ರಾಷ್ಟ್ರೀಯ

ಬೈಕ್‌ ಮೂಲಕ ಇನ್ನೊಂದು ಆತ್ಮಾಹುತಿ ದಾಳಿಗೆ ಉಗ್ರರ ಪ್ಲ್ಯಾನ್?

Pinterest LinkedIn Tumblr


ಶ್ರೀನಗರ: ಪುಲ್ವಾಮ ಮಾದರಿಯ ಇನ್ನೊಂದು ಆತ್ಮಾಹುತಿ ದಾಳಿಗೆ ಉಗ್ರ ಸಂಘಟನೆಗಳು ಸಿದ್ಧವಾಗಿವೆಯೇ? ಗುಪ್ತಚರ ಮೂಲಗಳಿಂದ ಸಿಕ್ಕಿರುವ ಮಾಹಿತಿಗಳ ಪ್ರಕಾರ ಇಂತಹದ್ದೊಂದು ದಾಳಿಗಳಾಗುವ ಸಾಧ್ಯತೆಗಳಿವೆ ಮತ್ತು ಈ ಬಾರಿ ಬೈಕನ್ನು ಬಳಸಿಕೊಂಡು ದಾಳಿಯನ್ನು ನಡೆಸಲು ಉಗ್ರಸಂಘಟನೆಗಳು ಯೋಜನೆ ಹಾಕಿಕೊಂಡಿವೆ ಎಂಬ ಆತಂಕಕಾರಿ ಮಾಹಿತಿ ಬಯಲಾಗಿದೆ. ಗುಪ್ತಚರ ಮಾಹಿತಿ ಮೂಲಗಳಿಂದ ಲಭ್ಯವಾಗಿರುವ ಮಾಹಿತಿಯ ಮೇರೆಗೆ ಖಾಸಗಿ ಸುದ್ದಿವಾಹಿನಿಯೊಂದು ಈ ವಿವರವನ್ನು ಬಹಿರಂಗಗೊಳಿಸಿದೆ.

ಗುಪ್ತಚರ ಮಾಹಿತಿಗಳನ್ನು ಆಧರಿಸಿ ಹೇಳುವುದಾದರೆ, ಉಗ್ರರು ರಿಮೋಟ್‌ ಕಂಟ್ರೋಲ್‌ ಬಳಸಿ ಜಮ್ಮು ರಾಷ್ಟ್ರೀಯ ಹೆದ್ದಾರಿಯಲ್ಲಿ ಸ್ಪೋಟವೊಂದನ್ನು ನಡೆಸಲು ಸಂಚು ನಡೆಸಿರುವುದು ಗೊತ್ತಾಗಿದೆ. ಈ ಮಾಹಿತಿಯಿಂದ ಎಚ್ಚೆತ್ತುಕೊಂಡಿರುವ ಭದ್ರತಾ ಪಡೆಗಳು ಹೆದ್ದಾರಿಯುದ್ದಕ್ಕೂ ಭದ್ರತೆಯನ್ನು ಬಿಗಿಗೊಳಿಸಿವೆ ಮತ್ತು ಎಲ್ಲಾ ಭದ್ರತಾ ಪಡೆಗಳ ಜವಾನರನ್ನು ರಾಷ್ಟ್ರೀಯ ಹೆದ್ದಾರಿ ಮೂಲಕ ಕರೆದೊಯ್ಯುವ ಸೇನಾ ವಾಹನಗಳು ಬೆಳಿಗ್ಗೆ 9 ಗಂಟೆಯ ಬಳಿಕವಷ್ಟೇ ಪ್ರಯಾಣಿಸಬೇಕೆಂದು ಆದೇಶಹೊರಡಿಸಿವೆ.

ಜಮ್ಮು ಕಾಶ್ಮೀರದ ಭಯೋತ್ಪಾದನಾ ನಿಗ್ರಹ ವಿಭಾಗದಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ತನಿಖಾ ಮತ್ತು ಭದ್ರತಾ ದಳವು ಈ ಕುರಿತಾಗಿ ವರದಿಯೊಂದನ್ನು ಸಿದ್ಧಪಡಿಸಿದೆ. ಮತ್ತು ತನ್ನ ಆ ವರದಿಯಲ್ಲಿ ಅದು ಬಹಿರಂಗಗೊಳಿಸಿರುವ ಮಾಹಿತಿಗಳ ಪ್ರಕಾರ, ವಾಹನಗಳಲ್ಲಿರುವ ಕಳವು ನಿರೋಧಕ ಅಲಾರಾಂ ವ್ಯವಸ್ಥೆ ಅಥವಾ ಕೀಗಳು ಇತ್ತೀಚಿನ ದಿನಗಳಲ್ಲಿ ಉಗ್ರರಿಗೆ ಸುಧಾರಿತ ನ್ಪೋಟಕಗಳನ್ನು ನ್ಪೋಟಿಸಲು ಉತ್ತಮ ಸಾಧನವಾಗಿ ಮಾರ್ಪಟ್ಟಿದೆ.

Comments are closed.