ರಾಷ್ಟ್ರೀಯ

ರೈಲ್ವೆಯಲ್ಲಿ ಟಿಕೆಟ್ ರದ್ದಿನಿಂದಾಗಿ ರೈಲ್ವೆ ಇಲಾಖೆಗೆ ಬಂದ ಹಣವನ್ನು ನೋಡಿದ್ರೆ ಖಂಡಿತ ಶಾಕ್ ಆಗ್ತೀರಿ…!

Pinterest LinkedIn Tumblr

ಚೆನ್ನೈ: ರೈಲ್ವೆಯಲ್ಲಿ ಟಿಕೆಟ್ ಬುಕ್ಕಿಂಗ್ ಮಾಡಿದ ನಂತರ ಅದನ್ನು ರದ್ದುಪಡಿಸಿದರೆ ರೈಲ್ವೆ ಇಲಾಖೆ ನಿಗದಿತ ಮೊತ್ತ ದಂಡ ಹಾಕುತ್ತದೆ. ಈ ನಿಯಮ 2015ರ ನವೆಂಬರ್ ನಿಂದಲೇ ಜಾರಿಯಲ್ಲಿದೆ. ಹಾಗಾದರೆ ಬುಕ್ಕಿಂಗ್ ಟಿಕೆಟ್ ರದ್ದತಿಯಿಂದ ಹಾಕಿರುವ ದಂಡದಿಂದ ಇದುವರೆಗೆ ಬಂದಿರುವ ಮೊತ್ತ ಎಷ್ಟಿರಬಹುದು ಎಂದು ಅಂದಾಜಿಸಬಹುದೇ?

ಭಾರತೀಯ ರೈಲ್ವೆ ಇಲಾಖೆಯ ಅಂಕಿಅಂಶ ಪ್ರಕಾರ ಮಾರ್ಚ್ 2019ರವರೆಗೆ ಬಂದಿರುವ ಮೊತ್ತ 5 ಸಾವಿರದ 366.53 ಕೋಟಿ ರೂಪಾಯಿ. ಮಾಹಿತಿ ಹಕ್ಕು ಕಾಯ್ದೆಯಿಂದ ಸಿಕ್ಕಿರುವ ಮಾಹಿತಿ ಪ್ರಕಾರ ಬುಕ್ಕಿಂಗ್ ಟಿಕೆಟ್ ರದ್ದುಪಡಿಸಿರುವುದರಿಂದ ಇಲಾಖೆಗೆ ಬಂದಿರುವ ಆದಾಯ ಕಳೆದ ವರ್ಷಕ್ಕಿಂತ 2018-19ರಲ್ಲಿ 646.54 ಕೋಟಿ ರೂಪಾಯಿ ಹೆಚ್ಚಾಗಿದೆ.

2017-18ರಲ್ಲಿ ಈ ಮೊತ್ತ 1,205.96 ಕೋಟಿ ಇದ್ದರೆ 2018-19ರಲ್ಲಿ ,852.50 ಕೋಟಿಯಷ್ಟಾಗಿದೆ. ಅದೇ ರೀತಿ ದಕ್ಷಿಣ ರೈಲ್ವೆ 176.76 ಕೋಟಿ ರೂಪಾಯಿ 2017-18ರಲ್ಲಿ ಗಳಿಸಿದ್ದರೆ 2018-19ರಲ್ಲಿ 182.56 ಕೋಟಿ ರೂಪಾಯಿಗೆ ಏರಿಕೆಯಾಗಿದೆ. ದಕ್ಷಿಣ ಮಧ್ಯೆ ರೈಲ್ವೆಯಲ್ಲಿ ಟಿಕೆಟ್ ರದ್ದುಪಡಿಸಿರುವುದರಿಂದ ಆದಾಯ ಗಳಿಕೆ ತೆಲಂಗಾಣ, ಆಂಧ್ರ ಪ್ರದೇಶ, ಮಹಾರಾಷ್ಟ್ರ ಮತ್ತು ಮಧ್ಯ ಪ್ರದೇಶಗಳಲ್ಲಿ 127.22 ಕೋಟಿ ರೂಪಾಯಿಗಳಿಂದ 690.80 ಕೋಟಿ ರೂಪಾಯಿಗೆ ಏರಿಕೆಯಾಗಿದ್ದು ಅದು ಶೇಕಡಾ 500ರಷ್ಟು ಹೆಚ್ಚಳವಾಗಿದೆ.

Comments are closed.