ರಾಷ್ಟ್ರೀಯ

ವಿಚ್ಛೇದನ ಪಡೆದು ಗ್ರ್ಯಾಂಡ್ ಫೋಟೋ ಶೂಟ್ ಮಾಡಿಸಿಕೊಂಡ ಮಹಿಳೆ

Pinterest LinkedIn Tumblr


ನವದೆಹಲಿ: ಪತಿಯಿಂದ ವಿಚ್ಛೇದನ ಪಡೆದುಕೊಂಡಿದ್ದ ಖುಷಿಯಲ್ಲಿ 47 ವರ್ಷದ ಮಹಿಳೆಯೊಬ್ಬರು ಗ್ರ್ಯಾಂಡ್ ಆಗಿ ಫೋಟೋ ಶೂಟ್ ಮಾಡಿಸಿಕೊಂಡಿದ್ದಾರೆ. ಅವರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿವೆ.

ಮೇರಿ ಲೋಲ್ಲಿಸ್ ತಮ್ಮ 13 ವರ್ಷಗಳ ವೈವಾಹಿಕ ಜೀವನದಿಂದ ಹೊರ ಬಂದಿದ್ದಾರೆ. ಅಷ್ಟೇ ಅಲ್ಲದೇ ವಿವಾಹದ ಫೋಟೋಗಳನ್ನು ಸುಟ್ಟುಹಾಕಿ ಪತಿಯ ಮೇಲಿನ ಕೋಪವನ್ನು ಹೊರಹಾಕಿದ್ದಾರೆ.

ಫೋಟೋ ಶೂಟ್ ಹೇಗಿದೆ?:
ಮೇರಿ ಲೋಲ್ಲಿಸ್ ವೈನ್ ಗ್ಲಾಸ್ ಹಿಡಿಕೊಂಡು, ಮರವನ್ನು ಹಿಡಿದು ನಿಂತ, ಮದುವೆಯ ದಾಖಲೆ ಇರುವ ಹಿಡಿದು, ನೀರಿನ ಸಮೀಪದಲ್ಲಿ ಕುಳಿತು, ಮದುವೆಯ ಫೋಟೋ ಸುಟ್ಟು ಹಾಕುತ್ತಿರುವ ದೃಶ್ಯಗಳನ್ನು ಫೋಟೋ ಶೂಟ್ ಮಾಡಿಸಿಕೊಂಡಿದ್ದಾರೆ.

ಈ ಫೋಟೋಗಳನ್ನು ನೋಡಿದ ಸಾವಿರಾರು ಮಹಿಳೆಯರು, ತಮ್ಮ ಪತಿಯೊಂದಿಗೆ ವಿಚ್ಛೆದನ ಪಡೆದುಕೊಳ್ಳಲು ಈ ಐಡಿಯಾ ಸ್ಫೂರ್ತಿದಾಯಕ ಎಂದು ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಮೇರಿ ಲೋಲ್ಲಿಸ್ ಅವರು, ಅತ್ಯಂತ ಕೆಟ್ಟ ಸಂಬಂಧದಿಂದ ಹೊರ ಬಂದ ಪ್ರಬಲ ಮಹಿಳೆಯರನ್ನು ನಾನು ಪ್ರತಿನಿಧಿಸುವ ಆಸೆ ಹೊಂದಿದ್ದೆ. ನಾನು ಮತ್ತೆ ಸಂತೋಷವಾಗಿರಲು ಇದು ಸರಿಯಾದ ನಿರ್ಧಾರವಾಗಿದೆ. ಜೀವನದಲ್ಲಿ ಕಳೆದು ಹೋದ ಅಧ್ಯಾಯವನ್ನು ಮರೆಯಲು ನನ್ನದೆಯಾದ ಮಾರ್ಗವನ್ನು ಅನುಸರಿಸಿದ್ದೇನೆ ಎಂದು ಫೋಟೋ ಶೂಟ್‍ಗೆ ಕಾರಣ ನೀಡಿದ್ದಾರೆ.

ಪತಿಯಿಂದ ವಿಚ್ಛೇದನ ಪಡೆದ ಮಹಿಳೆಯರು ಖುಷಿಯಾಗಿ ಜೀವನ ನಡೆಸಬೇಕು ಎನ್ನುವ ಸಂದೇಶವನ್ನು ಸಮಾಜಕ್ಕೆ ನೀಡಬೇಕಿತ್ತು. ಸಂಭ್ರಮದೊಂದಿಗೆ ಹಳೆಯ ನೆನಪುಗಳಿಂದ ಮರೆಯಬೇಕಿತ್ತು ಎಂದು ಮೇರಿ ಲೋಲ್ಲಿಸ್ ತಿಳಿಸಿದ್ದಾರೆ.

ನನ್ನ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತವೆ ಎಂದು ಭಾವಿಸಿರಲಿಲ್ಲ. ಇದು ಪ್ರಬಲ ಮಹಿಳೆಯ ನಿರ್ಧಾರವಾಗಿದ್ದರಿಂದ ಫೋಟೋಗಳು ಇಷ್ಟೊಂದು ವೈರಲ್ ಆಗಿವೆ ಎಂದು ಹೇಳಿದ್ದಾರೆ.

Comments are closed.