾಗಿದೆ.
ಅಲ್ಲದೇ ಪೊಲೀಸರು ವಾಹನವನ್ನು ಬದಿಗಿಡುವಂತೆ ಸೂಚಿಸಿ ಕಾನೂನು ಕ್ರಮ ಎದುರಿಸಿ ಎಂದು ಬೈಕ್ ಸವಾರರಿಗೆ ಹೇಳಿದ್ದಾರೆ. ಈ ನಾಟಕೀಯ ಘಟನೆ ರಸ್ತೆ ಮಧ್ಯದಲ್ಲಿ ನಡೆದಿದೆ. ತದನಂತರ ಕೆಲ ಹೊತ್ತು ವಾಹನ ಸಂಚಾರಕ್ಕೆ ಅಡ್ಡಿಯುಂಟು ಮಾಡಿತ್ತು.
Comments are closed.