ರಾಷ್ಟ್ರೀಯ

ಪ್ರಧಾನಿ ಮಾಡಿದ ಉತ್ತರಪ್ರದೇಶ ಈಗ ನಿಮ್ಮನ್ನು ಆ ಹುದ್ದೆಯಿಂದ ಕಿತ್ತೆಸೆಯುತ್ತದೆ- ಮೋದಿಗೆ ಮಾಯಾವತಿ

Pinterest LinkedIn Tumblr


ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಮೇಲೆ ವಾಗ್ದಾಳಿ ನಡೆಸಿರುವ ಬಿಎಸ್ಪಿ ನಾಯಕಿ ಮಾಯಾವತಿ ‘ಉತ್ತರ ಪ್ರದೇಶ ನಿಮ್ಮನ್ನು ಪ್ರಧಾನಿ ಮಾಡಿರಬಹುದು ಆದರೆ ಈಗ ಅದಕ್ಕೆ ತೆಗೆದು ಹಾಕುವ ಸಾಮರ್ಥ್ಯವು ಕೂಡ ಇದೆ’ ಎಂದು ಹೇಳಿದರು.

ಮೋದಿ ವಿರುದ್ದ ಸರಣಿ ಟ್ವೀಟ್ ಗಳ ಮೂಲಕ ಟೀಕಾ ಪ್ರಹಾರ ನಡೆಸಿರುವ ಮಾಯಾವತಿ, ಈಗ ನಡೆಯುತ್ತಿರುವ ಲೋಕಸಭಾ ಚುನಾವಣೆಯಲ್ಲಿ ಉತ್ತರ ಪ್ರದೇಶದ ಜನರು ಪ್ರಧಾನಿಯನ್ನು ಕಿತ್ತೊಗೆಯಲು ನಿರ್ಧರಿಸಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.

“ಪ್ರಧಾನಿ ಮೋದಿ ಉತ್ತರ ಪ್ರದೇಶ ತಮ್ಮನ್ನು ಪ್ರಧಾನಮಂತ್ರಿಯನ್ನಾಗಿ ಮಾಡಿದೆ ಎಂದು ಹೇಳುತ್ತಾ ದೇಶ ಸುತ್ತುತ್ತಿದ್ದಾರೆ.ಈ ಹೇಳಿಕೆ 100 ಪರ್ಸೆಂಟ್ ನಿಜಾ ಕೂಡ. ಆದರೆ ಪ್ರಧಾನಿಯಾದ ನಂತರ ಯಾಕೆ ತಮ್ಮ ಭರವಸೆಗಳಿಂದ ಮೋದಿ ಹಿಂದೆ ಸರಿದರು ಎಂದು ಜನರು ಕೇಳುತ್ತಿದ್ದಾರೆ. ಆದ್ದರಿಂದ ಉತ್ತರ ಪ್ರದೇಶದ ಜನರು ಅವರನ್ನು ಪ್ರಧಾನಿಯನ್ನಾಗಿ ಮಾಡಿದ್ದರೆ ಅದೇ ರೀತಿಯಾಗಿ ಅವರು ಆ ಹುದ್ದೆಯಿಂದಲೂ ಕೂಡ ಕಿತ್ತೊಗೆಯುತ್ತಾರೆ “ಎಂದು ಮಾಯಾವತಿ ಟ್ವೀಟ್ ನಲ್ಲಿ ಹೇಳಿದ್ದಾರೆ.

ಇದೇ ವೇಳೆ ಪ್ರಧಾನಿ ಮೋದಿ ಕೇವಲ ರಾಜಕೀಯ ಹಿತಾಸಕ್ತಿಗಾಗಿ ತಮ್ಮನ್ನು ಹಿಂದುಳಿದ ಜಾತಿಗೆ ಸೇರಿದರು ಎಂದು ಹೇಳಿಕೊಳ್ಳುತ್ತಿದ್ದಾರೆ. ಆದರೆ ಎಸ್ಪಿ-ಬಿಎಸ್ಪಿ-ಆರ್ಎಲ್ಡಿ ಈಗ ಜನರಿಗೆ ಧ್ವನಿಯಾಗುವ ನಿಟ್ಟಿನಲ್ಲಿ ದೇಶದ ಉಳಿವಿಗಾಗಿ ಕೈಜೋಡಿಸಿವೆ ಎಂದು ಮಾಯಾವತಿ ಹೇಳಿದರು.

Comments are closed.