ರಾಷ್ಟ್ರೀಯ

ಪಶ್ಚಿಮ ಬಂಗಾಳದ ಅಭಿವೃದ್ಧಿಗೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯೇ ಸ್ಪೀಡ್ ಬ್ರೇಕರ್ ಆಗಿದ್ದಾರೆ : ಮೋದಿ ಆರೋಪ

Pinterest LinkedIn Tumblr

ಸಿಲಿಗುರಿ: ಪಶ್ಚಿಮ ಬಂಗಾಳದ ಅಭಿವೃದ್ಧಿಗೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯೇ ಸ್ಪೀಡ್ ಬ್ರೇಕರ್ ಆಗಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದ್ದಾರೆ.

ಲೋಕಸಭಾ ಚುನಾವಣೆ ದಿನಾಂಕ ಘೋಷಣೆಯಾದ ಬಳಿಕ ಇದೇ ಮೊದಲ ಬಾರಿಗೆ ಪಶ್ಚಿಮ ಬಂಗಾಳದಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ, ರಾಜ್ಯದ ಅಭಿವೃದ್ಧಿ ವಿಷಯದಲ್ಲಿ ಮಮತಾ ಬ್ಯಾನರ್ಜಿಯೇ ಸ್ಪೀಡ್ ಬ್ರೇಕರ್ ಆಗಿದ್ದಾರೆ, ಆಯುಷ್ಮಾನ್ ಭಾರತ್ ಯೋಜನೆಯಿಂದ ಲಾಭ ಪಡೆಯುವುದಕ್ಕೆ ರಾಜ್ಯದ ಜನತೆಗೆ ಅವಕಾಶ ನೀಡಿಲ್ಲ ಎಂದು ಹೇಳಿದ್ದಾರೆ.

ಇದೇ ವೇಳೆ ಕಾಂಗ್ರೆಸ್ ಪ್ರಣಾಳಿಕೆ ಬಗ್ಗೆಯೂ ಮಾತನಾಡಿರುವ ನರೇಂದ್ರ ಮೋದಿ ಕಾಂಗ್ರೆಸ್ ನ ಪ್ರಣಾಳಿಗೆ ಸೇನೆಗೆ ನೀಡಲಾಗಿರುವ ವಿಶೇಷ ಅಧಿಕಾರವನ್ನು ಪರಿಶೀಲಿಸುವ ಮಾತನ್ನಾಡಿದೆ. ಸೇನೆಗೆ ನೀಡಲಾಗಿರುವ ವಿಶೇಷ ಅಧಿಕಾರ ಭಯೋತ್ಪಾದಕರ ವಿರುದ್ಧದ ಹೋರಾಟದಲ್ಲಿ ಸೇನೆಗೆ ರಕ್ಷಣಾ ಕವಚವಿದ್ದಂತೆ ಎಂದು ಮೋದಿ ಹೇಳಿದ್ದಾರೆ. ರಕ್ಷಣಾ ಪಡೆಗಳು ಅಸಹಾಯಕವಾಗುವುದನ್ನು ಕಾಂಗ್ರೆಸ್ ಬಯಸುತ್ತಿದೆ. ಸೇನಾಪಡೆಗಳ ಕೈ ಕಟ್ಟಿಹಾಕುವುದು ಕಾಂಗ್ರೆಸ್ ನ ಉದ್ದೇಶ, ಕಾಂಗ್ರೆಸ್ ಹಾಗೂ ಅದರ ಮಿತ್ರಪಕ್ಷಗಳು ಪಾಕಿಸ್ತಾನದ ಪರ ನಿಲುವು ಹೊಂದಿದ್ದಾರೆ ಎಂದು ಮೋದಿ ಆರೋಪಿಸಿದ್ದಾರೆ.

Comments are closed.