ರಾಷ್ಟ್ರೀಯ

ಟರ್ಕಿಯಲ್ಲಿ ವಿವಾಹವಾದ ತೃಣಮೂಲ ಕಾಂಗ್ರೆಸ್​ನ ಸಂಸದೆ ನುಸ್ರತ್​ ಜಹಾನ್​; ಪ್ರಮಾಣವಚನಕ್ಕೆ ಗೈರು

Pinterest LinkedIn Tumblr

ನವದೆಹಲಿ: ಪಶ್ಚಿಮ ಬಂಗಾಳದ ನಟಿ, ತೃಣಮೂಲ ಕಾಂಗ್ರೆಸ್ ನಿಂದ ಮೊದಲ ಬಾರಿಗೆ ಸಂಸತ್ ಸದಸ್ಯೆಯಾಗಿ ಆಯ್ಕೆಯಾಗಿದ್ದ ನುಸ್ರತ್ ಜಹಾನ್ ಉದ್ಯಮಿ ನಿಖಿಲ್ ಜೈನ್ ಜೊತೆ ಟರ್ಕಿಯಲ್ಲಿ ಸಪ್ತಪದಿ ತುಳಿದಿದ್ದಾರೆ. ತಮ್ಮ ವಿವಾಹದ ಬಗ್ಗೆ ಗುರುವಾರ ಬೆಳಗ್ಗೆ ನುಸ್ರತ್ ಟ್ವೀಟ್ ಮಾಡುವ ಮೂಲಕ ಬಹಿರಂಗಪಡಿಸಿದ್ದಾರೆ. ನುಸ್ರತ್ ಮದುವೆ ಹಿನ್ನೆಲೆಯಲ್ಲಿ ಸಂಸತ್ ಸದಸ್ಯೆಯಾಗಿ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮಕ್ಕೆ ಗೈರಾಗಿದ್ದಾರೆ.

ಟ್ವೀಟರ್ ಖಾತೆಯಲ್ಲಿ ಮದುವೆ ಫೋಟೋಗಳನ್ನು ಶೇರ್ ಮಾಡಿರುವ ನುಸ್ರತ್, ನಿಖಿಲ್ ಜೈನ್ ಜೊತೆಗಿನ ವಿವಾಹ ತುಂಬಾ ಖುಷಿಕೊಟ್ಟಿದೆ ಎಂದು ಬರೆದುಕೊಂಡಿದ್ದಾರೆ.

ಬಂಗಾಳಿ ಸಿನಿಮಾ ನಟಿ ನುಸ್ರತ್ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಾಸಿರ್ ಹಾತ್ ಕ್ಷೇತ್ರದಿಂದ ಸ್ಪರ್ಧಿಸಿ, ಭಾರೀ ಅಂತರದಿಂದ ಗೆಲುವು ಸಾಧಿಸಿದ್ದರು. ನುಸ್ರತ್ ಗೆಳತಿ, ಸಹೋದ್ಯೋಗಿ ಸಂಸದೆ ಮಿಮಿ ಚಕ್ರವರ್ತಿ ಕೂಡಾ ವಿವಾಹ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಜಾದವ್ ಪುರ್ ಲೋಕಸಭಾ ಕ್ಷೇತ್ರದಿಂದ ತೃಣಮೂಲ ಕಾಂಗ್ರೆಸ್ ಸಂಸದೆಯಾಗಿ ಆಯ್ಕೆಯಾಗಿದ್ದರು. ಮಿಮಿ ಕೂಡಾ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಗೈರಾಗಿದ್ದಾರೆ.

ನುಸ್ರತ್​ ಜಹಾನ್​ ಮತ್ತು ನಿಖಿಲ್​ ಜೈನ್​ ಜುಲೈ 4 ರಂದು ಕೋಲ್ಕದಲ್ಲಿ ಭವ್ಯ ಆರತಕ್ಷತೆ ಕಾರ್ಯಕ್ರಮ ಆಯೋಜಿಸಿದ್ದಾರೆ. ಕಾರ್ಯಕ್ರಮದಲ್ಲಿ ಬೆಂಗಾಳಿ ಚಿತ್ರರಂಗದ ಕಲಾವಿದರು, ರಾಜಕೀಯ ಮುಖಂಡರು ಪಾಲ್ಗೊಳ್ಳಲಿದ್ದಾರೆ.

ನುಸ್ರತ್​ ಮತ್ತು ಮಿಮಿ ಸಂಸದರಾಗಿ ಆಯ್ಕೆಯಾದ ನಂತರ ಮೊದಲ ಬಾರಿಗೆ ಸಂಸತ್​ ಭವನಕ್ಕೆ ಭೇಟಿ ನೀಡಿ ಪ್ಯಾಂಟ್ ಶರ್ಟ್ ನಲ್ಲಿ ಫೋಟೋ ತೆಗೆಸಿಕೊಂಡು ಅದನ್ನು ಟ್ವಿಟ್ಟರ್ ನಲ್ಲಿ ಹಾಕಿಕೊಂಡಿದ್ದರು. ಇದು ಭಾರೀ ವೈರಲ್ ಆಗಿತ್ತು.

Comments are closed.