ಲೋಕಸಭೆಯಲ್ಲಿ ಈ ಬಾರಿ ಸಿನಿ ಸೆಲೆಬ್ರಿಟಿಗಳ ಕಲರವ ಸ್ವಲ್ಪ ಹೆಚ್ಚಾಗಿದ್ದು. ಹತ್ತಕ್ಕೂ ಹೆಚ್ಚು ನಟ-ನಟಿಯರು ಸಂಸದರಾಗಿ ಸಂಸತ್ ಭವನ ಪ್ರವೇಶಿಸಿದ್ದರು. ಅದರಲ್ಲೂ ಪಶ್ಚಿಮ ಬಂಗಾಳದ ಟಿಎಂಸಿ ಪಕ್ಷದ ಸಂಸದೆ ಆದ ನಟಿ ನುಸ್ರತ್ ಜಹಾನ್ ಬಹಳ ಸದ್ದು ಮಾಡಿದ್ದರು. ಲೋಕಸಭಾ ಚುನಾವಣೆಯಲ್ಲಿ ಟಿಎಂಸಿಯಿಂದ ಗೆಲುವು ಸಾಧಿಸಿ ಸಂಸದೆಯಾದ ನಟಿ ನುಸ್ರತ್ ಜಹಾನ್ ರವರ ಮದುವೆಯ ಗುಟ್ಟು ಇದೀಗ ರಟ್ಟಾಗಿದೆ.
ನುಸ್ರತ್ ಜಹಾನ್ ಕೋಲ್ಕತ್ತಾ ಮೂಲದ ಉದ್ಯಮಿ ನಿಖಿಲ್ ಜೈನ್ ಮದುವೆಯಾಗಲಿದ್ದಾರೆ. ನುಸ್ರತ್ ಹಾಗೂ ನಿಖಿಲ್ ಮದುವೆ ಜೂನ್ 19ರಿಂದ 21ರವೆಗೆ ಮೂರು ದಿನಗಳ ಕಾಲ ಟರ್ಕಿಯ ಇಸ್ತಾಂಬುಲ್‍ನಲ್ಲಿ ನಡೆಯಲಿದ್ದು. ಮದ್ವೆ ಆಗ್ತಿರೋ ಬಗ್ಗೆ ನುಸ್ರತ್ ಇನ್ಸ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿ ಮದುವೆಯ ಬಗ್ಗೆ ಮಾಹಿತಿ ನೀಡಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ 3.50 ಲಕ್ಷ ಮತಗಳ ಅಂತರದಿಂದ ನುಸ್ರತ್ ಜಹಾನ್ ಗೆದ್ದಿದ್ದರು. ಮೊದಲ ಬಾರಿಗೆ ಸಂಸತ್ ಪ್ರವೇಶಿಸಿದ ಖುಷಿಯಲ್ಲಿದ್ದ ನುಸ್ರತ್ ನಟಿ ಮಿಮಿ ಚಕ್ರವರ್ತಿ ಜೀನ್ಸ್ ಜೊತೆ ಸಂಸತ್ ಭವನದ ಮುಂದೆ ನಿಂತು ಫೋಟೋಗೆ ಪೋಸ್ ಕೊಟ್ಟಿದ್ದರು. ಅಷ್ಟೇ ಅಲ್ಲ, ಆ ಫೋಟೋಗಳಿಗೆ ನಾವು ಅಧಿಕೃತವಾಗಿ ಸಂಸತ್‍ನಲ್ಲಿ ಸಂಸದೆಯರಾಗಿ ನಮ್ಮ ಹೆಸರನ್ನ ನಮೂದಿಸಿದೆವು’ ಎಂದು ಬರೆದು ಅಪ್ಲೋಡ್ ಮಾಡಿದ್ದರು. ಈ ಪೋಸ್ಟ್ ಗೆ ನೆಟ್ಟಿಗರು ನಮ್ಮನ್ನು ಪ್ರತಿನಿಧಿಸಲು ನಿಮ್ಮನ್ನು ಆಯ್ಕೆ ಮಾಡಿದ್ದೇವೆ. ಸಂಸತ್ ಎಂದರೆ ಅದು ಪವಿತ್ರ ಸ್ಥಳ. ಅದರ ಗೌರವವನ್ನು ಉಳಿಸಿ ಎಂದು ಕಮೆಂಟ್ ಮಾಡುವ ಮೂಲಕ ಟ್ರೋಲ್ ಮಾಡಿದ್ದರು.
ಒಟ್ಟಾರೆ 29 ವರ್ಷದ ಈ ಸಂಸದೆಯ ಮದುವೆ ಬಗ್ಗೆ ಹಾಗಂತೆ ಹೀಗಂತೆ ಎಂದು ಗಿರಿಗಿಟ್ಲೆ ಹೊಡೆಯುತ್ತಿದ್ದ ಅಂತೆ-ಕಂತೆಗಳಿಗೆಲ್ಲ ತೆರೆ ಎಳೆಯುವ ಮೂಲಕ ಎಲ್ಲರ ಬಾಯಿ ಮುಚ್ಚಿಸಿದ್ದಾರೆ.