ರಾಷ್ಟ್ರೀಯ

ಪುಲ್ವಾಮಾದಲ್ಲಿ ಮತ್ತೆ ಉಗ್ರರ ದಾಳಿ!

Pinterest LinkedIn Tumblr


ಭಾರತದ ಜಮ್ಮು-ಕಾಶ್ಮೀರದ ಪುಲ್ವಾಮಾ ಸಮೀಪದಲ್ಲಿ ಮತ್ತೆ ಉಗ್ರರು ದಾಳಿ ನಡೆಸುವ ಮೂಲಕ ತಮ್ಮ ಅಟ್ಟಹಾಸವನ್ನು ಮೆರೆದಿದ್ದಾರೆ.

ಇಂದು ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ಸೇನೆಯ ವಾಹನದ ಮೇಲೆ ಉಗ್ರರು ಸುಧಾರಿತ ಬಾಂಬ್​ ದಾಳಿ ನಡೆಸಿದ್ದು, ಇದೀಗಾ ಉಗ್ರರು ಮತ್ತು ಸೈನಿಕರ ನಡುವೆ ನಿರಂತರ ಗುಂಡಿನ ಚಕಮಕಿ ನಡೆಯುತ್ತಿದೆ. ಆದರೆ ಈ ವಿಚಾರ ಕುರಿತಂತೆ ಸದ್ಯ ಸಾವು-ನೋವಿನ ಬಗೆಗೆ ಯಾವುದೇ ವರದಿಯಾಗಿಲ್ಲ. ಜೊತೆಗೆ ದಾಳಿಯಿಂದಾಗಿ ಭಾರತೀಯ ಸೇನಾ ವಾಹನ ಸಂಪೂರ್ಣ ಜಖಂಗೊಂಡಿದೆ ಎನ್ನಲಾಗುತ್ತಿದೆ.

ಇನ್ನೂ ಈ ವರ್ಷದ ಫೆಬ್ರವರಿ ತಿಂಗಳಲ್ಲಿ ಪುಲ್ವಾಮಾ ಸಮೀಪದ ಅರಿಹಾಲ್​ ಬಳಿ ಸಿಆರ್​ಪಿಎಫ್​ ವಾಹನದ ಮೇಲೆ ಆತ್ಮಾಹುತಿ ಬಾಂಬ್​ ದಾಳಿಕೋರ ಬಾಂಬ್​ ಸ್ಪೋಟಿಸಿದ್ದರ ಪರಿಣಾಮ 44 ಭಾರತೀಯ ಸೈನಿಕರು ಮೃತಪಟ್ಟಿದ್ದರು. ಸದ್ಯ ಇದೀಗಾ ಪುನಃ ಪುಲ್ವಾಮಾದಲ್ಲಿ ಹೈ ಅಲರ್ಟ್​ ಘೋಷಿಸಲಾಗಿದೆ.

Comments are closed.