ರಾಷ್ಟ್ರೀಯ

ವಾಟ್ಸ್‌ಆ್ಯಪ್‌ನಲ್ಲಿದ್ದ ಸುರಕ್ಷತಾ ದೋಷವನ್ನು ಪತ್ತೆ ಮಾಡಿದ ಮಣಿಪುರದ ಯುವಕನಿಗೆ ಸಿಕ್ಕಿತು 4 ಲಕ್ಷ ರೂ. ಬಹುಮಾನ

Pinterest LinkedIn Tumblr

ಹೊಸದಿಲ್ಲಿ: ಸಾಮಾಜಿಕ ತಾಣಗಳಾದ ಫೇಸ್‌ಬುಕ್‌, ವಾಟ್ಸ್‌ಆ್ಯಪ್‌, ಗೂಗಲ್‌ ಮತ್ತಿತರ ತಾಣಗಳ ಮೇಲೆ ನಾವಿಂದು ಹೆಚ್ಚು ಅವಲಂಬಿತರಾಗಿದ್ದೇವೆ. ಸುರಕ್ಷತೆ ದೃಷ್ಟಿಯಿಂದ ಎಷ್ಟು ಜಾಗ್ರತೆ ವಹಿಸಿದ್ದರು ಸಾಲುವುದಿಲ್ಲ.

ಸಾಮಾಜಿಕ ತಾಣಗಳ ದಿಗ್ಗಜ ಫೇಸ್‌ಬುಕ್‌ನ ಮತ್ತೊಂದು ತಾಣ ವಾಟ್ಸ್‌ಆ್ಯಪ್‌ನಲ್ಲಿದ್ದ ಸುರಕ್ಷತಾ ದೋಷವನ್ನು ಪತ್ತೆ ಮಾಡಿದ ಮಣಿಪುರದ 22 ವರ್ಷದ ಜೊನಲ್‌ ಸೌಗಾಯಿಜಮ್‌ ಎಂಬ ಯುವಕನಿಗೆ ಫೇಸ್‌ಬುಕ್‌ ಸುಮಾರು 4 ಲಕ್ಷ ರೂ. ಬಹುಮಾನ ನೀಡಿ ಗೌರವಿಸಿದೆ. ಹಾಲ್‌ ಆಫ್‌ ಫೇಮ್‌ ಎಂದೂ ಪರಿಗಣಿಸಿದೆ.

ಪಿಟಿಐ ವರದಿ ಪ್ರಕಾರ ಯಾವುದೇ ಬಳಕೆದಾರರ ಖಾಸಗಿ ಮಾಹಿತಿಯನ್ನು ಕದಿಯಬಹುದಾಗಿದ್ದ ದೋಷವನ್ನು ಮಣಿಪುರದ ಯುವಕ ಪತ್ತೆ ಮಾಡಿದ್ದ. ಸುರಕ್ಷತೆಯ ದೃಷ್ಟಿಯಿಂದ ವಾಟ್ಸ್‌ಆ್ಯಪ್‌ನ ದೋಷವನ್ನು ಪತ್ತೆ ಮಾಡಿಕೊಟ್ಟಿದ್ದಕ್ಕೆ ಯುವಕನಿಗೆ ಸುಮಾರು 5,000 ಡಾಲರ್‌ ಬಹುಮಾನ ನೀಡಿದೆ.

ವೈಟ್‌ ಹ್ಯಾಕರ್ಸ್‌ನ ಹಾಲ್‌ ಆಫ್‌ ಫೇಮ್‌ ಗೌರವ ಪಡೆದ 16ನೇ ವ್ಯಕ್ತಿ ಜೋನಲ್‌. ವಾಟ್ಸ್‌ಆ್ಯಪ್‌ನಲ್ಲಿರುವ ದೋಷದ ಕುರಿತು ಫೇಸ್‌ಬುಕ್‌ ಭದ್ರತೆ ತಂಡಕ್ಕೆ ರಿಪೋರ್ಟ್‌ ಕಳುಹಿಸಿದ ತಕ್ಷಣ ಕಾರ್ಯ ಪ್ರವೃತ್ತರಾದರು. ಮೂರು ವಾರಗಳಲ್ಲಿ ದೋಷವನ್ನು ಸರಿಪಡಿಸಿದರು ಎಂದು ಮಣಿಪುರದ ವೈಟ್‌ಹ್ಯಾಕರ್‌ ತಿಳಿಸಿದ್ದಾನೆ.

Comments are closed.