ಒರು ಅಧಾರ್ ಲವ್’ ಚಿತ್ರದ ಮಾಣಿಕ್ಯ ಮಲರಾಯ ಪೂವೆ ಎಂಬ ಹಾಡಿನ ಸಣ್ಣದೊಂದು ದೃಶ್ಯದಲ್ಲಿ ಕಣ್ಣು ಹೊಡೆಯುವ ಮೂಲಕ ವಿಶ್ವದಲ್ಲಿಯೇ ಫೇಮಸ್ ಆದ ನಟಿ ಪ್ರಿಯಾ ವಾರಿಯರ್. ಇದೀಗ ಈ ಸಾಲಿಗೆ ಐಎಎಸ್ ಅಧಿಕಾಯೊಬ್ಬರು ಸೇರ್ಪಡೆಗೊಂಡಿದ್ದಾರೆ. ಹೌದು ಐಎಎಸ್ ಅಧಿಕಾರಿಯೊಬ್ಬರು ಕಣ್ಣು ಹೊಡಿಯುವ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣಕ್ಕೆ ಅಪ್ ಮಾಡಿದ್ದು, ಸಂಚಲನಕ್ಕೆ ಕಾರಣವಾಗಿದೆ.
2015ರ ಐಎಎಸ್ ಪರೀಕ್ಷೆಯಲ್ಲಿ ದೇಶಕ್ಕೆ ಮೊದಲಿಗರಾಗಿ ಉತ್ತೀರ್ಣರಾಗಿ ಹೊರಹೊಮ್ಮಿದ್ದ ಟೀನಾ ಡಾಬಿ ಖಾನ್ ಹೀಗೆ ವಿವಾದ ಸೃಷ್ಟಿಸಿದ ಐಎಎಸ್ ಅಧಿಕಾರಿ. ಸಧ್ಯಕ್ಕೆ ಟೀನಾ ಖಾನ್ ಈ ವಿಡಿಯೋ ಸಖತ್ ವೈರಲ್ ಆಗಿದೆ. ಆಕೆ ಕೂಡ ಪ್ರಿಯಾ ವಾರಿಯರ್ ತರ ಮೆಹಂದಿ ಹಚ್ಚಿದ ಕೈ ಅಡ್ಡವಿಟ್ಟು ಕಣ್ಣು ಹೊಡೆಯುವ ಮೂಲಕ ಹವಾ ಸೃಷ್ಟಿಸಿದ್ದಾರೆ.
ಮುದ್ದಾದ ಟೀನಾ ಡಾಬಿ ಖಾನ್ ಈ ವಿಡಿಯೋ ಸಖತ್ ವೈರಲ್ ಆಗಿದೆ. ಟೀನಾ ಡಾಬಿ ಖಾನ್ ಪ್ರಸ್ತುತ ರಾಜಸ್ಥಾನದ ಭಿಲ್ವಾರಾ ಜಿಲ್ಲೆಯಲ್ಲಿ ಐಎಎಸ್ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಐಎಎಸ್ ಅಧಿಕಾರಿಯಾಗಿ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಬದಲು ಇಂತಹ ಹುಚ್ಚಾಟಗಳಲ್ಲಿ ತೊಡಗಿಕೊಂಡಿರುವುದಕ್ಕೆ ಎಲ್ಲೆಡೆ ಆಕ್ರೋಶ ಕೂಡ ವ್ಯಕ್ತವಾಗಿದೆ.
2015 ರ ಐಎಎಸ್ ಪರೀಕ್ಷೆಯಲ್ಲಿ ಟಾಪರ್ ಆಗಿದ್ದ ಟೀನಾ, ಅದೇ ವರ್ಷದ ಪರೀಕ್ಷೆಯಲ್ಲಿ ಸೆಕೆಂಡ್ ಪ್ಲೇಸ್ ಬಂದಿದ್ದ ಅಥಾರ್ ಜತೆ ಡೇಟಿಂಗ್ ಮಾಡಿದ್ದ ಟೀನಾ ನಂತರ ಅವರನ್ನೇ ವಿವಾಹವಾಗಿದ್ದರು. ಅವರ ಪತಿ ಕೂಡ ರಾಜಸ್ಥಾನದಲ್ಲೇ ಐಎಎಸ್ ಅಧಿಕಾರಿಗಳಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.
Comments are closed.