ರಾಷ್ಟ್ರೀಯ

ಕಥುವಾ ಅತ್ಯಾಚಾರ, ಕೊಲೆ ಪ್ರಕರಣದ ಆರು ಆರೋಪಿಗಳ ಪೈಕಿ ಮೂವರಿಗೆ ಜೀವಾವಧಿ; ಮೂವರಿಗೆ 5 ವರ್ಷ ಜೈಲು ಶಿಕ್ಷೆ

Pinterest LinkedIn Tumblr

ಹೊಸದಿಲ್ಲಿ: ಇಡೀ ದೇಶಾದ್ಯಂತ ಭಾರಿ ಸುದ್ದಿಯಾಗಿದ್ದ ಕಥುವಾ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ಆರು ಆರೋಪಿಗಳ ಪೈಕಿ ಮೂವರಿಗೆ ಜೀವಾವಧೀ ಹಾಗೂ ಇನ್ನುಳಿದ ಮೂವರಿಗೆ 5 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ.

ಪಠಾಣ್‌ಕೋಟ್‌ ಸ್ಥಳೀಯ ನ್ಯಾಯಾಲಯ, ಅಪರಾಧಿಗಳಿಗೆ ಶಿಕ್ಷೆ ಪ್ರಕಟಿಸಿದೆ.

ಸಾಂಜಿ ರಾಮ್‌, ದೀಪಲ್‌ ಖಜೌರಿಯಾ ಹಾಗೂ ಪರ್ವೇಶ್‌ ಕುಮಾರ್‌ ಅವರಿಗೆ ಜೀವಾವಾಧಿ ಶಿಕ್ಷೆ ವಿಧಿಸಿದರೆ, ಇನ್ನುಳಿದ ಮೂವರಿಗೆ 5 ವರ್ಷ ಜೈಲು ವಾಸದ ಶಿಕ್ಷೆಯನ್ನು ವಿಧಿಸಲಾಗಿದೆ.

ಜಿಲ್ಲಾ ಸೆಷನ್ಸ್‌ ನ್ಯಾಯಾಲಯದ ನ್ಯಾಯಮೂರ್ತಿ ತೇಜ್ವಿಂದರ್‌ ಸಿಂಗ್‌ ಶಿಕ್ಷೆ ಪ್ರಕಟಿಸಿದರು.

ಸೋಮವಾರ ಬೆಳಗ್ಗೆಯಷ್ಟೇ ಪ್ರಮುಖ ಆರೋಪಿಗಳನ್ನು ದೋಷಿಗಳೆಂದು ಪರಿಗಣಿಸಲಾಗಿತ್ತು.

ಪ್ರಮುಖ ಆರೋಪಿಗಳಾದ ಸಾಂಜಿ ರಾಮ್‌, ದೀಪಲ್‌ ಖಜೌರಿಯಾ ಹಾಗೂ ಪರ್ವೇಶ್‌ ಕುಮಾರ್‌ಗೆ 25 ವರ್ಷ ಜೈಲು ಶಿಕ್ಷೆ ಹಾಗೂ ತಲಾ 1 ಲಕ್ಷ ರೂ. ದಂಡ ವಿಧಿಸಲಾಗಿದೆ.

ಅಲೆಮಾರಿ ಜನಾಂಗಕ್ಕೆ ಸೇರಿದ 8 ವರ್ಷದ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ಎಸಗಿ ಚಿತ್ರಹಿಂಸೆ ಕೊಟ್ಟು ಹತ್ಯೆ ಮಾಡಲಾಗಿತ್ತು. ಇಡೀ ದೇಶದಲ್ಲಿ ಭಾರಿ ಸುದ್ದಿ ಮಾಡಿತ್ತು.

ಅಲೆಮಾರಿ ಮುಸ್ಲಿಂ ಜನಾಂಗಕ್ಕೆ ಸೇರಿದ್ದ ಎಂಟು ವರ್ಷ ವಯಸ್ಸಿನ ಬಾಲಕಿಯನ್ನು ಕಳೆದ ವರ್ಷ ಜನವರಿ 10 ರಂದು ಅಪಹರಿಸಿ, ಅತ್ಯಾಚಾರ ನಡೆಸಿ ಚಿತ್ರಹಿಂಸೆ ಕೊಟ್ಟು ಕೊಲ್ಲಲಾಗಿತ್ತು.

ಏಪ್ರಿಲ್ 2018ರಲ್ಲಿ ಏಳು ಆರೋಪಿಗಳನ್ನು ಬಂಧಿಸಿ ವಿಚಾರಣೆ ಪ್ರಾರಂಭಿಸಲಾಗಿತ್ತು. ಈ ವಿಚಾರಣೆ ಕಳೆದ ಜೂನ್ ಜೂನ್ 3 ರಂದು ಕೊನೆಗೊಂಡು ಸೋಮವಾರ ತೀರ್ಪು ಪ್ರಕಟವಾಗಿದೆ.

ಕೃತ್ಯದಲ್ಲಿ ಬಾಗಿಯಾಗಿದ್ದ ಇನ್ನೋರ್ವ ಅಪರಾಧಿ ವಯಸ್ಸು ಇನ್ನೂ ಖಚಿತವಾಗಿಲ್ಲ. ಜಮ್ಮು ಮತ್ತು ಕಾಶ್ಮೀರ ಹೈಕೋರ್ಟ್ ಅವನ ವಯಸ್ಸಿನ ಕುರಿತಂತೆ ಅರ್ಜಿ ವಿಚಾರಣೆ ನಡೆಸುತ್ತಿರುವ ಕಾರಣ ಬಾಲಾಪರಾಧಿಯ ವಿಚಾರಣೆ ಇನ್ನೂ ಪ್ರಾರಂಭವಾಗಿರುವುದಿಲ್ಲ.

ಅಪರಾಧ ದಳದ ಪೋಲೀಸರು ಐವರು ಆರೊಪಿಗಳನ್ನು ಬಂಧಿಸಿದ್ದರು. ಸಾಂಜಿ ರಾಮ್ ನಿಂದ ಅಕ್ರಮವಾಗಿ 4 ಲಕ್ಷ ರೂ.ಪಡೆದು ನಿರ್ಣಾಯಕ ಸಾಕ್ಷಿಗಳನ್ನು ನಾಶಪಡಿಸಿದ್ದ ಸಬ್ ಇನ್ಸ್ಪೆಕ್ಟರ್ ಆನಂದ್ ದತ್ತಾ ಹಾಗೂ ಹೆಡ್ ಕಾನ್ಸ್ಟೇಬಲ್ ತಿಲಕ್ ರಾಜ್ ಅವರನ್ನೂ ಅಪರಾಧ ದಳದ ಅಧಿಕಾರಿಗಳು ಬಂಧಿಸಿದ್ದರು. ಅಪ್ರಾಪ್ತ ಬಾಲಕ ಹೊರತಾಗಿ ಉಳಿದ ಆರೋಪಿಗಳೆಲ್ಲರೂ ಪ್ರಸ್ತುತ ಪಂಜಾಬ್ ನ ಗುರುದಾಸ್ಪುರ್ ಜೈಲಿನಲ್ಲಿದ್ದಾರೆ.

Comments are closed.