ರಾಷ್ಟ್ರೀಯ

ಅನಿಲ್‌ ಅಂಬಾನಿ ಕಂಪನಿಯ 143.7 ದಶಲಕ್ಷ ಯೂರೋ ತೆರಿಗೆ ಮನ್ನಾ ಮಾಡಿದ ಫ್ರಾನ್ಸ್ ! ಹಿಂದೆ ಯಾವುದೇ ರಾಜಕೀಯ ಹಸ್ತಕ್ಷೇಪ ನಡೆದಿಲ್ಲ ಎಂದ ಫ್ರಾನ್ಸ್

Pinterest LinkedIn Tumblr

ಪ್ಯಾರಿಸ್: ಅನಿಲ್‌ ಅಂಬಾನಿ ಒಡೆತನದ ರಿಲಯನ್ಸ್‌ ಕಮ್ಯುನಿಕೇಶನ್‌ ನ ಫ್ರೆಂಚ್‌ ನೋಂದಾಯಿತ ಟೆಲಿಕಾಮ್‌ ಸಂಸ್ಥೆಗೆ ಫ್ರಾನ್ಸ್‌ 143.7 ದಶಲಕ್ಷ ಯೂರೋ ತೆರಿಗೆ ಮನ್ನಾ ಮಾಡಿರುವ ಬಗ್ಗೆ ಫ್ರಾನ್ಸ್ ಸ್ಪಷ್ಟನೆ ನೀಡಿದೆ.

ತೆರಿಗೆ ಮನ್ನಾ ಮಾಡಿರುವುದರ ಹಿಂದೆ ಯಾವುದೇ ರಾಜಕೀಯ ಹಸ್ತಕ್ಷೇಪ ನಡೆದಿಲ್ಲ, ಈ ಪ್ರಕ್ರಿಯೆ ಫ್ರಾನ್ಸ್ ನ ತೆರಿಗೆ ಅಧಿಕಾರಿಗಳು ಹಾಗೂ ರಿಲಾಯನ್ಸ್ ನ ಅಂಗಸಂಸ್ಥೆ ನಡುವೆ ನಡೆದಿರುವ ಒಪ್ಪಂದ ಎಂದು ಫ್ರಾನ್ಸ್ ದೂತವಾಸ ಕಚೇರಿ ಪ್ರತಿಕ್ರಿಯೆ ನೀಡಿದೆ.

ಭಾರತ ಸರ್ಕಾರ 36 ರಾಫೆಲ್ ಯುದ್ಧ ವಿಮಾನ ಖರೀದಿ ಸಂಬಂಧ ಫ್ರಾನ್ಸ್ ಜತೆ ಒಪ್ಪಂದ ಮಾಡಿಕೊಂಡ ಕೆಲವೇ ತಿಂಗಳಲ್ಲಿ ಅನಿಲ್‌ ಅಂಬಾನಿ ಒಡೆತನದ ರಿಲಯನ್ಸ್‌ ಕಮ್ಯುನಿಕೇಶನ್‌ ನ ಫ್ರೆಂಚ್‌ ನೋಂದಾಯಿತ ಟೆಲಿಕಾಮ್‌ ಸಂಸ್ಥೆಗೆ ಫ್ರಾನ್ಸ್‌ 143.7 ದಶಲಕ್ಷ ಯೂರೋ ತೆರಿಗೆ ಮನ್ನಾ ಮಾಡಿತ್ತು. ಈ ಬೆಳವಣಿಗೆಯಲ್ಲಿ ರಾಜಕೀಯ ಹಸ್ತಕ್ಷೇಪ ಇದೆ ಎಂಬ ಮಾತು ಕೇಳಿಬಂದಿತ್ತು. ಫ್ರಾನ್ಸ್ ನ ತೆರಿಗೆ ಅಧಿಕಾರಿಗಳು ಹಾಗೂ ರಿಲಾಯನ್ಸ್ ಫ್ಲಾಗ್ 2008-12 ರಲ್ಲಿ ತೆರಿಗೆ ವಿವಾದವನ್ನು ಇತ್ಯರ್ಥಪಡಿಸಿಕೊಳ್ಳುವುದಕ್ಕೆ ಒಪ್ಪಂದಕ್ಕೆ ಮುಂದಾಗಿದ್ದವು ಎಂದು ಫ್ರಾನ್ಸ್ ಸ್ಪಷ್ಟನೆ ನೀಡಿದೆ.

Comments are closed.