ರಾಷ್ಟ್ರೀಯ

ಕಾಂಗ್ರೆಸ್ ಗೆ ಹೊಸ ಅಧ್ಯಕ್ಷರನ್ನು ಹುಡುಕುವಂತೆ ಪಟ್ಟು ಹಿಡಿದಿರುವ ರಾಹುಲ್ ಗಾಂಧಿ

Pinterest LinkedIn Tumblr

ನವದೆಹಲಿ: ಎಐಸಿಸಿ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯಲು ಪಟ್ಟು ಹಿಡಿದಿರುವ ರಾಹುಲ್ ಗಾಂಧಿ, ಹೊಸ ಮುಖ್ಯಸ್ಥರನ್ನು ಹುಡುಕುವಂತೆ ಪಕ್ಷಕ್ಕೆ ಹೇಳಿದ್ದಾರೆ ಎಂಬುದು ಮೂಲಗಳು ಹೇಳಿವೆ.

ಲೋಕಸಭಾ ಚುನಾವಣೆಯಲ್ಲಿ ಪಕ್ಷ ಹೀನಾಯವಾಗಿ ಸೋತ ನಂತರ ಅಧ್ಯಕ್ಷ ಸ್ಥಾನನದಿಂದ ಕೆಳಗಿಳಿಯಲು ನಿರ್ಧರಿಸಿರುವ ರಾಹುಲ್ ಗಾಂಧಿ, ತಮ್ಮ ಈ ನಿರ್ಧಾರವನ್ನು ಪಕ್ಷಕ್ಕೆ ತಿಳಿಸಿದ್ದಾರೆ. ಹೊಸ ಸಂಸದರ ಸಭೆ ನಡೆಸಲು ನಿರಾಕರಿಸಿರುವ ರಾಹುಲ್ ಗಾಂಧಿ, ಅವರ ಎಲ್ಲಾ ಸಭೆಗಳು ಹಾಗೂ ಕಾರ್ಯಕ್ರಮಗಳನ್ನು ರದ್ದುಗೊಳಿಸಿದ್ದಾರೆ.

ದೇಶದ ಮೊದಲ ಪ್ರಧಾನಿ ಹಾಗೂ ಅವರ ತಾತ ಜವಹರಲಾಲ್ ನೆಹರು ಅವರಿಗೆ ಪುಣ್ಯ ತಿಥಿ ಅಂಗವಾಗಿ ನಮನ ಸಲ್ಲಿಸಿದ್ದ ನಂತರ ಇಂದು ಬೆಳಗ್ಗೆ ರಾಹುಲ್ ಗಾಂಧಿ, ಈ ನಿರ್ಧಾರ ಕೈಗೊಂಡಿದ್ದಾರೆ.

ಕಾಂಗ್ರೆಸ್ ಅಧ್ಯಕ್ಷ ಸ್ಥಾನದಲ್ಲಿ ಮುಂದುವರೆಯಲು ಇಷ್ಟಪಡದ ರಾಹುಲ್ ಗಾಂಧಿ, ಆ ಸ್ಥಾನದಿಂದ ಕೆಳಗಿಳಿಯಲು ನಿರ್ಧರಿಸಿದ್ದಾರೆ. ಉನ್ನತ ಹುದ್ದೆಗೆ ಹೊಸ ವ್ಯಕ್ತಿಯನ್ನು ಆಯ್ಕೆ ಮಾಡಲು ಸಮಯ ನೀಡಿದ್ದಾರೆ ಎಂಬುದು ಉನ್ನತ ಮೂಲಗಳಿಂದ ತಿಳಿದುಬಂದಿದೆ.

ರಾಹುಲ್ ಗಾಂಧಿ ಮನಸನ್ನು ಬದಲಾಯಿಸಲು ಪ್ರಯತ್ನಿಸಿದ್ದ ಸೋನಿಯಾ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ, ರಾಹುಲ್ ಗಾಂಧಿ ಗೆ ವಿಶ್ರಾಂತಿ ನೀಡಿ ಪಕ್ಷದ ಅಧ್ಯಕ್ಷರನ್ನು ಬದಲಾಯಿಸಲು ನಿರ್ಧರಿಸಿದ್ದಾರೆ. ರಾಹುಲ್ ಗಾಂಧಿ ಮನಸ್ಸು ಬದಲಾವಣೆಗಾಗಿ ಪ್ರವಾಸ ಕೈಗೊಳ್ಳುವಂತೆ ಹಲವು ನಾಯಕರು ಹೇಳಿದ್ದಾರೆ.ರಾಹುಲ್ ಗಾಂಧಿ ಅವರ ರಾಜೀನಾಮೆಯನ್ನು ಶನಿವಾರ ಸರ್ವಾನುಮತದಿಂದ ತಿರಸ್ಕರಿಸಲಾಗಿತ್ತು.

Comments are closed.