ರಾಷ್ಟ್ರೀಯ

ರಾಮನ ಕೆಲಸ ನಡೆದೇ ನಡೆಯುತ್ತದೆ. ಮೋಹನ್ ಭಾಗವತ್‌

Pinterest LinkedIn Tumblr


ಉದಯಪುರ: ರಾಮನ ಕೆಲಸ ನಡೆದೇ ನಡೆಯುತ್ತದೆ, ಆ ಬಗ್ಗೆ ಸಂಶಯ ಬೇಕಿಲ್ಲ. ಆದರೆ ಅದಕ್ಕಾಗಿ ಜನ ಸದಾ ಜಾಗೃತರಾಗಿರಬೇಕು ಎಂದು ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಸೋಮವಾರ ಹೇಳಿದ್ದಾರೆ.

ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ”ರಾಮನ ಕೆಲಸ ನಾವೇ ವಹಿಸಿಕೊಂಡರೆ, ಅದನ್ನು ನಾವೇ ಮಾಡಿ ಮುಗಿಸುತ್ತೇವೆ. ಬೇರೆಯವರಿಗೆ ವಹಿಸಿದರೆ, ಆ ಕೆಲಸ ಮಾಡುವ ವ್ಯಕ್ತಿಯ ಮೇಲೆ ನಿಗಾ ಇರಿಸಬೇಕಾಗುತ್ತದೆ. ಬಹುದಿನಗಳಿಂದ ವಿಳಂಬಗೊಂಡ ಕೆಲಸವನ್ನು ಮಾಡಿ ಮುಗಿಸುವ ಕಡೆ ಮುತುವರ್ಜಿ ವಹಿಸಬೇಕಿದೆ,” ಎಂದು ಮಾರ್ಮಿಕವಾಗಿ ನುಡಿದಿದ್ದಾರೆ.

ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಿಸುವ ಬೇಡಿಕೆ ವಿಳಂಬಗೊಳ್ಳುತ್ತಿರುವುದನ್ನು ಪರಿಗಣಿಸಿ ಭಾಗವತ್‌, ಎರಡನೇ ಅವಧಿಗೆ ಅಧಿಕಾರ ವಹಿಸಿಕೊಂಡ ಬಿಜೆಪಿಗೆ ಈ ಪರೋಕ್ಷ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ. ಕಳೆದ ಎರಡು ಅವಧಿಯಿಂದಲೂ ರಾಮ ಮಂದಿರ ನಿರ್ಮಿಸುವ ಬಗ್ಗೆ ಬಿಜೆಪಿ ಸಂಕಲ್ಪ ಮಾಡುತ್ತಲೇ ಬಂದಿದೆ. ಆದರೆ ಕೋರ್ಟ್‌ ತೀರ್ಪು ಅದಕ್ಕೆ ಅಡ್ಡಿಯಾಗಿದೆ. ಸದ್ಯ ಈ ಪ್ರಕರಣ ಸುಪ್ರೀಂ ಕೋರ್ಟ್‌ನ ಅಂತಿಮ ವಿಚಾರಣೆಯಲ್ಲಿದೆ.

Comments are closed.