ನವದೆಹಲಿ: ಮೊದಲ ಹಂತದ ಚುನಾವಣೆ ಕಣ ಈಗ ಕಾವೇರಿದ್ದು ಎಲ್ಲ ಪಕ್ಷಗಳು ಆರೋಪ ಪ್ರತ್ಯಾರೋಪದಲ್ಲಿ ತೊಡಗಿವೆ.ಈಗ ಪಶ್ಚಿಮ ಬಂಗಾಳದ ಕೂಚ್ ಬೆಹಾರ್ ನಲ್ಲಿನ ರ್ಯಾಲಿಯಲ್ಲಿ ಭಾಗವಹಿಸಿದ ಪ್ರಧಾನಿ ಮೋದಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜೀ ವಿರುದ್ಧ ವಾಗ್ದಾಳಿ ನಡೆಸಿದರು.
“ನೀವು ಮೋದಿ ಮೋದಿ ಎಂದು ಕೂಗುತ್ತಿದ್ದರೆ ಕೆಲವರು ತಮ್ಮ ನಿದ್ದೆಯನ್ನು ಕಳೆದುಕೊಳ್ಳುತ್ತಾರೆ,ಅವರ್ಯಾರು ಎಂದು ನಿಮಗೆ ಗೊತ್ತೇ ?ಸ್ಪೀಡ್ ಬ್ರೇಕರ್. ಅವರು ಪಶ್ಚಿಮ ಬಂಗಾಳದ ಸ್ಪೀಡ್ ಬ್ರೇಕರ್ ದೀದಿ. ಅವರು ನಿದ್ದೆಗೆಟ್ಟು ಈಗ ತಮ್ಮ ಅಧಿಕಾರಿಗಳ ಮೇಲೆ ಹಾಗೂ ಚುನಾವಣಾ ಆಯೋಗದ ಮೇಲೆ ಸಿಟ್ಟನ್ನು ತೋರಿಸುತ್ತಿದ್ದಾರೆ.ಯಾರು ಭಾರತಕ್ಕೆ ಇಬ್ಬರು ಪ್ರಧಾನಿ ಬೇಕು ಎಂದು ಹೇಳುತ್ತಾರೋ ಅಂತವರ ಜೊತೆ ಮಮತಾ ಬ್ಯಾನರ್ಜೀ ಇದ್ದಾರೆ” ಎಂದು ಮೋದಿ ಆರೋಪಿಸಿದರು.
ಪಶ್ಚಿಮ ಬಂಗಾಳದಲ್ಲಿ ಎಲ್ಲಾ ಏಳು ಹಂತಗಳಲ್ಲಿ ಚುನಾವಣೆ ನಡೆಯುತ್ತಿದ್ದು, ಬಿಜೆಪಿ ಈ ಬಾರಿ ಪಶ್ಚಿಮ ಬಂಗಾಳದಲ್ಲಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲಲು ಕಸರತ್ತು ನಡೆಸಿದೆ. ಮೊದಲ ಹಂತದ ಚುನಾವಣೆ ಏಪ್ರಿಲ್ ೧೧ ರಿಂದ ಪ್ರಾರಂಭವಾಗಲಿದೆ.
Comments are closed.