ರಾಷ್ಟ್ರೀಯ

ಕಿಂಗ್ಸ್​ ಇಲೆವೆನ್​ ಪಂಜಾಬ್​ ತಂಡದ ಸಹ ಮಾಲೀಕ ನೆಸ್​ವಾಡಿಯಾಗೆ ಎರಡು ವರ್ಷ ಜೈಲು ಶಿಕ್ಷೆ !

Pinterest LinkedIn Tumblr

ನವದೆಹಲಿ: ಬಾಲಿವುಡ್ ನಟಿ ಪ್ರೀತಿ ಜಿಂಟಾರ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಸಹ ಮಾಲೀಕ ನೆಸ್ ವಾಡಿಯಾಗೆ ಜಪಾನ್ ನಲ್ಲಿ ಎರಡು ವರ್ಷ ಜೈಲು ಶಿಕ್ಷೆಗೆ ಗುರಿಯಾಗಿದ್ದಾರೆ.

283 ವರ್ಷಗಳ ಇತಿಹಾಸವಿರುವ ವಾಡಿಯಾ ಸಮೂಹ ಸಂಸ್ಧೆಗಳ ಮುಖ್ಯಸ್ಥ ನೆಸ್ ವಾಡಿಯಾಗೆ ಜಪಾಸಿನ ಕೋರ್ಟ್ ಜೈಲು ಶಿಕ್ಷೆ ನೀಡಿದೆ. ಕಳೆದ ಮಾರ್ಚ್ ನಲ್ಲಿ ನೆಸ್ ವಾಡಿಯಾ 25 ಗ್ರಾಂ ಗಾಂಜಾ ಹೊಂದಿದ್ದಾಗ ಅವರನ್ನು ಬಂಧಿಸಲಾಗಿತ್ತು.

ನೆಸ್ ವಾಡಿಯಾ ಜಾಕೆಟ್ ನ ಜೇಬಿನಲ್ಲಿ ಗಾಂಜಾ ಇದ್ದ ಹಿನ್ನೆಲೆಯಲ್ಲಿ ಜಪಾನಿನ ನ್ಯೂ ಚಿತೊಸೆ ವಿಮಾನ ನಿಲ್ದಾಣದಲ್ಲಿ ಐಲ್ಯಾಂಡ್ ನ ಹೊಕ್ಕಾಯ್ದೊ ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದರು.

ಇದು ನನ್ನ ವೈಯಕ್ತಿಕ ಬಳಕೆಗಾಗಿ ತಂದಿದ್ದೇ ಹೊರತು ಮಾರಾಟ ಮಾಡುವ ಉದ್ದೇಶವಿರಲಿಲ್ಲ ಎಂದು ನೆಸ್ ವಾಡಿಯಾ ಹೇಳಿದ್ದರು. ಆದರೆ ಜಪಾನ್ ಮಾದಕ ವಸ್ತುಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳುತ್ತಿರುವುದರಿಂದ ನೆಸ್ ವಾಡಿಯಾಗೆ ಜೈಲು ಶಿಕ್ಷೆ ವಿಧಿಸಲಾಗಿದೆ.

Comments are closed.