ರಾಷ್ಟ್ರೀಯ

ಕಾಂಗ್ರೆಸ್ ಗೆ ಜೈ ಎಂದ ಬಿಜೆಪಿ ನಾಯಕಗೆ ಒಂದೇ ಗಂಟೆಯಲ್ಲಿ ಲೋಕಸಭಾ ಟಿಕೆಟ್

Pinterest LinkedIn Tumblr


ನವದೆಹಲಿ : ಲೋಕಸಭಾ ಚುನಾವಣೆಗೆ ಇನ್ನೇನು ದಿನಗಣನೆ ಆರಂಭವಾಗುತ್ತಿರುವ ಬೆನ್ನಲ್ಲೇ ಬಿಜೆಪಿಯ ಟೀಕಾಕಾರರಾಗಿದ್ದ ಶತ್ರುಘ್ನ ಸಿನ್ಹಾ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ.

ಏಪ್ರಿಲ್ 6 ರಂದು ರಾಹುಲ್ ಗಾಂಧಿ ನೇತೃತ್ವದಲ್ಲಿ ಪಕ್ಷ ಸೇರಿದ್ದು, ಇದೀಗ ಅವರ ಸ್ವ ಕ್ಷೇತ್ರದಿಂದ ಕಾಂಗ್ರೆಸ್ ಸಿನ್ಹಾಗೆ ಟಿಕೆಟ್ ನೀಡಿದೆ.

ಶತ್ರುಘ್ನ ಸಿನ್ಹಾ ಅವರ ಕ್ಷೇತ್ರವಾದ ಪಾಟ್ನಾ ಸಾಹಿಬ್ ನಿಂದ ಈ ಬಾರಿ ಬಿಜೆಪಿ ರವಿ ಶಂಕರ್ ಪ್ರಸಾದ್ ಅವರನ್ನು ಕಣಕ್ಕೆ ಇಳಿಸಿತ್ತು. ಇದರಿಂದ ಅಸಮಾಧಾನಗೊಂಡಿದ್ದ ಸಿನ್ಹಾ ಅಂದೇ ಬಿಜೆಪಿ ತೊರೆಯುವುದಾಗಿ ಘೋಷಿಸಿದ್ದರು.

ಇದೀಗ ಕಾಂಗ್ರೆಸ್ ಸೇರಿದ ಒಂದೇ ಗಂಟೆಯಲ್ಲಿ ಶತ್ರುಘ್ನ ಸಿನ್ಹಾಗೆ ಕಾಂಗ್ರೆಸ್ ಪಾಟ್ನಾ ಸಾಹಿಬ್ ನಿಂದ ಟಿಕೆಟ್ ನೀಡಿ ಲೋಕಸಭಾ ಚುನಾವಣಾ ಕಣಕ್ಕೆ ಇಳಿಸಿದೆ.

Comments are closed.