ರಾಷ್ಟ್ರೀಯ

ಮದುವೆಯಾಗಲು ಇಷ್ಟವಿಲ್ಲದ ಯುವಕ; ಪ್ರೇಯಸಿಯನ್ನು ಕೊಲೆ ಮಾಡಿ ಸೂಟ್‍ಕೇಸ್‍ನಲ್ಲಿ ತುಂಬಿ ಚರಂಡಿಗೆ ಎಸೆದ

Pinterest LinkedIn Tumblr

ಹೈದರಾಬಾದ್: ಮೆಕ್ಯಾನಿಕಲ್ ಎಂಜಿನಿಯರ್ ಒಬ್ಬಾತ ಟೆಕ್ಕಿ ಪ್ರೇಯಸಿಯನ್ನೇ ಕೊಲೆ ಮಾಡಿ ಸೂಟ್‍ಕೇಸ್‍ನಲ್ಲಿ ತುಂಬಿ ಚರಂಡಿಗೆ ಎಸೆದಿರುವ ಘಟನೆ ನಗರದ ಮೆಡ್ಚಾಲ್ ನಲ್ಲಿ ನಡೆದಿದೆ.

ಮೃತ ಯುವತಿಯನ್ನು 25 ವರ್ಷದ ಸಾಫ್ಟ್ ವೇರ್ ಎಂಜಿನಿಯರ್ ಎಂದು ಗುರುತಿಸಲಾಗಿದೆ. ಯುವತಿಯನ್ನು ಕಾಲೇಜಿನಲ್ಲಿ ಗೆಳೆಯನಾಗಿದ್ದ ಮೆಕ್ಯಾನಿಕಲ್ ಎಂಜಿನಿಯರ್ ಸುನೀಲ್ ಕೊಲೆ ಮಾಡಿದ್ದಾನೆ. ಬಳಿಕ ಸೂಟ್‍ಕೇಸಿನಲ್ಲಿ ತುಂಬಿ ಚರಂಡಿಗೆ ಎಸೆದಿದ್ದಾನೆ. ಯುವತಿಯನ್ನು ಮದುವೆಯಾಗಲು ಇಷ್ಟವಿರದೇ ಆಕೆಯನ್ನು ಕೊಲೆ ಮಾಡಿದ್ದಾನೆ ಎಂದು ಪೊಲೀಸರು ಶಂಕಿಸಿದ್ದಾರೆ.

ಸ್ಥಳೀಯರು ಮೆಡ್ಚಾಲ್ ನಲ್ಲಿ ಶಾಲೆಯ ಸಮೀಪದ ಬಳಿ ಸೂಟ್ಕೇಸ್ ಬಿದ್ದಿರುವುದನ್ನು ನೋಡಿದ್ದಾರೆ. ತಕ್ಷಣ ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕೆ ಪೊಲೀಸರು ಬಂದು ಸೂಟ್‍ಕೇಸ್ ಓಪನ್ ಮಾಡಿದಾಗ ಟೆಕ್ಕಿ ಮೃತದೇಹ ಪತ್ತೆಯಾಗಿದೆ. ಮೃತ ಯುವತಿಯ ಪೋಷಕರು ಮಗಳು ಕಳೆದುಹೋದ ಮೂರು ದಿನಗಳ ನಂತರ ಅಂದರೆ ಮಾರ್ಚ್ 7 ರಂದು ಪೊಲೀಸ್ ಠಾಣೆಗೆ ಹೋಗಿ ದೂರು ದಾಖಲಿಸಿದ್ದರು ಎಂದು ತಿಳಿದು ಬಂದಿದೆ.

ನಮ್ಮ ಮಗಳು ಸುನೀಲ್ ಜೊತೆ ರಿಲೆಷನ್‍ಶಿಪ್ ನಲ್ಲಿ ಇರುವುದಾಗಿ ಹೇಳಿಕೊಂಡಿದ್ದಳು. ಇತ್ತೀಚೆಗೆ ಆತ ಕೆಲಸಕ್ಕಾಗಿ ಮಸ್ಕತ್‍ಗೆ ಹೋಗಲು ನಿರ್ಧರಿಸಿದ್ದನು. ಜೊತೆಗೆ ನಮ್ಮ ಮಗಳನ್ನು ಕರೆದುಕೊಂಡು ಹೋಗಲು ಇಷ್ಟಪಟ್ಟಿದ್ದನು. ಕೊನೆಗೆ ಮಾರ್ಚ್ 4 ರಂದು ಗೆಳೆಯನೊಂದಿಗೆ ಮಸ್ಕತ್‍ಗೆ ಹೋಗಲು ನಾವು ಆಕೆಯನ್ನು ಹೈದರಾಬಾದ್ ವಿಮಾನ ನಿಲ್ದಾಣಕ್ಕೆ ಡ್ರಾಪ್ ಮಾಡಿದ್ದೇವು. ಆಗಲೇ ನಮ್ಮ ಮಗಳನ್ನು ನಾವು ಕೊನೆಯದಾಗಿ ನೋಡಿದ್ದು ಎಂದು ಕುಟುಂಬವು ಹೇಳಿದೆ.

ಸುನಿಲ್ ಯುವತಿಯನ್ನು ತನ್ನೊಂದಿಗೆ ಲಾಡ್ಜ್ ನಲ್ಲಿ ಉಳಿದುಕೊಳ್ಳುವಂತೆ ಮನವೊಲಿಸಿದ್ದಾನೆ. ಒಂದು ದಿನದ ನಂತರ ಸುನೀಲ್ ಪ್ರೇಯಸಿ ಟೆಕ್ಕಿಯನ್ನು ಕೊಂದು ತನ್ನ ಸೂಟ್‍ಕೇಸಿನಲ್ಲಿ ದೇಹವನ್ನು ತುಂಬಿಸಿದ್ದಾನೆ. ಬಳಿಕ ಮೆಡ್ಚಾಲ್ ನಲ್ಲಿ ಚರಂಡಿಗೆ ಎಸೆದಿದ್ದಾನೆ ಎಂದು ಪೊಲೀಸ್ ಅಧಿಕಾರಿ ರಾಮಚಂದ್ರ ರಾವ್ ತಿಳಿಸಿದ್ದಾರೆ.

ಆರೋಪಿ ಸುನೀಲ್ ಬಿಹಾರದಿಂದ ಬಂದಿದ್ದು, ಎಂಜಿನಿಯರಿಂಗ್ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದನು. ಒಂದು ವರ್ಷದ ಹಿಂದೆ ಹೈದರಾಬಾದ್‍ಗೆ ಹೋಗಿದ್ದಾನೆ. ಮೃತ ಯುವತಿ ಕೂಡ ಹೈದರಾಬಾದ್‍ನಲ್ಲಿ ಕೆಲಸ ಮಾಡುತ್ತಿದ್ದರು. ಇಬ್ಬರು ತಮ್ಮ ತಮ್ಮ ಕುಟುಂಬದೊಂದಿಗೆ ವಾಸಿಸುತ್ತಿದ್ದರು ಎಂದು ತಿಳಿದು ಬಂದಿದೆ.

ಸದ್ಯಕ್ಕೆ ಆರೋಪಿ ಸುನೀಲ್ ವಿರುದ್ಧ ಯುವತಿಯ ಅಪಹರಣ ಮತ್ತು ಕೊಲೆಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

Comments are closed.