ರಾಷ್ಟ್ರೀಯ

ಬಿಎಸ್‍ಪಿ ಬದಲು ಬಿಜೆಪಿ ಬಟನ್ ಒತ್ತಿದ ತಪ್ಪಿಗೆ ತನ್ನೆ ಬೆರಳನ್ನೇ ಕಟ್ ಮಾಡಿಕೊಂಡ ಯುವಕ

Pinterest LinkedIn Tumblr

ಲಕ್ನೋ: ದಲಿತ ಮತದಾರರೊಬ್ಬರು ಬಿಜೆಪಿಗೆ ಮತ ಹಾಕಿದ್ದರಿಂದ ವಿಚಲಿತಗೊಂಡು ತನ್ನ ಕೈ ಬೆರಳನ್ನೇ ತಾನೇ ತುಂಡು ಮಾಡಿಕೊಂಡ ವಿಲಕ್ಷಣ ಘಟನೆಯೊಂದು ಉತ್ತರ ಪ್ರದೇಶದ ಬುಲಂದರ್‍ಶಾಹರ್ ಕ್ಷೇತ್ರದಲ್ಲಿ ನಡೆದಿದೆ.

25 ವರ್ಷದ ಪವನ್ ಕುಮಾರ್ ಕೈ ಬೆರಳು ಕಳೆದುಕೊಂಡ ಯುವಕನಾಗಿದ್ದು, ಈತ ಶಿಕಾರ್‍ಪುರ್ ಪ್ರದೇಶದ ಅಬ್ದುಲ್ಲಪುರ್ ಹುಲ್ಸಾನ್ ಗ್ರಾಮದವನಾಗಿದ್ದಾನೆ. ಶುಕ್ರವಾರ ಲೋಕಸಭಾ ಚುನಾವಣೆಯ 2ನೇ ಹಂತದ ಮತದಾನ ನಡೆಯುತಿತ್ತು. ಹೀಗಾಗಿ ಮತ ಹಾಕಲು ತೆರಳಿದ್ದ ಪವನ್, ಇವಿಎಂ ಯಂತ್ರದಲ್ಲಿ ಬಿಎಸ್‍ಪಿ ಬದಲು ಬಿಜೆಪಿ ಬಟನ್ ಒತ್ತಿದ್ದಾನೆ. ಬಳಿಕ ತಪ್ಪು ಅರಿವಾದ ಬಳಿಕ ತನ್ನ ಬೇಸರಗೊಂಡ ಪವನ್, ಕುಡುಗೋಲಿನಿಂದ ತನ್ನ ಬೆರಳು ಕಟ್ ಮಾಡಿಕೊಂಡಿದ್ದಾನೆ.

 

ತಾನು ಮಾಡಿದ ತಪ್ಪಿಗೆ ಯುವಕ ವಿಡಿಯೋ ಮಾಡುವ ಮೂಲಕ ವಿಷಾದ ವ್ಯಕ್ತಪಡಿಸಿದ್ದಾನೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ವರದಿಗಳ ಪ್ರಕಾರ ಪವನ್, ಎಸ್‍ಪಿ-ಬಿಎಸ್‍ಪಿ-ಆರ್‍ಎಲ್‍ಡಿ ಮೈತ್ರಿ ಅಭ್ಯರ್ಥಿ ಯೋಗೇಶ್ ವರ್ಮಾ ಅವರಿಗೆ ಮತದಾನ ಮಾಡಬೇಕಿತ್ತು. ಆದ್ರೆ ಇವಿಎಂ ಯಂತ್ರದಲ್ಲಿ ಬಿಜೆಪಿ ಅಭ್ಯರ್ಥಿ ಬೋಲಾ ಸಿಂಗ್ ಅವರಿಗೆ ವೋಟ್ ಮಾಡಿದ್ದಾನೆ. ಇದರಿಂದ ವಿಚಲಿತನಾದ ಪವನ್ ತನ್ನ ತಪ್ಪಿಗೆ ವೋಟ್ ಹಾಕಿದ ಕೈ ಬೆರಳನ್ನೇ ಕತ್ತರಿಸಿಕೊಂಡಿದ್ದಾನೆ.

Comments are closed.