
ಹೊಸದಿಲ್ಲಿ: ಲೋಕಸಭಾ ಚುನಾವಣೆಯ ಮತಗಳ ಎಣಿಕೆ ದೇಶಾದ್ಯಂತ ಆರಂಭವಾಗಿದೆ. ಮತ ಎಣಿಕೆ ಆರಂಭವಾಗಿದ್ದು, ಎನ್‌ಡಿಎ 266, ಯುಪಿಎ 118, ಇತರರು 107 ಕ್ಷೇತ್ರಗಳಲ್ಲಿ ಮುನ್ನಡೆಯಲ್ಲಿವೆ.
ವಾರಾಣಸಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮುನ್ನಡೆ. ಗಾಂಧಿನಗರದಲ್ಲಿ ಅಮಿತ್ ಶಾ ಮುನ್ನಡೆ. ಕೇರಳದ ವಯನಾಡಿನಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮುನ್ನಡೆ.
ಬಿಜೆಪಿ ನೇತೃತ್ವದ ಎನ್‌ಡಿಎ, ಕಾಂಗ್ರೆಸ್ ನೇತೃತ್ವದ ಯುಪಿಎ, ಮಹಾಘಟಬಂಧನ್, ತೃಣಮೂಲ ಕಾಂಗ್ರೆಸ್ ಸೇರಿದಂತೆ ಪ್ರಮುಖ ಮಿತ್ರಕೂಟಗಳ ನಡುವೆ ಮಹಾ ಸಂಘರ್ಷಕ್ಕೆ ಕಾರಣವಾದ ಚುನಾವಣೆ ಫಲಿತಾಂಶ ಇಂದು ರಾತ್ರಿ ವೇಳೆಗೆ ಬಹುತೇಕ ದೊರೆಯಲಿದೆ.
Comments are closed.