
ಬೆಂಗಳೂರು: ಮೋದಿ ಪ್ರಧಾನಿಯಾಗೋಕ್ಕೆ ನಾಲಾಯಕ್. ಅವರದು ಕೇವಲ ಸುಬ್ಬರಾಯನಕೆರೆ ಭಾಷಣ. ವಾಜಪೇಯಿಗೆ ಬಂದ ಗತಿಯೇ ಮುಂದೆ ಅವರಿಗೂ ಬರಲಿದೆ ಎಂದು ಸಿದ್ದರಾಮಯ್ಯ ಭವಿಷ್ಯ ನುಡಿದಿದ್ದಾರೆ.
ದೇವೇಗೌಡರ ಪ್ರಚಾರ ಸಭೆಯಲ್ಲಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಮೋದಿ ಮೋದಿ ಅನ್ನಬೇಡಿ, ನಿಮಗೆ ಟೋಪಿ ಹಾಕ್ತಾರೆ. ಈಗಾಗಲೇ ಪ್ರಧಾನಿ ಮೋದಿ ತಿರುಪತಿ ನಾಮ ಹಾಕಿದ್ದಾರೆ. ಮೋದಿ ರೈತರ ಸಾಲಮನ್ನಾ ಮಾಡದ ದುರಾತ್ಮ. ಮೋದಿ ರಾಜ್ಯದ ನೀರಾವರಿಗೆ ಹಣ ಕೊಡುತ್ತಿಲ್ಲ. ಕರ್ನಾಟಕಕ್ಕೆ ನರೇಂದ್ರ ಮೋದಿ ಕೊಡುಗೆ ಏನು ಎಂದು ಪ್ರಶ್ನಿಸಿದರು.
5 ವರ್ಷದ ಆಡಳಿತದಲ್ಲಿ ಏನು ಸಾಧನೆ ಮಾಡಿದ್ದೇನೆಂದು ಹೇಳುವ ಬದಲು ಮಾತೆತ್ತಿದರೆ ಪುಲ್ವಾಮಾ, ಬಾಲಾಕೋಟ್ ಅಂತಾರೆ. ರಾಜ್ಯಕ್ಕೆ ಬಂದಾಗ ರಾಜ್ಯದ ಜನ್ರ ಸಮಸ್ಯೆ ಬಗ್ಗೆ ಮಾತನಾಡಿದ್ರಾ? ಹಿಂದುಳಿದ ವರ್ಗಗಳು, ದಲಿತರು, ಮಹಿಳೆಯರು ಪರಿಶಿಷ್ಟ ಜಾತಿ ಪಂಗಡದವರ ಬಗ್ಗೆ ಮಾತನಾಡಿದ್ರಾ. ಅವರಿಗೆ ನಾಚಿಕೆಯಾಗಬೇಕು ಎಂದು ವಾಗ್ದಾಳಿ ನಡೆಸಿದರು.
ಜನಸಂಘ ಹುಟ್ಟಿದಾಗಿನಿಂದಲೂ ಹೇಳುತ್ತಿರುವ ಘೋಷಣೆಯನ್ನೇ ಅಂದಿನಿಂದ ಇಂದಿನವರೆಗೂ ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಹೇಳುತ್ತಿದೆ. ಅಂದಿನಿಂದಲೂ ರಾಮಮಂದಿರ ನಿರ್ಮಾಣ ಚುನಾವಣಾ ವಿಷಯ ಮಾಡಿಕೊಂಡು ಜನ್ರನ್ನ ಮರಳು ಮಾಡುತ್ತಿದ್ದಾರೆ. ಯಾರೂ ನರೇಂದ್ರ ಮೋದಿ ನಂಬಬೇಡಿ ಎಂದು ಮನವಿ ಮಾಡಿದರು.
ನರೇಂದ್ರ ಮೋದಿ ಗೆದ್ದರೆ ಸಂವಿಧಾನ ಉಳಿಯಲ್ಲ. ಯಾರೂ ನರೇಂದ್ರ ಮೋದಿಗೆ ಓಟು ಹಾಕಬೇಡಿ. ಮೈಸೂರಲ್ಲಿ ಜೆಡಿಎಸ್ ನವರು ಓಟು ಹಾಕಲ್ವಂತೆ, ಮಂಡ್ಯದಲ್ಲಿ ಹಾಕಲ್ವಂತೆ, ಹಾಸನದಲ್ಲಿ ಹಾಕಲ್ವಂತೆ ಅಂತಾ ಬಿಜೆಪಿಯವರು ಬರೀ ಹಸಿಸುಳ್ಳು ಹಬ್ಬಿಸುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಬರುವುದನ್ನ ನಂಬಬೇಡಿ, ಆರ್ ಎಸ್ ಎಸ್ ನ ಹುಡುಗರು ಸಾಮಾಜಿಕ ಜಾಲತಾಣಕ್ಕೆ ಹಾಕುತ್ತಾರೆ. ಸುಳ್ಳು ಸುದ್ದಿಗಳನ್ನು ಸತ್ಯ ಎಂದು ಬಿಂಬಿಸಿ ಅವರು ಹರಿಯಬಿಡುತ್ತಾರೆ. ಇವರ ಬದಲು ದೇವೇಗೌಡರನ್ನ ಗೆಲ್ಲಿಸಿದ್ರೆ ನಿಮ್ಮ ಜಿಲ್ಲೆಯ ಘನತೆ ಹೆಚ್ಚಾಗುತ್ತದೆ ಎಂದರು
ವಿದೇಶಿ ಹಣ ತಂದು 15 ಲಕ್ಷಹಣ ಕೊಡ್ತೀನಿ ಅಂದ್ರು ಅದು ಆಗಲಿಲ್ಲ. ಉದ್ಯೋಗ ಸೃಷ್ಟಿಸಿ ಎಂದರೆ ಯುವಕರನ್ನ ಬೋಂಡ ಮಾರಿ ಪಕೋಡ ಮಾರಿ ಅಂತಾರೆ. ಪ್ರಧಾನಿಯಾಗಲು ಮೋದಿ ಅನಾಲಯಕ್ . ಜೆಪಿ ಅಭ್ಯರ್ಥಿಗಳು ನಮ್ ಮುಖ ನೋಡ್ಬೇಡಿ ಮೋದಿ ಮುಖ ನೋಡಿ ಅಂತಾರೆ. ಏನ್ ಮೋದಿ ಮುಖ ನೋಡ್ಬೇಕು. ಅವರೊಬ್ಬ ಮಹಾನ್ ಸುಳ್ಳಗಾರ ಎಂದು ವಾಗ್ದಾಳಿ ನಡೆಸಿದರು.
Comments are closed.