ರಾಷ್ಟ್ರೀಯ

ಲೋಕಸಭಾ ಚುನಾವಣೋತ್ತರ ಸಮೀಕ್ಷೆಗಳು: ರಾಜ್ಯದಲ್ಲಿ ಯಾರಿಗೆ ಎಷ್ಟು ಸ್ಥಾನ?

Pinterest LinkedIn Tumblr


ನವದೆಹಲಿ: ಲೋಕಸಭಾ ಚುನಾವಣೆಯ ಮತದಾನ ಮುಕ್ತಾಯವಾಗಿದ್ದು, ವಿವಿಧ ಸಂಸ್ಥೆಗಳು ತಮ್ಮ-ತಮ್ಮ ಚುನಾವಣೋತ್ತರ ಸಮೀಕ್ಷೆಯ ಫಲಿತಾಂಶಗಳನ್ನು ಪ್ರಕಟಿಸಿದೆ. ಎಲ್ಲಾ ಎಕ್ಸಿಟ್ ಪೋಲ್ ಗಳ ಪ್ರಕಾರ ಕೇಂದ್ರದಲ್ಲಿ ಎನ್ಡಿಎ ಮೈತ್ರಿ ಕೂಟ ಸರ್ಕಾರ ರಚಿಸುವುದು ಗ್ಯಾರಂಟಿ ಎಂದು ಹೇಳಿವೆ.

ಇನ್ನು ಕರ್ನಾಟಕದ ಎಲ್ಲಾ ಚುನಾವಣೋತ್ತರ ಸಮೀಕ್ಷೆಗಳ ಫಲಿತಾಂಶ ಹೇಳುವುದೇನು ಎನ್ನುವುದನ್ನು ನೋಡುವುದಾದರೆ, ಬಹುತೇಕ ಎಲ್ಲಾ ಮತದಾನೋತ್ತರ ಸಮೀಕ್ಷೆಯಲ್ಲಿ ಬಿಜೆಪಿ ದೊಡ್ಡ ಪಕ್ಷವಾಗಿ ಹೊರಹೊಮ್ಮಲಿದ್ದು, ಜೆಡಿಎಸ್ ಹಾಗೂ ಕಾಂಗ್ರೆಸ್ ಮೈತ್ರಿಗೆ ಮುಖಭಂಗವಾಗಿದೆ.

ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳಿಗೆ ಏಪ್ರಿಲ್ 18 ಮತ್ತು 23ರಂದು 2 ಹಂತದಲ್ಲಿ ಚುನಾವಣೆ ನಡೆದಿದ್ದು. ಮೇ 23ರಂದು ಚುನಾವಣಾ ಫಲಿತಾಂಶ ಪ್ರಕಟವಾಗಿದೆ.

ರಾಜ್ಯದ 28 ಕ್ಷೇತ್ರಗಳ ಪೈಕಿ ಬಿಜೆಪಿ ಮಂಡ್ಯ ಹೊರತುಪಡಿಸಿ 27 ಕ್ಷೇತ್ರಗಳಲ್ಲಿ ಕಣಕ್ಕಿಳಿದಿತ್ತು. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸಿದ್ದವು. ಕಾಂಗ್ರೆಸ್ 22, ಜೆಡಿಎಸ್‌ 6 ಸ್ಥಾನಗಳಲ್ಲಿ ಕಣಕ್ಕಿಳಿದಿತ್ತು.

ಹಾಗಾದ್ರೆ ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳ ಯಾರು ಎಷ್ಟು ಸೀಟುಗಳನ್ನ ಗೆಲ್ಲಲಿದ್ದಾರೆ..? ಎಲ್ಲಾ ಸಮೀಕ್ಷೆಗಳ ಫಲಿತಾಂಶ ಇಲ್ಲಿದೆ.

* ABP ನ್ಯೂಸ್: ಬಿಜೆಪಿ-15, ಕಾಂಗ್ರೆಸ್+JDS-13, ಪಕ್ಷೇತರರು-00
* ಟೈಮ್ಸ್ ನೌ ವಿಎಂಆರ್ ಸಮೀಕ್ಷೆ : ಎನ್‌ಡಿಎ 21, ಯುಪಿಎ 7, ಇತರರು 0
* ಇಂಡಿಯಾ ಟಿವಿ ಸಮೀಕ್ಷೆ: ಬಿಜೆಪಿ 17, ಕಾಂಗ್ರೆಸ್ 8, ಜೆಡಿಎಸ್ 03, ಇತರೆ 00
* ಎಬಿಪಿ ಸಮೀಕ್ಷೆ: ಬಿಜೆಪಿಗೆ 15 ಸ್ಥಾನಗಳು, ಕಾಂಗ್ರೆಸ್-ಜೆಡಿಎಸ್ ಮೈತ್ರಿಗೆ 13 ಸ್ಥಾನ
* ಎಬಿಪಿ ನ್ಯೂಸ್ ಸಮೀಕ್ಷೆ: ಬಿಜೆಪಿಗೆ 15, ಕಾಂಗ್ರೆಸ್-JDSಗೆ 13
* ನ್ಯೂಸ್ ನೇಷನ್ ಸಮೀಕ್ಷೆ: ಎನ್‌ಡಿಎ 18, ಯುಪಿಎ 10, ಇತರರು 0.
* ಇಂಡಿಯಾ ಟುಡೆ-ಆಕ್ಸಿಸ್ ಸಮೀಕ್ಷೆ: ಬಿಜೆಪಿ 21-25, ಕಾಂಗ್ರೆಸ್ – ಜೆಡಿಎಸ್ 03-06 , ಇತರರು 01
* ಚಾಣಾಕ್ಯ ಸಮೀಕ್ಷೆ: ಬಿಜೆಪಿ 23, ಮೈತ್ರಿಕೂಟ 5 ಇತರರು 00

Comments are closed.