ರಾಷ್ಟ್ರೀಯ

ಚುನಾವಣೆ ಸಂದರ್ಭದಲ್ಲಿ ಮಾತ್ರ ಕಾಂಗ್ರೆಸ್ಸಿಗೆ ಬಡವರು ನೆನಪಾಗುತ್ತಾರೆ: ಮೋದಿ

Pinterest LinkedIn Tumblr


ನವದೆಹಲಿ: ಚುನಾವಣೆ ಸಂದರ್ಭದಲ್ಲಿ ಮಾತ್ರ ಕಾಂಗ್ರೆಸ್ ಬಡತನ ನಿರ್ಮೂಲನೆ ಬಗ್ಗೆ ಮಾತಾಡುತ್ತದೆ. ಕಾಂಗ್ರೆಸ್ ಘೋಷಿಸಿರುವ​ ಕನಿಷ್ಠ ಆದಾಯ ಯೋಜನೆಯಿಂದ ದೇಶದಲ್ಲಿ ಹಣದುಬ್ಬರ ಉಂಟಾಗಲಿದೆ. ಚುನಾವಣೆ ಹೊತ್ತಲಿಯೇ ಮಾತ್ರ ಯಾಕೇ ಇವರು ಸುಳ್ಳು ಭರವಸೆಗಳನ್ನು ನೀಡುತ್ತಾರೆ. ಕಾಂಗ್ರೆಸ್ಸಿಗೆ ನಿಜವಾಗಿಯೂ ಬಡತನ ನಿರ್ಮೂಲನೆ ಮಾಡಬೇಕೆಂಬ ಕಾಳಜಿ ಇಲ್ಲ. ಕೇವಲ ವೋಟಿಗಾಗಿ ಚುನಾವಣಾ ಪ್ರಣಾಳಿಕೆಯಲ್ಲಿ ಈ ಭರವಸೆ ಸೇರಿಸಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿಯವರು ವ್ಯಂಗ್ಯವಾಡಿದ್ಧಾರೆ.

ಚುನಾವಣಾ ಪ್ರಚಾರದ ಭಾಗವಾಗಿ ಒರಿಸ್ಸಾದಲ್ಲಿ ಇಂದು ಬಿಜೆಪಿ ಸಾರ್ವಜನಿಕ ಸಮಾವೇಶವನ್ನು ಹಮ್ಮಿಕೊಂಡಿತ್ತು. ಇಲ್ಲಿ ವೇದಿಕೆ ಮೇಲೆ ಸಾರ್ವಜನಿಕರನ್ನುದ್ಧೇಶಿಸಿ ಮಾತಾಡಿದ ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ದಶಕಗಳಿಂದ ಬಡತನ ನಿರ್ಮೂಲನೆ ಬಗ್ಗೆ ಹೇಳುತ್ತಲೇ ಬರುತ್ತಿದೆ. ಆದರೂ ದೇಶದಲ್ಲಿ ಶ್ರೀಮಂತರು ಶ್ರೀಮಂತರಾಗಿಯೇ, ಬಡವರು ಬಡವರಾಗಿಯೇ ಉಳಿದಿದ್ದಾರೆ. ಇದರಲ್ಲಿ ಹೆಚ್ಚು ಶ್ರೀಮಂತರು ಕಾಂಗ್ರೆಸ್​ ಪಕ್ಷದವರೇ ಇದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಇನ್ನು ನಮ್ಮ ಕೇಂದ್ರ ಸರ್ಕಾರ ಒರಿಸ್ಸಾದ ರೈಲ್ವೆ ಹಳಿ ಅಭಿವೃದ್ಧಿಪಡಿಸಿದೆ. ಜತೆಗೆ 24 ಲಕ್ಷ ಜನರಿಗೆ ಉದ್ಯೋಗ ನೀಡಿದೆ. ಇಲ್ಲಿನ ಜನರಿಗೆ ಬಿಜೆಪಿ ಮೇಲೆ ನಂಬಿಕೆ ಬಂದಿದೆ. ಕಾಂಗ್ರೆಸ್​​-ಬಿಜೆಡಿ ಪಕ್ಷಕ್ಕೆ ಕೇವಲ ಬಡವರ ಮತಗಳ ಬೇಕಿದೆ, ರಾಜ್ಯದ ಅಭಿವೃದ್ದಿ ಬೇಕಿಲ್ಲ. ಹೀಗಾಗಿ ಈ ಬಾರಿ ಕೇಂದ್ರ ಮತ್ತು ಒರಿಸ್ಸಾದಲ್ಲಿ ಬಿಜೆಪಿ ಸರ್ಕಾರವನ್ನು ಗೆಲ್ಲಿಸಿ. ನಾವು ನಿಮ್ಮ ಪರವಾಗಿ ನಿಲ್ಲುತ್ತೇವೆ ಎಂದರು.

ಈ ಹಿಂದೆಯೂ ಕಾಂಗ್ರೆಸ್​ ವಿರುದ್ಧ ಒರಿಸ್ಸಾದ ಬಿಜೆಪಿ ಕಾರ್ಯಕ್ರಮವೊಂದರಲ್ಲಿ ಕಿಡಿಕಾರಿದ್ದರು. ಈ ವೇಳೆ ಲೋಕಸಭೆ ಚುನಾವಣೆಗೆ ಗೆಲ್ಲಲು ಕಾಂಗ್ರೆಸ್​​ ಪ್ರಣಾಳಿಕೆ ಬಿಡುಗಡೆ ಮಾಡಿದೆ. ಪ್ರಣಾಳಿಕೆಯಲ್ಲಿ ಕಾಂಗ್ರೆಸ್​​ ಅಧಿಕಾರಕ್ಕೆ ಬಂದಲ್ಲಿ ದೇಶದ ಬಡವರಿಗೆ ತಿಂಗಳಿಗೆ 6 ಸಾವಿರ ರೂಪಾಯಿ ಸಹಾಯಧನ ಮಾಡಲಿದ್ದೇವೆ. ‘ನ್ಯಾಯ ಯೋಜನೆ’ ಮೂಲಕ ಕಡುಬಡವರಿಗೆ ವಾರ್ಷಿಕ 72 ಸಾವಿರ ರೂಪಾಯಿ ಹಣ ಖಾತೆಗೆ ಜಮಾ ಮಾಡುವುದಾಗಿ ಹೇಳಿದೆ. ಚುನಾವಣೆ ಸಂದರ್ಭದಲ್ಲಿ ಮಾತ್ರ ಕಾಂಗ್ರೆಸ್ಸಿಗೆ ಬಡವರು ನೆನಪಾಗುತ್ತಾರೆ” ಎಂದು ಮೋದಿ ಲೇವಡಿ ಮಾಡಿದ್ದರು.

ಈಗಾಗಲೇ ಕಾಂಗ್ರೆಸ್​​ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಲ್ಲಿ ಈ ದೇಶದ ಬಡವರಿಗೆ ತಿಂಗಳಿಗೆ​​ 6 ಸಾವಿರ ರೂ. ಸಹಾಯಧನ ನೀಡುವುದಾಗಿ ಘೋಷಿಸಿದೆ. ಜೈಪುರದಲ್ಲಿ ಕಾಂಗ್ರೆಸ್​​ ರ‍್ಯಾಲಿ ಉದ್ದೇಶಿಸಿ ಮಾತನಾಡಿದ್ದ ಎಐಸಿಸಿ ಅಧ್ಯಕ್ಷ ರಾಹುಲ್​​ ಗಾಂಧಿಯವರು, ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೇ ಬಡವರಿಗೆ 6 ಸಾವಿರ ರೂ ತಿಂಗಳಿಗೆ ನೀಡುತ್ತೇವೆ. ಇದು ಬಡತನದ ವಿರುದ್ಧ ಸರ್ಜಿಕಲ್​​ ಸ್ಟ್ರೈಕ್ ಎಂದು​​ ಕರೆದಿದ್ದಾರೆ.

ನಮಗೆ ಮತಹಾಕಿ ಕಾಂಗ್ರೆಸ್​​ ಪಕ್ಷವನ್ನು ಕೇಂದ್ರದಲ್ಲಿ ಅಧಿಕಾರಕ್ಕೆ ತನ್ನಿ. ನಮ್ಮ ಸರ್ಕಾರ ಬಂದಲ್ಲಿ ಖಂಡಿತ ಬಡವರ ಪರ ಕೆಲಸ ಮಾಡಲಿದೆ. ಈಗಿನ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ರೈತರಿಗೆ ಕೇವಲ ವರ್ಷಕ್ಕೆ 6 ಸಾವಿರ ರೂ ಕೊಡುವ ಮೂಲಕ ಅನ್ನದಾತರಿಗೆ ಅವಮಾನ ಮಾಡುತ್ತಿದೆ. ನಾವು ರೈತ ಸಮುದಾಯದ ಪರ ನಿಲ್ಲುತ್ತೇವೆ ಎಂದಿದ್ದಾರೆ.

Comments are closed.