ರಾಷ್ಟ್ರೀಯ

ಬಿಜೆಪಿ ಗೆಲುವು ಖಚಿತ: ಚೈನಿಸ್ ಪರಿಕಲ್ಪನೆಯ ನೆರವಿನಿಂದ ಪ್ರಖ್ಯಾತ ಜ್ಯೋತಿಷಿ

Pinterest LinkedIn Tumblr


ನವದೆಹಲಿ : ಲೋಕಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಇದೇ ವೇಳೆ ಸೋಲು ಗೆಲುವಿನ ಚರ್ಚೆಗಳು ಜೋರಾಗಿದೆ.

ಇದೇ ಸಂದರ್ಭದಲ್ಲಿ ಹಲವು ಸಮೀಕ್ಷೆಗಳು, ಜ್ಯೋತಿಷಿಗಳು ಸೋಲು ಗೆಲುವಿನ ಬಗ್ಗೆ ಭವಿಷ್ಯ ನುಡಿಯುತ್ತಿದ್ದಾರೆ. ಇದೀಗ ಜ್ಯೋತಿಷಿ ಬೇಜಾನ್ ದರುವಾಲಾ ಲೋಕಸಭಾ ಚುನಾವಣೆಯ ಸೋಲು ಗೆಲುವಿನ ಕುರಿತು ಚೈನಿಸ್ ಪರಿಕಲ್ಪನೆಯ ನೆರವಿನಿಂದ ಭವಿಷ್ಯ ನುಡಿದಿದ್ದಾರೆ.

ಈ ಜ್ಯೋತಿಷ್ಯದ ಪ್ರಕಾರ ಮೋದಿ ಹುಲಿ ಸ್ಥಾನದಲ್ಲಿ ನಿಂತರೆ, ರಾಹುಲ್ ಕೊಂಚ ಕೆಳಗಿನ ಸ್ಥಾನದಲ್ಲಿರುತ್ತಾರೆ. ಆದ್ದರಿಂದ ಈ ಚುನಾವಣೆಯಲ್ಲಿ ಮೋದಿ ಗೆಲುವು ಖಚಿತ ಎಂದು ಹೇಳಿದ್ದಾರೆ.

ಲೋಕಸಭಾ ಚುನಾವಣೆಯಲ್ಲಿ ಮೋದಿ ಗೆಲುವಿನಿಂದ ಮುಂದೆ ಬಿಜೆಪಿ ಭವಿಷ್ಯವೂ ಪ್ರಜ್ವಲಿಸಲಿದೆ. ಎಂದು ಮಹಾ ಸಮರಕ್ಕೆ ಇನ್ನು ಕೆಲವೇ ದಿನಗಳಿರುವ ಈ ಸಂದರ್ಭದಲ್ಲಿ ಹೇಳಿದ್ದಾರೆ.

2019 ಲೋಕ ಮಹಾ ಸಮರದಲ್ಲಿ ರಾಹುಲ್ ಗಾಂಧಿ ನೇತೃತ್ವದ ಕಾಂಗ್ರೆಸ್ ಹಾಗೂ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ನಡುವೆ ಫೈಟ್ ನಡೆಯುತ್ತಿದ್ದು, ಇದರಲ್ಲಿ ಸ್ಥಳೀಯ ಪಕ್ಷಗಳೂ ಕೂಡ ಮಹತ್ವದ ಪಾತ್ರ ವಹಿಸುತ್ತಿವೆ. ಇದೇ ವೇಳೆ ಪ್ರಸಿದ್ಧ ಜ್ಯೋತಿಷಿ ದರುವಾಲಾ ಮೋದಿಯೇ ಮತ್ತೊಮ್ಮೆ ಎಂದು ಭವಿಷ್ಯ ನುಡಿದಿದ್ದಾರೆ.

Comments are closed.