ರಾಷ್ಟ್ರೀಯ

ಪ್ರಿಯಾಂಕಾ ಗಾಂಧಿಯನ್ನು ದೇಶದ ಜನತೆ ‘ಕಳ್ಳನ ಪತ್ನಿ’ ಎಂಬಂತೆ ಕಾಣುತ್ತಿದ್ದಾರೆ: ಉಮಾ ಭಾರತಿ ವಿವಾದ

Pinterest LinkedIn Tumblr

ದುರ್ಗ್(ಛತ್ತೀಸ್ ಗಢ): ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ವಾದ್ರಾರನ್ನು ದೇಶದ ಜನತೆ “ಕಳ್ಳನ ಪತ್ನಿ(ಚೋರ್ ಕಿ ಪತ್ನಿ)” ಎಂಬಂತೆ ಕಾಣುತ್ತಿದ್ದಾರೆ ಎಂದು ಹೇಳಿರುವ ಕೇಂದ್ರ ಸಚಿವೆ ಉಮಾ ಭಾರತಿ ಹೊಸದೊಂದು ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.

ಉತ್ತರ ಪ್ರದೇಶದ ಲೋಕಸಭೆ ಚುನಾವಣೆಯ ಫಲಿತಾಂಶದ ಮೇಲೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಪ್ರಿಯಾಂಕಾ ಗಾಂಧಿಯವರ ಯಾವ ಪ್ರಭಾವವೂ ಏನೂ ಮಾಡುವುದಿಲ್ಲ ಎಂದು ಹೇಳಿದ ಉಮಾ ಭಾರತಿ ದೇಶದ ಜನತೆ ಪ್ರಿಯಾಂಕಾ ಅವರನ್ನು “ಕಳ್ಳನ ಪತ್ನಿ”ಯಂತೆ ಕಾಣುತ್ತದೆ ಎಂದಿದ್ದಾರೆ.

ನರೇಂದ್ರ ಮೋದಿ ಸಂಸದರಾಗಿರುವ ವಾರಣಾಸಿ ಕ್ಷೇತ್ರದಿಂದ ಪ್ರಿಯಾಂಕಾ ಗಾಂಧಿ ಸ್ಪರ್ಧಿಸಲಿದ್ದಾರೆ ಎಂಬ ಸುದ್ದಿ ಮಾದ್ಯಮಗಳಲ್ಲಿ ಹರಿದಾಡುತ್ತಿದೆ.ಈ ಕುರಿತು ಪ್ರಿಯಾಂಕಾ ಸಹ “ಅದು ಪ್ರಜಾಪ್ರಭುತ್ವ, ಯಾರೂ ಎಲ್ಲಿಂದಲಾದರೂ ಚುನಾವಣೆಗೆ ನಿಲ್ಲಬಹುದು” ಎನ್ನುವ ಮೂಲಕ ತಾವು ವಾರಣಾಸಿಯಿಂದ ನಿಲ್ಲುವ ಸೂಚನೆ ಸಹ ನೀಡಿದ್ದಾರೆ.

ಛತ್ತೀಸ್ ಗಢದ ದುರ್ಗ್ ನಲ್ಲಿ ಮಾತನಾಡುತ್ತಾ ಉಮಾ ಭಾರತಿ”ಪ್ರಿಯಾಂಕಾ ಏಕೆ ಉತ್ತರ ಪ್ರದೇಶದ ಫಲಿತಾಂಶದ ಮೇಲೆ ಪ್ರಭಾವ ಬೀರುತ್ತಾರೆ? ಅವರ ಪತಿ ಕಳ್ಳತನದ ಆರೋಪ ಎದುರಿಸುತ್ತಿದ್ದಾರೆ, ಭಾರತ ಅವರನ್ನು ಕಳ್ಳನ ಹೆಂಡತಿ ಎಂಬಂತೆ ಕಾಣುತ್ತಿದೆ” ಎಂದರು. ಅಲ್ಲದೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅಮೇಥಿ ಹಾಗೂ ಕೇರಳದ ವಯನಾಡ್ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸುವ ಮೂಲಕ ಅವರಾಗಲೇ ಸೋಲೊಪ್ಪಿಕೊಂಡಿದ್ದಾರೆ ಎಂದೂ ಹೇಳಿದ್ದಾರೆ. ಉಮಾ ಭಾರತಿ ದುರ್ಗ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪರ ಮತ ಪ್ರಚಾರ ನಡೆಸಿದ್ದ್ದಾರೆ.

ಸಮಾಜವಾದಿ ಪಕ್ಷದ ಅಜಂ ಖಾನ್ ಬಿಜೆಪಿಯ ಜಯಪ್ರದಾ ಅವರ ವಿರುದ್ಧ ಮಾಡ್ರುವ ಅವಹೇಳನಾಕಾರಿ ಟೀಕೆಯ ಬಗೆಗೆ ಪ್ರತಿಕ್ರಯಿಸಿರುವ ಉಮಾ ಭಾರತಿ ಅವರನ್ನು ಲೋಕಸಭೆ ಕಣದಿಂದ ಅಮಾನತುಗೊಳಿಸಬೇಕು ಎಂದು ಆಗ್ರಹಿಸಿದರು. ಖಾನ್ ಹಾಗೂ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಗೆ ಚುನಾವಣಾ ಆಯೋಗ ಸಮಾನ ಶಿಕ್ಷೆ ವಿಧಿಸಿರುವುದು “ಅನ್ಯಾಯ” ಎಂದು ಉಮಾ ಭಾರತಿ ಭಾವಿಸಿದ್ದಾರೆ.

ಆದಿತ್ಯನಾಥ್ ದೇವರ ಹೆಸರು ಹೇಳಿ ಯಾವುದೇ ಮಹಿಳೆಗೆ ಅವಮಾನ ಮಾಡಿಲ್ಲ ಎಂದು ಹೇಳಿದ ಉಮಾ ಭಾರತಿ ಮಹಿಳೆಗೆ ಅಪಮಾನಕ್ಕೆ ಸಂಬಂಧಿಸಿದ ಐಪಿಸಿ ಸೆಕ್ಷನ್ ಗಳ ಎಲ್ಲಾ ವಿಭಾಗಗಳ ಅಡಿಯಲ್ಲಿ ಅಜಂ ಖಾನ್ ವಿರುದ್ಧ ಪ್ರಕರಣ ದಾಖಲಿಸ್ಕೊಳ್ಲಬೇಕು ಎಂದಿದ್ದಾರೆ.

“ಪ್ರಚೋದನಾಕಾರಿ” ಹೇಳಿಕೆ ನೀಡಿದ್ದ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಗೆ ಚುನಾವಣಾ ಆಯೋಗ ಮಂಗಳವಾರ ಬೆಳಗಿನಿಂದ ಮೂರು ದಿನಗಳ ಕಾಲ ಚುನಾವಣಾ ಪ್ರಚಾರವನ್ನು ಬಹಿಷ್ಕರಿಸಿದೆ. ಇದೇ ರೀತಿ ಮಹಿಳೆಗೆ ಅವಮಾನ ಮಾಡಿದ ಅಜಂ ಖಾನ್ ಗೆ ಸಹ ಆಯೋಗ ಗೆ ಮೂರು ದಿನಗಳ ಪ್ರಚಾರ ನಿಷೇಧ ವಿಧಿಸಿದೆ.

Comments are closed.