ರಾಷ್ಟ್ರೀಯ

ಬಾಬಾ ರಾಮ್ ದೇವ್ ಹೇಳಿದಂತಾದರೆ ಮೋದಿಗೆ ಮತದಾನದ ಹಕ್ಕು ಬೇಡವೇ: ಓವೈಸಿ ಪ್ರಶ್ನೆ

Pinterest LinkedIn Tumblr

ನವದೆಹಲಿ: ಜನಸಂಖ್ಯಾ ನಿಯಂತ್ರಣಕ್ಕೆ 3 ನೇ ಮಗುವಿಗೆ ಮತದಾನದ ಹಕ್ಕು, ಸರ್ಕಾರಿ ಸೌಲಭ್ಯಗಳನ್ನು ತಿರಸ್ಕರಿಸುವ ಕಾನೂನು ಜಾರಿಯಾಗಬೇಕೆಂದು ಹೇಳಿದ್ದ ಬಾಬಾ ರಾಮ್ ದೇವ್ ಸಲಹೆಯನ್ನು ಸಂಸದ ಅಸಾದುದ್ದೀನ್ ಓವೈಸಿ ಖಂಡಿಸಿದ್ದಾರೆ.

ಜನರು ಅಸಾಂವಿಧಾನಿಕ ವಿಷಯಗಳನ್ನು ಮಾತನಾಡಬಾರದೆಂಬ ಕಾನೂನು ಏನೂ ಇಲ್ಲ. ಆದರೆ ಬಾಬಾ ರಾಮ್ ದೇವ್ ಅವರ ಈ ರೀತಿಯ ಆಲೋಚನೆಗಳೇಕೆ ಅನಾವಶ್ಯಕವಾಗಿ ಗಮನ ಪಡೆದುಕೊಳ್ಳುತ್ತವೆ ಎಂದು ಓವೈಸಿ ಟ್ವೀಟ್ ಮಾಡಿದ್ದಾರೆ.

3 ನೇ ಮಗು ಎಂಬ ಒಂದೇ ಕಾರಣಕ್ಕಾಗಿ ಮೋದಿ ಮತದಾನದ ಹಕ್ಕನ್ನೇ ಕಳೆದುಕೊಳ್ಳಬೇಕು ಅಂತಾಗಬಾರದು ಅಲ್ಲವೇ? ಎಂದು ಅಸಾದುದ್ದೀನ್ ಓವೈಸಿ ಹೇಳಿದ್ದಾರೆ.

Comments are closed.