ನವದೆಹಲಿ: ಮೊದಲ ಬಾರಿಗೆ ದೇಶೀಯವಾಗಿ ವಿನ್ಯಾಸಗೊಳಿಸಲ್ಪಟ್ಟ ಮತ್ತು ಅಭಿವೃದ್ಧಿಪಡಿಸಿದ ಧನುಷ್ 155 ಎಂಎಂ /45 ಕ್ಯಾಲಿಬರ್ ಟವಡ್ ಗನ್ ಸಿಸ್ಟಮ್ ಈಗ ಭಾರತೀಯ ಸೈನ್ಯಕ್ಕೆ ಸೇರ್ಪಡೆಯಾಗಿದೆ.ಭಾರತೀಯ ಸೈನ್ಯದ ಸಾರ್ವಜನಿಕ ಮಾಹಿತಿ ಹೆಚ್ಚುವರಿ ನಿರ್ದೇಶನಾಲಯವು ಧನುಷ್ 155 ಎಂಎಂ / 45 ಕ್ಯಾಲಿಬರ್ ಟವಡ್ ಗನ್ ಸಿಸ್ಟಮ್ ಸೋಮವಾರ ಆರ್ಡನ್ಸ್ ಕಾರ್ಖಾನೆಗಳ ಮಂಡಳಿಯಿಂದ ಸೈನ್ಯಕ್ಕೆ ಹಸ್ತಾಂತರಿಸಲಿದೆ ಎಂದು ಹೇಳಿದ್ದಾರೆ.
‘ದೇಸಿ ಬೊಫೋರ್ಸ್’ ಎಂದು ಕರೆಯಲ್ಪಡುವ ಧನುಷ್, ‘ಮೇಕ್ ಇನ್ ಇಂಡಿಯಾ’ ಯೋಜನೆ ಅಡಿಯಲ್ಲಿ ಉತ್ಪಾದನೆಯಾದ ಮೊದಲ ಸುದೀರ್ಘ-ಶ್ರೇಣಿಯ ಫಿರಂಗಿ ಗನ್ ಇದಾಗಿದೆ.ಸುಮಾರು 38 ಕಿಲೋಮೀಟರುಗಳಷ್ಟು ವಾಪ್ತಿಯನ್ನು ಹೊಡೆದುರುಳಿಸಬಹುದಾದ ಸಾಮರ್ಥ್ಯ ಧನುಷ್ ಹೊಂದಿದೆ. ಇದರ ಸುಮಾರು 81% ಘಟಕಗಳು ಸ್ಥಳೀಯ ಮೂಲದವುಗಳಾಗಿವೆ ಎನ್ನಲಾಗಿದೆ.
ಈ ಗನ್ ಅನ್ನು ಎಲ್ಲಾ ವಿಧದ ಭೂಪ್ರದೇಶಗಳಲ್ಲಿಯೂ ಬಳಸಿಕೊಳ್ಳಬಹುದು ಮತ್ತು ಜಡತ್ವ ಸಂಚರಣೆ-ಆಧರಿತ ದೃಷ್ಟಿಗೋಚರ ವ್ಯವಸ್ಥೆ, ಆಟೋ-ಲೇಯಿಂಗ್ ಸೌಲಭ್ಯ, ಆನ್-ಬೋರ್ಡ್ ಬ್ಯಾಲಿಸ್ಟಿಕ್ ಕಂಪ್ಯೂಟಿಂಗ್ ವ್ಯವಸ್ಥೆಯನ್ನು ಹೊಂದಿದೆ ಎನ್ನಲಾಗಿದೆ.ಇದು ಆಮದು ಮಾಡಲ್ಪಟ್ಟ ಬೊಫೋರ್ಸ್ ಬಂದೂಕುಗಳಿಗಿಂತ 11 ಕಿ.ಮೀ.ಅಧಿಕವಿದೆ ಎನ್ನಲಾಗಿದೆ.
ಈ ಬಂದೂಕು ವ್ಯವಸ್ಥೆಯು ಸ್ವಯಂ-ಚಾಲನೆ ಘಟಕವನ್ನು ಹೊಂದಿದ್ದು, ಇದು ಸ್ವತಃ ಸುಲಭವಾಗಿ ಬೆಟ್ಟದ ಭೂಪ್ರದೇಶಗಳಲ್ಲಿ ನಿಯೋಜಿಸಲು ಅನುವು ಮಾಡಿಕೊಡುತ್ತದೆ. ಧನುಷ್ನನ್ನು ವಿದ್ಯುನ್ಮಾನವಾಗಿ ಫೈರಿಂಗ್ ನಿಖರತೆಗಳನ್ನು ಹೆಚ್ಚಿಸಲು ಮತ್ತು ವಿವಿಧ ರೀತಿಯ ಸಾಮಗ್ರಿಗಳೊಂದಿಗೆ ಹೊಂದಾಣಿಕೆ ಮಾಡಲು ಅಪ್ಗ್ರೇಡ್ ಮಾಡಲಾಗಿದೆ.
Comments are closed.