ರಾಷ್ಟ್ರೀಯ

ಜೈ ಶ್ರೀರಾಮ್ ಘೋಷಣೆ ಕೂಗುವೆ ನನ್ನನ್ನು ಬಂಧಿಸಿ – ಮಮತಾಗೆ ಅಮಿತ್ ಶಾ ಸವಾಲು

Pinterest LinkedIn Tumblr


ನವದೆಹಲಿ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಸೋಮವಾರದಂದು ಜೈ ಶ್ರೀರಾಮ್ ಘೋಷಣೆ ಕೂಗುವುದಕ್ಕೆ ತಮ್ಮನ್ನು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬಂಧಿಸಲು ಸವಾಲು ಹಾಕಿದ್ದಾರೆ. ಅಲ್ಲದೆ ಬಂಗಾಳದಲ್ಲಿ ಬಿಜೆಪಿ ಗೆಲುವನ್ನು ತಡೆಯಲು ಸಾಧ್ಯವಿಲ್ಲ ಎಂದು ಅಮಿತ್ ಶಾ ಹೇಳಿದ್ದಾರೆ.

ಜಾಯ್ನಗರ್ ಲೋಕಸಭಾ ಕ್ಷೇತ್ರದ ಅಡಿಯಲ್ಲಿ ಬರುವ ಕ್ಯಾನ್ನಿಂಗ್ ರ್ಯಾಲಿಯೊಂದರಲ್ಲಿ ಭಾಗವಹಿಸಿ ಮಾತನಾಡಿದ ಬಿಜೆಪಿ ಅಧ್ಯಕ್ಷ ಅಮಿತ್ ಶಾ,”ಜೈ ಶ್ರೀರಾಮ್ ಘೋಷಣೆಯನ್ನು ಕೂಗುವುದಕ್ಕೆ ಮಮತಾ ಬ್ಯಾನರ್ಜೀ ಕೋಪಗೊಂಡಿದ್ದಾರೆ. ಇಂದು ನಾನು ಜೈ ಶ್ರೀ ರಾಮ್ ಘೋಷಣೆಯನ್ನು ಕೂಗುತ್ತೇನೆ. ನಿಮಗೆ ಧೈರ್ಯವಿದ್ದರೆ ನನ್ನನ್ನು ಬಂಧಿಸಿ, ನಾಳೆ ನಾನು ಕೋಲ್ಕತಾಕ್ಕೆ ಬರುತ್ತೇನೆ ಎಂದು ಹೇಳಿದರು.

ಇದೇ ವೇಳೆ ಬರುಪುರ್ ದಲ್ಲಿ ಹೆಲಿಕಾಪ್ಟರ್ ಇಳಿಯಲು ಅನುಮತಿ ನಿರಾಕರಿಸಿದ ಟಿಎಂಸಿ ಸರ್ಕಾರದ ವಿರುದ್ಧ ಅಮಿತ್ ಶಾ ಆಕ್ರೋಶ ವ್ಯಕ್ತಪಡಿಸಿದ್ದರು.”ನಾನು ಚುನಾವಣಾ ರ್ಯಾಲಿ ಹಾಜರಾಗುವುದನ್ನು ತಡೆಯಲು ಮಮತಾ ಬಯಸುತ್ತಿದ್ದಾರೆ, ಆದರೆ ಬಂಗಾಳದಲ್ಲಿ ಬಿಜೆಪಿ ವಿಜಯವನ್ನು ಅವರಿಗೆ ತಡೆಯಲು ಸಾಧ್ಯವಿಲ್ಲ ಎಂದು ಹೇಳಿದರು. ಹೆಲಿಕಾಪ್ಟರ್ ಇಳಿಯಲು ಟಿಎಂಸಿ ಸರ್ಕಾರ ನಿರಾಕರಿಸಿದ ಬೆನ್ನಲ್ಲೇ ಜಾಧವ್ ಪುರ ಲೋಕಸಭಾ ಕ್ಷೇತ್ರದಲ್ಲಿ ಅಮಿತ್ ಶಾ ಅವರ ನಿಗಧಿತ ರ್ಯಾಲಿಯನ್ನು ರದ್ದುಗೊಳಿಸಲಾಯಿತು.

Comments are closed.