ರಾಷ್ಟ್ರೀಯ

ವೋಟ್ ಹಾಕದೆ ದಿಗ್ವಿಜಯ ಸಿಂಗ್​ ಪಾಪ ಎಸಗಿದ್ದಾರೆ; ಮೋದಿ

Pinterest LinkedIn Tumblr


ನವದೆಹಲಿ (ಮೇ.13): ಲೋಕಸಭಾ ಚುನಾವಣೆಯಲ್ಲಿ ಮತದಾನ ಮಾಡದ ಕಾಂಗ್ರೆಸ್​ ಮುಖಂಡ ದಿಗ್ವಿಜಯ್​ ಸಿಂಗ್​ ವಿರುದ್ದ ಆಕ್ರೋಶ ವ್ಯಕ್ತಪಡಿಸಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ಕಾಂಗ್ರೆಸ್​ ನಾಯಕ ಪಾಪ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಭಾನುವಾರ ನಡೆದ ಆರನೇ ಹಂತದ ಲೋಕಸಭಾ ಚುನಾವಣೆ ವೇಳೆ ಮಧ್ಯಪ್ರದೇಶ ಮಾಜಿ ಸಿಎಂ ದಿಗ್ವಿಜಯ್​ ಸಿಂಗ್​ ಮತದಾನ ಮಾಡುವಲ್ಲಿ ವಿಫಲರಾಗಿದ್ದರು. ಹಾಕದ ಹಾಕದೆ ಇರುವುದಕ್ಕಾಗಿ ಅವರು ಪಶ್ಚಾತಾಪವನ್ನು ವ್ಯಕ್ತಪಡಿಸಿ, ಅದಕ್ಕೆ ಕಾರಣವನ್ನು ನೀಡಿದ್ದರು.

ಮಧ್ಯಪ್ರದೇಶದ ರಾಜ್​ಗರ್​ಜಿಲ್ಲೆಯಲ್ಲಿ ನಾನು ಮತ ಹೊಂದಿದ್ದೆ. ಭೂಪಾಲ್​ನಲ್ಲಿದ್ದ ಕಾರಣ 130 ಕಿ.ಮೀ ದೂರದಲ್ಲಿದ್ದ ಮತಗಟ್ಟೆಗೆ ಹೋಗಿ ಹಕ್ಕು ಚಲಾಯಿಸಲಾಗಿಲ್ಲ ಮುಂದಿನ ಬಾರಿ ಭೂಪಾಲ್​ಗೆ ನನ್ನ ಮತವನ್ನು ವರ್ಗಾಯಿಸಿಕೊಳ್ಳುತ್ತೇನೆ. ಮತ ಚಲಾಯಿಸದ ಬಗ್ಗೆ ನನಗೆ ಬೇಸರವಿದೆ ಎಂದು ಸ್ಪಷ್ಟನೆ ನೀಡಿದ್ದರು.

ಭೂಪಾಲ್​ನಿಂದ ಸ್ಪರ್ಧಿಸುತ್ತಿರುವ ಸಿಂಗ್​ ವಿರುದ್ಧ ಮಲೆಂಗಾವ್​ ಸ್ಪೋಟದ ಆರೋಪಿ., ಬಿಜೆಪಿ ಅಭ್ಯರ್ಥಿ ಪ್ರಗ್ಯಾ ಠಾಕೂರ್​ ಎದುರಾಳಿಯಾಗಿರುವ ಹಿನ್ನೆಲೆ ಅವರು ಕ್ಷೇತ್ರ ಬಿಟ್ಟು ಕದಲಿಲ್ಲ. ದಿನವೀಡಿ ಭೂಪಾಲ್​ನ ವಿವಿಧ ಮತಗಟ್ಟೆ ಪರಿಶೀಲನೆ ಕಾರಣದಿಂದ ತಮ್ಮ ಹಕ್ಕು ಚಲಾವಣೆಯಿಂದ ವಂಚಿತರಾಗಿದ್ದಾರೆ.

ದಿಗ್ವಿಜಯ್​ ಸಿಂಗ್​ ಈ ಕಾರ್ಯಕ್ಕೆ ಕಡು ಟೀಕೆ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, ಪ್ರಜಾಪ್ರಭುತ್ವ ಹಬ್ಬದಲ್ಲಿ ಭಾಗಿಯಾಗದೆ ಅವರು ಅಪಚಾರವೆಸಗಿದ್ದಾರೆ. ರಾಷ್ಟ್ರಪತಿ, ಉಪರಾಷ್ಟ್ರಪತಿಗಳೇ ಸಾಲಿನಲ್ಲಿ ನಿಂತು ಮತಹಾಕಿದ್ದಾರೆ, ಆದರೆ, ನೀವು ನಿಮ್ಮ ಕರ್ತವ್ಯ ನೆರವೇರಿಸಿಲ್ಲ ಎಂದು ಮಧ್ಯಪ್ರದೇಶದ ರಾಟ್ಲಾಮ್​ ಜಿಲ್ಲೆಯ ಚುನಾವಣಾ ರ್ಯಾಲಿಯಲ್ಲಿ ವಾಗ್ದಾಳಿ ನಡೆಸಿದರು.

Comments are closed.