ರಾಷ್ಟ್ರೀಯ

ಕತ್ತೆಗಳ ಎದೆ 56 ಇಂಚು. ಶ್ರಮಜೀವಿಗಳಿಗೆ 36 ಇಂಚು ಮಾತ್ರ: ಮೋದಿ ವಿರುದ್ಧ ಮಾನಹಾನಿ ಹೇಳಿಕೆ

Pinterest LinkedIn Tumblr


ಗಾಂಧಿನಗರ: ಗುಜರಾತ್ ಕಾಂಗ್ರೆಸ್ ನ ಮಾಜಿ ಅಧ್ಯಕ್ಷ ಅರ್ಜುನ್ ಮೋಠವಾಡಿಯಾ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಮಾನಹಾನಿ ಹೇಳಿಕೆ ನೀಡಿದ್ದಾರೆ. ಮೋದಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಅರ್ಜುನ್ ‘ಕತ್ತೆಗಳ ಎದೆ ಮಾತ್ರ 56 ಇಂಚು ಇರುತ್ತದೆ ಎಂದಿದ್ದಾರೆ.

ಬನಾಸ್ ಕಾಂಟಾ ಜಿಲ್ಲೆಯ ದೀಸಾದಲ್ಲಿ ಆಯೋಜಿಸಲಾಗಿದ್ದ ಸಮಾವೇಶದಲ್ಲಿ 2014ರಲ್ಲಿ ‘ನನ್ನಂತೆ 56 ಇಂಚು ಎದೆಯುಳ್ಳ ವ್ಯಕ್ತಿ ಮಾತ್ರ ದೊಡ್ಡ ನಿರ್ಧಾರಗಳನ್ನು ಕೈಗೊಳ್ಳಲು ಸಾಧ್ಯ’ ಎಂದಿದ್ದ ಮೋದಿ ಮಾತುಗಳನ್ನು ಉಲ್ಲೇಖಿಸಿ ಮಾತನಾಡಿದ ಅರ್ಜುನ್ ‘ಓರ್ವ ಶ್ರಮಜೀವಿ ವ್ಯಕ್ತಿಯ 36 ಇಂಚು ಇರುತ್ತದೆ. ಬಾಡಿ ಬಿಲ್ಡರ್ ಎದೆ 42 ಇಂಚು ಇರಬಹುದು. ಕೇವಲ ಕತ್ತೆಗಳ ಎದೆ ಮಾತ್ರ 56 ಇಂಚಿರುತ್ತದೆ ಹಾಗೂ ಎತ್ತುಗಳ ಎದೆ 100 ಇಂಚು ಇರುತ್ತದೆ’ ಎಂದು ಕಿಡಿ ಕಾರಿದ್ದಾರೆ.

ಇದೇ ಸಂದರ್ಭದಲ್ಲಿ ಮೋದಿ ಅಭಿಮಾನಿಗಳ ಆಕ್ರೊಶ ವ್ಯಕ್ತಪಡಿಸಿದ ಅರ್ಜುನ್ ‘ಮೋದಿ ಬೆಂಬಲಿಗರಿಗೆ ಈ ವಿಚಾರ ತಿಳಿದಿಲ್ಲ ಹೀಗಾಗಿ ಯಾರಾದರೂ ನಿಮ್ಮ ನಾಯಕನ ಎದೆ 56 ಇಂಚು ಇದೆ ಎಂದರೆ ಖುಷಿ ಪಡುತ್ತಾರೆ’ ಎಂದಿದ್ದಾರೆ.

ಪ್ರಾದೇಶಿಕ ಬಿಜೆಪಿ ನಾಯಕರು ಅರ್ಜುನ್ ಮೋಠವಾಡಿಯಾ ಹೇಳಿಕೆಯನ್ನು ಖಂಡಿಸಿದ್ದಾರೆ. ಅರ್ಜುನ್ ಹೇಳಿಕೆಗೆ ಪ್ರತಿಕ್ರಿಯಿಸಿರುವ ಗುಜರಾತ್ ಬಿಜೆಪಿ ವಕ್ತಾರ ಭರತ್ ಪಾಂಡ್ಯಾ ‘ಸೋಲುವ ಭೀತಿಯಿಂದ ಕಾಂಗ್ರೆಸ್ ತನ್ನ ಮಾನಸಿಕ ಸ್ಥಿಮಿತ ಕಳೆದುಕೊಂಡಿದೆ ಎಂಬುವುದು ಇದರಿಂದ ಸಾಬೀತಾಗುತ್ತದೆ. ಅವರು ಬಳಸಿದ ಶಬ್ಧಗಳು ಅನುಚಿತ, ಆಘಾತಕಾರಿ ಹಾಗೂ ಖಂಡನೀಯ. ರಾಜ್ಯದ ಜನರು ಈ ಅವಮಾನಕಾರಿ ಹಾಗೂ ಪಾಕ್ ಸಮರ್ಥಿಸುವ ಭಾಷೆಗೆ ಚುನಾವಣೆಯಲ್ಲಿ ತಕ್ಕ ಉತ್ತರ ನೀಡುತ್ತಾರೆ’ ಎಂದಿದ್ದಾರೆ.

Comments are closed.