ರಾಷ್ಟ್ರೀಯ

ಕಾಶ್ಮೀರದಲ್ಲಿ ಉಗ್ರ ದಾಳಿ: ಆರ್ ಎಸ್ಎಸ್ ಮುಖಂಡ, ಅಂಗರಕ್ಷಕ ಸಾವು

Pinterest LinkedIn Tumblr


ಜಮ್ಮು: ಜಮ್ಮು ಮತ್ತು ಕಾಶ್ಮೀರದ ಕಿಶ್ತ್ವಾರ್ ಜಿಲ್ಲೆಯಲ್ಲಿ ಉಗ್ರರು ರಾಷ್ಟ್ರೀಯ ಸ್ವಯಂಸೇವಕ ಸಂಘ(ಆರ್ ಎಸ್ ಎಸ್) ನಾಯಕ ಚಂದ್ರಕಾಂತ್ ಶರ್ಮಾ ಹಾಗೂ ಅವರ ವೈಯಕ್ತಿಕ ಅಂಗರಕ್ಷಕನನ್ನು ಮಂಗಳವಾರ ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ.
ಇಂದು ಸ್ಥಳೀಯ ಆರ್ ಎಸ್ ಎಸ್ ಶಾಖೆಯ ನಾಯಕರಾದ ಚಂದ್ರಕಾತ್ ಶರ್ಮಾ ಹಾಗೂ ಅವರ ಅಂಗರಕ್ಷಕನ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿದ್ದು, ಘಟನೆಯಲ್ಲಿ ಅಂಗರಕ್ಷಕ ಸ್ಥಳದಲ್ಲೇ ಮೃತಪಟ್ಟಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಚಂದ್ರಕಾಂತ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಿಶ್ತ್ವಾರ್‌ ಜಿಲ್ಲಾಸ್ಪತ್ರೆಗೆ ನುಗ್ಗಿದ ಉಗ್ರರು, ವೈದ್ಯಕೀಯ ಅಧೀಕ್ಷರಾಗಿದ್ದ ಚಂದ್ರಕಾಂತ್ ಹಾಗೂ ಅವರ ಅಂಗರಕ್ಷಕನ ಮೇಲೆ ಗುಂಡು ಹಾರಿಸಿದ್ದಾರೆ.
ಘಟನೆ ಬಳಿಕ ಸ್ಥಳದಲ್ಲಿ ಕರ್ಫ್ಯೂ ಜಾರಿಗೊಳಿಸಲಾಗಿದ್ದು, ದಾಳಿ ನಡೆಸಿದವರ ಪತ್ತೆಗಾಗಿ ರಕ್ಷಣಾ ಪಡೆ ತೀವ್ರ ಶೋಧ ಕಾರ್ಯಾ ಆರಂಭಿಸಿದೆ.

Comments are closed.