ರಾಷ್ಟ್ರೀಯ

ಗುಮ್​ನಾಮಿ ಬಾಬಾನೇ ನೇತಾಜಿ ಸುಭಾಷ್ ಚಂದ್ರ ಬೋಸ್: ಅಮೆರಿಕ ಹಸ್ತಾಕ್ಷರ ತಜ್ಞರು

Pinterest LinkedIn Tumblr


ನವದೆಹಲಿ: ಸ್ವಾತಂತ್ರ್ಯ ನಂತರವೂ ಹಲವು ದಶಕಗಳ ಕಾಲ ನೇತಾಜಿ ಸುಭಾಷ್ ಚಂದ್ರ ಬೋಸ್ ಭಾರತದಲ್ಲಿ ನೆಲೆಸಿದ್ದರು ಎನ್ನುವುದು ಇತ್ತೀಚೆಗೆ ಅಮೆರಿಕ ಹಸ್ತಾಕ್ಷರ ತಜ್ಞರು ನೀಡಿರುವ ವರದಿಯಿಂದ ಸಾಬೀತಾಗಿದೆ.

ಬೋಸ್ ಸ್ವಾತಂತ್ರ್ಯ ನಂತರ ಉತ್ತರಪ್ರದೇಶದ ಫೈಜಾಬಾದ್​ನಲ್ಲಿ ಗುಮ್​ನಾಮಿ ಬಾಬಾ ಎಂಬ ಪರಿಚಯದೊಂದಿಗೆ ಜೀವಿಸಿದ್ದರು ಎನ್ನಲಾಗಿದೆ. ಈ ಬಗ್ಗೆ ಚಂದ್ರಚೂಡ್ ಘೋಷ್ ಮತ್ತು ಅನುಜ್ ಧಾರ್ ಎನ್ನುವವರು ‘ಕೊನುಂಡ್ರಮ್ ಸುಭಾಷ್ ಬೋಸ್ ಲೈಫ್ ಆಫ್ಟರ್ ಡೆತ್’ ಎನ್ನುವ ಪುಸ್ತಕ ಬರೆದಿದ್ದು, ಇದರಲ್ಲಿ ಗುಮ್​ನಾಮಿ ಬಾಬಾ ಮತ್ತು ಪಬಿತ್ರ ಮೋಹನ್ ರಾಯ್ ನಡುವೆ 1962-1985ರವರೆಗೆ ನಡೆದಿರುವ ಪತ್ರ ಸಂಭಾಷಣೆಗಳನ್ನು ಉಲ್ಲೇಖಿಸಲಾಗಿದೆ.

ಅಮೆರಿಕದ ಬ್ಯುರೋ ಆಫ್ ಡಾಕ್ಯುಮೆಂಟ್ ಎಕ್ಸಾಮಿನರ್ಸ್ ಗಳೆಂದು ಸರ್ಟಿಫಿಕೇಟ್ ಪಡೆದುಕೊಂಡಿರುವ ಕಾರ್ಲ್ ಬೆಗೆಟ್ ನೇತಾಜಿ ಮತ್ತು ಗುಮ್​ನಾಮಿ ಬಾಬಾರ ಹಸ್ತಾಕ್ಷರಗಳನ್ನು ಹೋಲಿಕೆ ಮಾಡಿದ್ದಾರೆ. ಎರಡೂ ಒಬ್ಬರದ್ದೇ ಹಸ್ತಾಕ್ಷರ ಎಂದು ಖಚಿತಪಡಿಸಿದ್ದಾರೆ. ಬಗೆಟ್​ಗೆ ಪತ್ರಗಳನ್ನು ನೀಡಿದ್ದರೂ, ಆರಂಭದಲ್ಲಿ ಯಾರ ಪತ್ರಗಳೆಂದು ಹೇಳಿರಲಿಲ್ಲ. ಪರಿಶೀಲನೆ ನಡೆಸಿದ ಬಗೆಟ್ ಪತ್ರಗಳಲ್ಲಿರುವುದು ಒಬ್ಬರದ್ದೇ ಅಕ್ಷರಗಳು ಎಂದು ಖಚಿತಪಡಿಸಿದ್ದಾರೆ ಎನ್ನಲಾಗಿದೆ.

Comments are closed.