
ಪಾಟ್ನಾ: ಸಯಾಮಿ ಅವಳಿಗಳಾದ ಸಬಾ ಮತ್ತು ಫರ್ಹಾನ ಮೊದಲ ಬಾರಿಗೆ ಮತದಾನ ಹಕ್ಕು ಚಲಾಯಿಸಿದ್ದಾರೆ. ಸಯಾಮಿ ಅವಳಿಗಳು ಪ್ರತ್ಯೇಕ ಮತದಾನ ಮಾಡಿದ್ದು ಭಾರತದ ಚುನಾವಣೆ ಇತಿಹಾಸದಲ್ಲಿ ಇದೇ ಮೊದಲು ಎಂದು ವರದಿಯಾಗಿದೆ.
ಸಬಾ ಮತ್ತು ಫರ್ಹಾನ ಅವರು ಬಿಹಾರದ ಪಾಟ್ನಾ ಸಾಹಿಬ್ ಲೋಕಸಭಾ ಕ್ಷೇತ್ರದ ಮತಗಟ್ಟೆಯಲ್ಲಿ ಇಂದು ಮತದಾನ ಮಾಡಿದ್ದಾರೆ. ಅವರು 2015ರ ಬಿಹಾರ ವಿಧಾನಸಭಾ ಚುನಾವಣೆಯ ವೇಳೆ ಒಂದೇ ಗುರುತಿನ ಚೀಟಿ ಹೊಂದಿದ್ದರು. ಹೀಗಾಗಿ ಇಬ್ಬರು ಸೇರಿ ಒಂದೇ ಮತ ಹಾಕಿದ್ದರು.
ಪಟ್ನಾದ ಸಮನ್‍ಪುರ ನಿವಾಸಿಗಳಾದ ಸಬಾ ಮತ್ತು ಫರ್ಹಾ ಅವರು ನಟ ಸಲ್ಮಾನ್ ಅಭಿಮಾನಿಗಳು. ಅವರ ಕೈಗೆ ರಾಖಿ ಕಟ್ಟು ಆಸೆಯಿತ್ತು. ಅದಕ್ಕಾಗಿ ಸಲ್ಮಾನ್ ಸಯಾಮಿ ಸಹೋದರಿಯರನ್ನು ವಿಮಾನದಲ್ಲಿ ಮುಂಬೈಗೆ ಕರೆಸಿಕೊಂಡು ಆ ಕನಸು ನನಸಾಗಿಸಿದ್ದರು. ಪ್ರಕರಣವೊಂದರಲ್ಲಿ ಸಲ್ಮಾನ್ ಖಾನ್ ಅವರಿಗೆ ಕೋರ್ಟ್ ಶಿಕ್ಷೆ ವಿಧಿಸಿತ್ತು. ಇದರಿಂದಾಗಿ ಸಬಾ ಮತ್ತು ಫರ್ಹಾ ಕೆಲ ದಿನಗಳ ಕಾಲ ಆಹಾರವನ್ನೇ ಸೇವಿಸಿರಲಿಲ್ಲ.
ಪಾಟ್ನಾ ಸಾಹಿಬ್ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಹಾಗೂ ಕಾಂಗ್ರೆಸ್‍ನಿಂದ ಶತ್ರುಘ್ನ ಸಿನ್ಹಾ ಕಣಕ್ಕೆ ಇಳಿದಿದ್ದಾರೆ. ಲೋಕಸಭಾ ಚುನಾವಣೆಯ ಕೊನೆಯ ಹಂತದ ಚುನಾವಣೆ ಇಂದು ನಡೆಯುತ್ತಿದ್ದು, ಮೇ 23ರಂದು ಫಲಿತಾಂಶ ಹೊರ ಬೀಳಲಿದೆ.
Comments are closed.