ರಾಷ್ಟ್ರೀಯ

ಊಟಕ್ಕೆಂದು ಮನೆಗೆ ಕರೆದು ಗಗನ ಸಖಿ ಮೇಲೆ ಸಾಮೂಹಿಕ ಅತ್ಯಾಚಾರ !

Pinterest LinkedIn Tumblr

ಮುಂಬೈ: ಖಾಸಗಿ ವಿಮಾನಯಾನ ಸಂಸ್ಥೆಯ 25 ವರ್ಷ ವಯಸ್ಸಿನ ಗಗನ ಸಖಿ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿರುವ ಘಟನೆ ಮುಂಬೈನಲ್ಲಿ ನಡೆದಿದೆ ಎಂದು ತಿಳಿದುಬಂದಿದೆ.

ಮುಂಬೈನ ಅಂಧೇರಿ ಉಪನಗರದಲ್ಲಿ ಈ ಘಟನೆ ನಡೆದಿದ್ದು, ಯುವತಿ ತನ್ನ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ ಆರೋಪಿಸಿ ಎಂಐಡಿಸಿ ಪೊಲೀಸ್ ಠಾಣೆಯಲ್ಲಿ ದೂರುಸಲ್ಲಿಕೆ ಮಾಡಿದ್ದಾರೆ.

ಯುವತಿ ನೀಡಿರುವ ದೂರಿನಲ್ಲಿ ಸ್ವಪ್ನಿಲ್ ಬಡೋಡಿಯಾ ಎಂಬಾತ ತನ್ನ ಸಹೋದ್ಯೋಗಿ ಹಾಗೂ ಸ್ನೇಹಿತನಾಗಿದ್ದು, ಕಳೆದ ಮಂಗಳವಾರ ರಾತ್ರಿ ತನ್ನ ಮನೆಗೆ ಡಿನ್ನರ್ ಗೆ ಅಹ್ವಾನಿಸಿದ್ದ. ಹೀಗಾಗಿ ಅಂದು ರಾತ್ರಿ ನಾನು ಗೋನಿ ನಗರದಲ್ಲಿರುವ ಆತನ ಫ್ಲಾಟ್ ಗೆ ತೆರಳಿದ್ದೆ. ಈ ವೇಳೆ ಊಟ ಮುಗಿಸಿ ಡ್ರಿಂಕ್ಸ್ ತೆಗೆದುಕೊಂಡಿದ್ದೆವು. ಆ ಬಳಿಕ ನಾನು ನಿದ್ರೆಗೆ ಜಾರಿದ್ದೆ. ಬೆಳಗ್ಗೆ ನನಗೆ ಎಚ್ಚರವಾದಾಗ ನಾನು ವಿವಸ್ತ್ರಳಾಗಿ ಬಿದ್ದಿದ್ದೆ. ನನ್ನ ಮೇಲೆ ಸ್ವಪ್ನಿಲ್ ಮತ್ತು ಆತನ ಸ್ನೇಹಿತರು ಬಲವಂತವಾಗಿ ತಮ್ಮ ಲೈಂಗಿಕ ತೃಷೆ ತೀರಿಸಿಕೊಂಡಿದ್ದರು ಎಂದು ಅಳಲು ತೋಡಿಕೊಂಡಿದ್ದಾರೆ.

ಪ್ರಸ್ತುತ ಪ್ರಕರಣ ದಾಖಲಿಸಿಕೊಂಡಿರುವ ಎಂಐಡಿಸಿ ಪೊಲೀಸರು, ಸ್ವಪ್ನಿಲ್ ಮತ್ತು ಆತನ ಸ್ನೇಹಿತರ ವಿರುದ್ಧ ಐಪಿಸಿ ಸೆಕ್ಷನ್ 376 ಡಿ (ಸಾಮೂಹಿಕ ಅತ್ಯಾಚಾರ) ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಲ್ಲದೆ ಪ್ರಮುಖ ಆರೋಪಿ ಸ್ವಪ್ನಿಲ್ ನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಪ್ರಾಥಮಿಕ ತನಿಖೆ ವೇಳೆ ಆತ ಯುವತಿ ಮೇಲೆ ಅತ್ಯಾಚಾರ ಮಾಡಿದ್ದನ್ನು ಒಪ್ಪಿಕೊಂಡಿದ್ದಾನೆಯಾದರೂ, ತನ್ನ ಸ್ನೇಹಿತರೊಂದಿಗೆ ಸೇರಿ ಸಾಮೂಹಿಕ ಅತ್ಯಾಚಾರ ಮಾಡಿದ್ದನ್ನು ನಿರಾಕರಿಸಿದ್ದಾನೆ ಎಂದು ಹಿರಿಯ ಪೊಲೀಸ್ ಅಧಿಕಾರಿ ನಿತಿನ್ ಅಲಕ್ನುರೆ ಹೇಳಿದ್ದಾರೆ.

Comments are closed.